ಬರೋಬ್ಬರಿ 7 ಕೋಟಿ ಬೆಲೆಯ ರೋಲ್ಸ್ ರೊಯ್ಸ್ ಕಾರು ಖರೀದಿಸಿದ ಟಿವಿ ನಿರೂಪಕಿ

ಅಮೇರಿಕಾದ ಟಿವಿ ನಿರೂಪಕಿರೊಬ್ಬರು ದುಬಾರಿ ಬೆಲೆಯ ಐಷರಾಮಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಘೋಷ್ ಕಾರನ್ನು ಖರೀದಿ ಮಾಡಿರಿವುದು ಎಲ್ಲಾ ಸಿನಿ ಮತ್ತು ಉದ್ಯಮದ ದಿಗ್ಗಜರು ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು ಅಬ್ಬಬ್ಬಾ ಅಂದರೆ ಟಿವಿ ನಿರೂಪಕರು ಚೆಂದದಾದ ಒಂದು ಪ್ಲಾಟ್, ಓಡಾಡಲು ಆರಾಮದಾಯಕ ಒಂದು ಹೀಗೆ ಕಾರು ಹೀಗೆ ಅಡಂಬರ ಅಬ್ಬರವಾಗಿರದ ಜೀವನ ನಡೆಸಬಹುದು. ಐಷರಾಮಿ ಜೀವನವನ್ನು ನೋಡದೆ ಇರುವ ನಿರೂಪಕರು ಸಹ ನಮ್ಮಲ್ಲಿ ಇದ್ದಾರೆ ಆದರೆ ಜಗತ್ತಿನ ಟಾಪ್ ಶ್ರೀಮಂತರು ಖರೀದಿಸು ವಂತಯಹ ರೋಲ್ಸ್ ರಾಯ್ಸ್ ಘೋಷ್ ಕಾರನ್ನು ಒಬ್ಬ ನಿರೂಪಕಿ ಖರಿದೀಸಿರುವುದು ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದೆ.

ಅದರಲ್ಲೂ ಕ್ರಿಸ್ ಜೆನ್ನರ್ ಅವರು ಈ ಕಾರನ್ನು ಖರೀದಿಸಿದ ಅಮೇರಿಕದ ಮೊದಲಿಗರು ಎಂಬ ಹೆಗ್ಗಳಿಕೆಯಾಗಿದೆ. ಆದ್ದರಿಂದಲೇ ಕ್ರಿಸ್ ಜೆನ್ನರ್ ಅವರು ಅಮೇರಿಕಾದಲ್ಲಿ ಹೆಚ್ಛು ಸುದ್ದಿಯಲ್ಲಿದ್ದಾರೆ. ಅಮೇರಿಕಾದ ದಿಗ್ಗಜರೆಲ್ಲಾ ಈ ನಿರೂಪಕಿಯ ಬಗ್ಗೆ ತಿಳಿಯಲು ಉತ್ಸುಕ ರಾಗಿದ್ದಾರೆ ಎನ್ನಲಾಗಿದೆ. ಕೆಲ ಭಾರತೀಯರು ಈ ರೋಲ್ಸ್ ರಾಯ್ಸ್ ಘೋಷ್ ಕಾರನ್ನು ಸ್ವಲ್ಪ ದಿನಗಳಲ್ಲಿಯೇ ಖರೀದಿ ಮಾಡಬಹುದಾಗಿದ್ಧು ಇಂತಹ ಸಮಯದಲ್ಲಿ ಕ್ರಿಸ್ ಜೆನ್ನರ್ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. ಇವರ ಬಳಿ ಇಂತಹ ಅನೇಕ ದುಬಾರಿ ಐಷರಾಮಿ ಕಾರುಗಳಿರುವುದು ವಿಶೇಷವಾಗಿದೆ.

ಇವರು ರೋಲ್ಸ್ ರಾಯ್ಸ್ ನ ಮೆಟಲ್ ಬ್ಲ್ಯಾಕ್ ಬಣ್ಣದ ಕಾರನ್ನು ಖರೀದಿಸಿ ಇದರ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿ ಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಇನ್ನು ಈ ರೋಲ್ಸ್ ರಾಯ್ಸ್ ಘೋಷ್ 2021ಕಾರಿನ ವೈಶಿಷ್ಟ್ಯತೆಗಳನ್ನು ಗಮನಿಸುವುದಾದರೆ 6.75 ಲೀಟರಿನ ಟ್ವಿನ್ ಟ್ರೋ ಚಾರ್ಚ್ಡ್ ವಿ12 ಪೆಟ್ರೋಲ್ ಇಂಜಿನ್ ಒಳಗೊಂಡಿದೆ. ಈ ಕಾರಿನ ಇಂಜಿನ್ 563 BHp ಪವರ್ ಮತ್ತು 850 ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ವಿನೂತನ ಈ ರೋಲ್ಸ್ ರಾಯ್ಸ್ ಘೋಷ್ ಕಾರು 4ವ್ಹೀಲ್ ಡ್ರೈವ್ ಹೊಂದಿರುವುದು ಗಮನಾರ್ಹವಾಗಿದೆ.

ಈ ನೂತನ ರೋಲ್ಸ್ ರಾಯ್ಸ್ ಕಾರಾನಲ್ಲಿ ಯಾಂತ್ರಿಕವಾಗಿ ಹೈಟ್ ಅಡ್ಜಸ್ಟಬಲ್ ಏರ್ ಸಸ್ಪೆಂಷನ್ ನೀಡಲಾಗಿದ್ದು, ಸ್ಯಾಟಲೈಟ್ ಟ್ರಾನ್ಸ್ ಮಿಷನ್ ಸಿಸ್ಟಮ್ ಅಳವಡಿಸಲಾಗಿದೆ. ಇದರಿಂದಾಗಿ ಜಿಪಿಎಸ್ ಗೇರ್ ಚೇಂಜ್ ಮಾಡುವ ಮೂಲಕ ಉಬ್ಬು ರಸ್ತೆಯಲ್ಲಿ ಆಗುವ ಅನುಭವವನ್ನು ನಿಡುವುದಿಲ್ಲ. ಇದು ನೀರಿನ ಮೇಲೆ ಪ್ರಯಾಣಿಸುವಾಗ ಆಗುವ ಮೃದು ಸರಾಗವಾದ ಪ್ರಯಾಣ ಅನುಭವ ನೀಡುತ್ತದೆ. ಮತ್ತೊಂದು ವಿಶೇಷ ಅಂದರೆ ಈ ರೋಲ್ಸ್ ರಾಯ್ಸ್ ಕಾರು ತುಂಬಾ ಅಡ್ವಾನ್ಸ್ ಅಪ್ಡೇಟ್ ವುಳ್ಳ ಕಾರ್ ಅಗಿದೆ. ಕಾರಣ ಈ ಕಾರು ಮುಂಬರುವ ರಸ್ತೆ ಸರಿಯಿಲ್ಲದಿದ್ದರೆ ಸೂಚನೆ ನೀಡುವಂತಹ ತಂತ್ರಜ್ಞಾನ ಈ ನೂತನ ರೋಲ್ಸ್ ರಾಯ್ಸ್ ಕಾರಿನಲ್ಲಿ ನೋಡಬಹುದಾಗಿದ್ದು ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳ ಮಾಲೀಕರು ಈ ರೋಲ್ಸ್ ರಾಯ್ಸ್ ಘೋಷ್ ಕಾರನ್ನು ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

%d bloggers like this: