ಬರೊಬ್ಬರಿ 40 ಲಕ್ಷದ ಬಟ್ಟೆ ತೊಟ್ಟು ಶೋ ಅಲ್ಲಿ ಭಾಗವಹಿಸಿದ ಖ್ಯಾತ ನಟಿ

ಇತ್ತೀಚೆಗೆ ತಾನೇ ಇಸ್ರೇಲ್ ನಲ್ಲಿ 2021 ರ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಚಂಡೀಗಡದ 21 ವರ್ಷದ ಚೆಲುವೆ ಹರ್ನಾಜ್ ಸಂಧು ಅವರು ಮಿಸ್ ಯುನಿವರ್ಸ್ ಕಿರೀಟ ತೊಡುವ ಮೂಲಕ ವಿಜೇತರಾಗಿ ಭಾರತಕ್ಕೆ ಕಿರ್ತೀ ತಂದು ಕೊಟ್ಟಿದ್ದಾರೆ. ಈ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಹರ್ನಾಜ್ ಸಂಧು ಅವರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅನೇಕ ನಟ-ನಟಿಯರು ಗಣ್ಯರು ಭಾಗವಹಿಸಿದ್ದರು‌. 2015 ರಲ್ಲಿ ನಟಿ ಊರ್ವಶಿ ಕೂಡ ಈ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದೀಗ 2021 ರ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿಯೂ ಆಗಿದ್ದರು ಊರ್ವಶಿ ರೌಟೇಲಾ.

ಇನ್ನು ಇವರು ಗಮನಿಸಬೇಕಾದ ಸಂಗತಿ ಅಂದರೆ ಈ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯ ಅತ್ಯಂತ ಕಿರಿಯ ತೀರ್ಪುಗಾರರು ಎಂದು ಹೆಸರು ಇವರದ್ದಾಗಿದೆ. ಅದರಂತೆ ಈ ಪ್ರಶಸ್ತಿ ಸಮಾರಂಭದಲ್ಲಿ ವಿಶೇಷವಾಗಿ ಗಮನ ಸೆಳೆದದ್ದು ಮಾಡೆಲ್ ಕಮ್ ನಟಿ ಊರ್ವಶಿ ರೌಟೇಲಾ. ನಟಿ ಊರ್ವಶಿ ರೌಟೇಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ವಿಧ ವಿಧವಾದ ಆಕರ್ಷಕ ಶೈಲಿಯ ಉಡುಗೆ-ತೊಡುಗೆಗಳನ್ನ ತೊಟ್ಟು ಒಂದಷ್ಟು ಫೋಟೋ ಶೂಟ್ ಗಳನ್ನ ಮಾಡಿಸಿಕೊಂಡು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಅಂತೆಯೇ ಈ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ನಟಿ ಊರ್ವಶಿ ರೌಟೇಲಾ ಅವರು ಬರೋಬ್ಬರಿ ನಲವತ್ತು ಲಕ್ಷ. ರೂ ಮೌಲ್ಯದ ಉಡುಗೆ ತೊಟ್ಟು ಎಲ್ಲರ ದೃಷ್ಟಿ ನೆಟ್ಟುವಂತೆ ಕಾಣಿಸಿಕೊಂಡಿದ್ದಾರೆ. ಊರ್ವಶಿ ಅವರು ಕಪ್ಪು ಬಣ್ಣದ ನೆಟ್ ಡ್ರೆಸ್ ಧರಿಸಿ ಆಕರ್ಷಕವಾಗಿ ಕಾಣಿಸುತ್ತಿದ್ದರು. ಈ ಉಡುಗೆಯು ಹಾಲ್ಟರ್ ಡೀಪ್ ಡೀಪ್ ಬ್ಲ್ಯಾಕ್ ಸುಂದರವಾದ ಗೋಲ್ಡನ್ ವರ್ಕ್ ಮಾಡಲಾಗಿತ್ತು. ಇದರ ಜೊತೆಗೆ ಊರ್ವಶಿ ಅವರು ವಜ್ರದ ಕಿವಿಯೋಲೆ ಮತ್ತು ವಜ್ರದ ಉಂಗುರವನ್ನು ಧರಿಸಿದ್ದರು. ಒಟ್ಟಾರೆಯಾಗಿ ಈ ಮಿಸ್ ಯುನಿವರ್ಸ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಊರ್ವಶಿ ಅವರು ಸಖತ್ತಾಗಿಯೇ ಮಿಂಚುತ್ತಿದ್ದರು. ಕಾರ್ಯಕ್ರಮದಲ್ಲಿ ಮಿಂಚಿದ ಅವರ ಒಂದಷ್ಟು ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

%d bloggers like this: