500 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ರಾಮಾಯಣ ಆಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ ಈ ನಟ

ಟಾಲಿವುಡ್ ಪ್ರಿನ್ಸ್ ಎಂದೇ ಖ್ಯಾತಿಯಾಗಿರುವ ಮಹೇಶ್ ಬಾಬು ಅವರು ತೆಲುಗು ಸಿನಿಮಾ ರಂಗದ ಟಾಪ್ ನಟರಲ್ಲಿ ಒಬ್ಬರು. ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಸುದ್ದಿಯಲ್ಲಿವೆ. ಎಲ್ಲ ಟಾಪ್ ನಟರ ಸಿನಿಮಾಗಳು ತಮ್ಮ ಭಾಷೆಗಳಲ್ಲಿ ಅಲ್ಲದೇ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವುದು ಈಗಿನ ನಟರ ಕನಸಾದರೆ, ಮಹೇಶ್ ಬಾಬು ಅವರು ಡೈರೆಕ್ಟ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಹೌದು ಇಷ್ಟು ದಿನ ಮಹೇಶ್ ಬಾಬು ಅವರ ಕೆಲವೊಂದು ಸಿನಿಮಾಗಳು ಹಿಂದಿಗೆ ಡಬ್ ಆಗುತ್ತಿದ್ದವು. ಆದರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಮಹೇಶ್ ಬಾಬು ಅವರು ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಆದರೆ ಮಹೇಶ್ ಬಾಬು ಅವರಿಗೆ ಡೈರೆಕ್ಟ್ ಪ್ರಮೋಷನ್ ಎಂಬಂತೆ ಬಾಲಿವುಡ್ ಆಫರ್ ಒಂದು ಬಂದಿದೆ.

ಇತ್ತೀಚಿಗೆ ಪೌರಾಣಿಕ ಚಿತ್ರಗಳು ಜಾಸ್ತಿ ಜನರನ್ನು ಆಕರ್ಷಸುತ್ತಿವೆ. ಹೀಗಾಗಿ ಪೌರಾಣಿಕ ಕಥೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ನಿರ್ದೇಶಕ ಮಿತೇಶ್ ತಿವಾರಿ ಅವರು ರಾಮಾಯಣವನ್ನು ಚಿತ್ರದ ರೂಪದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಅವರ ಪಾತ್ರಕ್ಕೆ ಮಹೇಶ್ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಆದರೆ ಸಿನಿಮಾದಲ್ಲಿ ರಾಮನ ಪಾತ್ರಕ್ಕಾಗಿ ಇಬ್ಬರು ನಟರನ್ನು ಚಿತ್ರತಂಡ ಅಪ್ರೋಜ್ ಮಾಡಲಾಗಿದೆ ಎಂದು ಕೇಳಿ ಬರುತ್ತಿದೆ. ಮಹೇಶ್ ಬಾಬು ಅವರ ಜೊತೆಗೆ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಕೂಡ ಈ ಲಿಸ್ಟ್ ನಲ್ಲಿಡಲಾಗಿದೆ. ರಣಬೀರ್ ಕಪೂರ್ ಅವರು ಕೂಡ ಈ ಚಿತ್ರದ ಸ್ಕ್ರಿಪ್ಟ್ ಕೇಳಿದ್ದಾರಂತೆ.

ಹೀಗಾಗಿ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರವನ್ನು ಯಾವ ನಟ ನಿಭಾಯಿಸಲಿದ್ದಾರೆ ಎಂಬುದು ನಿರ್ಧಾರವಾಗಿಲ್ಲ. ಆದರೆ ಮಹೇಶ್ ಬಾಬು ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿರುವುದು ಸುದ್ದಿಯಲ್ಲಿದೆ. ಸದ್ಯಕ್ಕೆ ಇನ್ನೂ ಅತಿ ಹೆಚ್ಚು ಸುದ್ದಿಯಲ್ಲಿರುವ ವಿಚಾರ ಎಂದರೆ ಈ ಚಿತ್ರದ ಬಂಡವಾಳ. ಹೌದು ಇತ್ತೀಚೆಗೆ ಯಾವುದೇ ಸಿನಿಮಾದ ಬಗ್ಗೆ ಕೇಳಿದರೂ ಕೂಡ ಆ ಚಿತ್ರದ ಬಜೆಟ್ ನೂರು ಕೋಟಿಗಿಂತ ಹೆಚ್ಚಾಗಿರುತ್ತದೆ. ನಟರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಪುಷ್ಪ ಸಿನಿಮಾದ ಬಳಿಕ ನಟ ಅಲ್ಲು ಅರ್ಜುನ್ ಅವರ ಒಂದು ಚಿತ್ರದ ಸಂಭಾವನೆ ನೂರು ಕೋಟಿ ರೂಪಾಯಿ.

ಇನ್ನು ಪುಷ್ಪ 2 ಚಿತ್ರಕ್ಕಾಗಿ ಅಲ್ಲೂ ಅರ್ಜುನ್ ಅವರಿಗೆ 400 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎನ್ನಲಾಗಿದೆ. ನಟಿ ಅನುಷ್ಕಾ ಶರ್ಮಾ ಅವರಿಗೆ ಒಟಿಟಿಯಿಂದ 400 ಕೋಟಿ ಆಫರ್ ನೀಡಲಾಗಿದೆ. ಇದೀಗ ಈ ಸಾಲಿಗೆ ನಟ ಮಹೇಶ್ ಬಾಬು ಕೂಡ ಸೇರಿದ್ದಾರೆ. ಹೌದು ರಾಮಾಯಣ ಚಿತ್ರಕ್ಕಾಗಿ ಈ ಚಿತ್ರತಂಡ ಬರೋಬ್ಬರಿ 500 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಮಹೇಶ್ ಬಾಬು ಅವರ ರಾಮನ ಲುಕ್ ಗಾಗಿ ಹೆಚ್ಚಿನ ಬಜೆಟ್ ನಿಗದಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

%d bloggers like this: