ಬರೋಬ್ಬರಿ 400 ವರ್ಷದ ನಂತರ ಶನಿ ಮತ್ತು ಗುರು ಗ್ರಹ ಸಮಾಗಮ, ಈ 5 ರಾಶಿಯವರ ಮೇಲೆ ಪರಿಣಾಮಕಾರಿ

ಬರೋಬ್ಬರಿ 400 ವರ್ಷಗಳ ನಂತರ ವಿಶೇಷವಾಗಿ ಗುರು ಮತ್ತು ಶನಿಗ್ರಹವು ಸಮಾಗಮವಾಗುತ್ತಿದೆ. ಈ ಗ್ರಹಗಳು ನೈರುತ್ಯ ಭಾಗದಲ್ಲಿ ಈ ಜೋಡಿ ಗ್ರಹಗಳು ದರ್ಶನ ನೀಡುತ್ತದೆ. ಉತ್ತರಾಷಡ ನಕ್ಷತ್ರದ ಮೂರನೇಯ ಪಾದದಲ್ಲಿ ಈ ಗುರು ಮತ್ತು ಶನಿ ಗ್ರಹಗಳು ಏಕಕಾಲದಲ್ಲಿ ಸಂಧಿಸಲಿವೆ. ಈ ಗುರುಗ್ರಹದ ಜೊತೆಗೆ ಸಂಗಮವಾಗುತ್ತಿರುವ ಶನಿಯು ವಾಯು ತತ್ವದ ಅಧಿಪತಿಯಾಗಿದ್ದರೆ, ಆಕಾಶದ ಅಧಿಪತಿಯಾಗಿ ಗುರುಗ್ರಹವು ಪ್ರಭಾವ ಬೀರಲಿದೆ. ಈ ಗ್ರಹಗಳ ಪ್ರಭಾವದಿಂದಾಗಿ ಅಗ್ನಿಯ ಪರಿಣಾಮ ಹೆಚ್ಚಾಗಿ ಉತ್ತರ, ಪಶ್ಚಿಮದಲ್ಲಿ ಶೀತಗಾಳಿ ಬೀಸುವಂತಹ ವಾತಾವರಣದ ಜೊತೆಗೆ ಸಮುದ್ರಗಳ ಮೊರೆತ ಹೆಚ್ಚಾಗಿ ಸೈಕ್ಲೋನ್ ಭೀತಿ ಕಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಗ್ರಹಗಳು ಮಕರ ರಾಶಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಆದ್ದರಿಂದ ಈ ರಾಶಿಯವರು ಕೊಂಚ ಆರೋಗ್ಯದಲ್ಲಿ ಎಚ್ಚರ ವಹಿಸಬೇಕು, ಇನ್ನ ಗ್ರಹಗಳ ಗ್ರಹಚಾರದಿಂದಾಗಿ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ರಾಜಕೀಯದಲ್ಲಿ ಇರುವವರ ಅಧಿಕಾರ ಬದಲಾಗಿ ಅಧಿಕಾರ ಪದವಿ ಸ್ಥಾನಕ್ಕಾಗಿ ಕಚ್ಚಾಟ ಆರಂಭವಾಗುತ್ತದೆ. ಇನ್ನು ಈ ಗ್ರಹಗಳು ಧರ್ಮ ಕರ್ಮ ಆಧಾರಿತವಾಗಿ ಪ್ರಭಾವ ಬೀರುತ್ತವೆ. ಇನ್ನು ನಿಮ್ಮ ಜಾತಕದಲ್ಲಿ ಗುರುಬಲ ಇಲ್ಲದೆ ಹೋದರೆ ಈ ಗ್ರಹಗಳಿಂದಾಗಿ ರಾಶಿ ಚಕ್ರಗಳಲ್ಲಿ ಭಾರಿ ಬದಲಾವಣೆ ಕಾಣಲಿದೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ರೀತಿಯ ಫಲಾಫಲಗಳನ್ನು ನೋಡಬಹುದಾಗಿದೆ.

ಮೀನ ರಾಶಿಯವರಗೆ ಈ ಗ್ರಹಗಳ ಸಂಗಮದಿಂದಾಗಿ ನೀವು ನಾಸ್ತಿಕರಾಗಿದ್ದಲ್ಲಿ ನಿಮ್ಮಲ್ಲಿ ದೈವ ಭಕ್ತಿ ಉಂಟಾಗುತ್ತದೆ. ದೇವತಾ ಕಾರ್ಯಗಳನ್ನು ಕೈ ಗೊಳ್ಳುವುದರ ಜೊತೆಗೆ ಪುಣ್ಯ ಕ್ಷೇತ್ರಗಳ ದರ್ಶನ ಪಡೆಯುವ ಅವಕಾಶ ಇದೆ. ಆದಷ್ಟು ನಿಮ್ಮ ಕೋಪ ತಾಪಗಳನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದು ಒಳ್ಳೆಯದು. ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಯಿದೆ. ನಿಮ್ಮ ನಿರ್ಧಾರಗಳಿಗೆ ಮನ್ನಣೆ ದೊರೆತು ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.

ವೃಷಭ ರಾಶಿಯವರ ಜಾತಕದಲ್ಲಿ ಈ ಗುರು ಶನಿ ಗ್ರಹಗಳ ಸಂಗಮದಂದಾಗಿ ಕೆಡುಕುಗಳಾಗುವ ಸಾಧ್ಯತೆ ಇರುವುದರಿಂದ ತಕ್ಷಣದಲ್ಲಿ ಆತುರವಾಗಿ ನಿರ್ಧಾರ ತೆಗೆದುಕೊಳ್ಳಬೇಡಿ, ನಿಮ್ಮ ಎಲ್ಲಾ ಕನಸುಗಳು ಸಾಕಾರವಾಗುತ್ತವೆ. ಮಿಥುನ ರಾಶಿಯವರಿಗೆ ಈ ಕಲೆ, ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉನ್ನತ ಸ್ಥಾನ ಮಾನಗಳು ಲಭಿಸುತ್ತವೆ. ವಿದೇಶಿ ಪ್ರಯಾಣ ಪ್ರವಾಸ ಅವಕಾಶವಿದೆ.ಪ್ರಯಾಣದಲ್ಲಿ ಜಾಗೃತವಾಗಿರಿ.

ಕರ್ಕಾಟಕ ರಾಶಿಯವರಿಗೆ ಆಧ್ಯಾತ್ಮದಲ್ಲಿ ಸೆಳೆತ ವುಂಟಾಗುತ್ತದೆ. ಆದರೆ ಮಾನಸಿಕ ಇರಿಸು ಮುರಿಸು ಆಗುವ ಸಾಧ್ಯತೆಯಿದೆ, ಸಿಂಹ ರಾಶಿಯವರಿಗೆ ದೇವತಾ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ಆದಷ್ಟು ತಮ್ಮ ಮಾತಿನ ಬಗ್ಗೆ ಹಿಡಿತವಿಟ್ಟುಕೊಳ್ಳಬೇಕು. ಆದಷ್ಟು ನಿಮ್ಮ ಕೋಪ ತಾಪವನ್ನು ನಿಯಂತ್ರಿಸಿ ಕೊಳ್ಳುವುದು ಉತ್ತಮವಾಗಿರುತ್ತದೆ.

%d bloggers like this: