ಬರೊಬ್ಬರಿ 500 ಕೋಟಿ ಬಜೆಟ್, ಹತ್ತಾರು ಭಾಷೆಗಳು, ಇಪ್ಪತ್ತು ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಈ ಚಿತ್ರ

ಹೌದು ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದಂತಹ ಬಾಹುಬಲಿ ಸಿನಿಮಾ ಮಾಡಿದ ದಾಖಲೆ ಒಂದೆರಡಲ್ಲ. ಈ ಬಾಹುಬಲಿ ಸಿನಿಮಾದಲ್ಲಿನ ದೃಶ್ಯ ವೈಭವ ಕಂಡು ಹಾಲಿವುಡ್ ಚಿತ್ರರಂಗ ಕೂಡ ಒಮ್ಮೆಲೆ ನಿಬ್ಬೆರಗಾಗಿತ್ತು. ಇದೊಂದು ಕಡೆಯಾದರೆ ಈ ಬಾಹುಬಲಿ ಸಿನಿಮಾದ ಕಥಾ ನಾಯಕನಾಗಿ ಕಾಣಿಸಿಕೊಂಡ ದೈತ್ಯ ಪ್ರತಿಭೆ ನಟ ಪ್ರಭಾಸ್ ಅವರ ಅಮೋಘ ಅಭಿನಯ ಕಂಡು ವರ್ಲ್ಡ್ ವೈಡ್ ಅಪಾರ ಪ್ರಶಂಸೆ ವ್ಯಕ್ತವಾಯಿತು. ಈ ಬಾಹುಬಲಿ ಸರಣಿ ಮುಂದುವರಿದು ಬಾಹುಬಲಿ ಪಾರ್ಟ್2 ಕೂಡ ಭಾರಿ ಸೌಂಡ್ ಮಾಡಿ ದಾಖಲೆ ಮಟ್ಟದ ಕಲೆಕ್ಷನ್ ಮಾಡಿತು. ಇದಾದ ಬಳಿಕ ನಟ ಪ್ರಭಾಸ್ ಅವರು ಸಿನಿಮಾವೊಂದಕ್ಕೆ ಹತ್ತರಿಂದ ಇಪ್ಪತ್ತು ಕೋಟಿ ಸಂಭಾವನೆ ಪಡೆಯುತ್ತಿದ್ದರು.

ಬಾಹುಬಲಿ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ನಟ ಪ್ರಭಾಸ್ ಅವರಿಗೆ ಹಿಂದಿ ಸಿನಿಮಾಗಳಲ್ಲಿಯೂ ಕೂಡ ಭರ್ಜರಿ ಬೇಡಿಕೆ ಉಂಟಾಯಿತು. ಅದರಂತೆ ಸಾಹೋ ಎಂಬ ಹಿಂದಿ ಸಿನಿಮಾ ಮಾಡಿದರು ಪ್ರಭಾಸ್. ಆದರೆ ನಟ ಪ್ರಭಾಸ್ ಅಭಿನಯದ ಮೊದಲ ಹಿಂದಿ ಸಿನಿಮಾ ಸಾಹೋ ಮಕಾಡೆ ಮಲಗಿತು. ಸಾಹೋ ಸಿನಿಮಾ ಸೋತರು ಕೂಡ ನಟ ಪ್ರಭಾಸ್ ಅವರಿಗೆ ಬೇಡಿಕೆ ಮಾತ್ರ ಕುಸಿಯಲಿಲ್ಲ. ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನದ ಸಲಾರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯುತ್ತಿವೆ. ಇದರ ಜೊತೆಗೆ ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವುತ್ ನಿರ್ದೇಶನ ಮಾಡಿರುವ ಪೌರಾಣಿಕ ಸಿನಿಮಾ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.

ಈ ರಾಮನ ಪಾತ್ರಕ್ಕಾಗಿ ನಟ ಪ್ರಭಾಸ್ ಅವರು ಬರೋಬ್ಬರಿ 150 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆ ಆದಿಪುರುಷ್ ಸಿನಿಮಾ ಬರೋಬ್ಬರಿ ಐನೂರು ಕೋಟಿ ಬಜೆಟ್ ಆಗಿರುವುದರಿಂದ ಭಾರಿ ದೊಡ್ಡ ಪ್ರಮಾಣದಲ್ಲಿಯೇ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಸಿದ್ದ ನಿರ್ಮಾಣ ಸಂಸ್ಥೆಯಾಗಿರುವ ಟೀ ಸೀರಿಸ್ ನಿರ್ಮಾಣ ಸಂಸ್ಥೆಯಡಿ ನಿರ್ಮಾಪಕರಾದ ಭೂಷಣ್ ಕುಮಾರ್ ನಿರ್ಮಿಸಿರುವ ಐನೂರು ಕೋಟಿ ವೆಚ್ಚದ ಆದಿಪುರುಷ್ ಸಿನಿಮಾವನ್ನು ಹಿಂದಿ, ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಭೋಜ್ ಪುರಿ, ಮರಾಠಿ ಹೀಗೆ ದೇಶದ ವಿವಿಧ ರಾಜ್ಯಗಳ ಪ್ರಾದೇಶಿಕ ಭಾಶೆಗೆ ಡಬ್ ಮಾಡಿ ಸರಿ ಸುಮಾರು ಇಪ್ಪತ್ತು ಸಾವಿರ ಪರದೆಯಲ್ಲಿ ರಿಲೀಸ್ ಮಾಡುವ ಬೃಹತ್ ಕನಸು ಹೊತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಅಂದರೆ ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ಅವರಿಗೆ ವರ್ಲ್ಡ್ ವೈಡ್ ಭಾರಿ ಪ್ರಮಾಣದ ಅಭಿಮಾನಿಗಳಿದ್ದಾರೆ. ಈ ಒಂದು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದು ಆದಿಪುರುಷ್ ಸಿನಿಮಾ ತಂಡದ ಯೋಜನೆಯಾಗಿದೆ. ಇದೆಲ್ಲದರ ನಡುವೆ ನಟ ಪ್ರಭಾಸ್ ಅವರು ತೆಲುಗಿನ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಅವರೊಟ್ಟಿಗೆ ಸಿನಿಮಾ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ‌. ಜೊತೆಗೆ ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾದಲ್ಲಿಯೂ ಕೂಡ ನಟ ಪ್ರಭಾಸ್ ನಟಿಸಲಿದ್ದಾರೆ. ಒಟ್ಟಾರೆಯಾಗಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಮಾಡುತ್ತಿರುವ ಸಿನಿಮಾಗಳು ಎಲ್ಲಾವು ಇನ್ನೂರು ಮುನ್ನೂರು ಕೋಟಿಯ ಬಿಗ್ ಬಜೆಟ್ ಸಿನಿಮಾಗಳಾಗಿದ್ದು ತಮ್ಮ ಸಂಭಾವನೆಯನ್ನ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿಕೊಳ್ಳುವ ಮೂಲಕ ದುಬಾರಿ ನಟ ಎನಿಸಿಕೊಳ್ಳುತ್ತಿದ್ದಾರೆ.

%d bloggers like this: