ಬರೋಬ್ಬರಿ 8 ವರ್ಷಗಳ ನಂತರ ಕ್ರಿಕೆಟಿಗೆ ಎಸ್ ಶ್ರೀಶಾಂತ್ ಎಂಟ್ರಿ, ಆದರೆ ಮೊದಲ ಪಂದ್ಯದಲ್ಲೇ

ಕಮ್ ಬ್ಯಾಕ್ ಆಗಿ ಕ್ರಿಕೆಟ್ ಲೋಕಕ್ಕೆ ಮತ್ತೆ ಶ್ರೀಶಾಂತ್ ಹೆಜ್ಜೆ ಇಟ್ಟಿದ್ದಾರೆ, ಬರೋಬ್ಬರಿ ಎಂಟು ವರ್ಷಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಮ್ಯಾಚ್ ನಲ್ಲಿ ಕಾಣಿಸಿಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ರೇಜ಼್ ಹೆಚ್ಚಾಗಿದೆ. ಜನವರಿ ಹತ್ತನೇ ತಾರೀಖಿನಿಂದ ನಡೆಯುವ ಸೈಯದ್ ಮುಫ್ತಾಕ್ ಅಲಿ ಟಿಟ್ವೆಂಟಿ ಟೂರ್ನಿಯಲ್ಲಿ ಕೇರಳ ತಂಡದ ಪರವಾಗಿ ಶ್ರೀಶಾಂತ್ ಆಟವಾಡಲಿದ್ದಾರೆ. 2013ರ ಐಪಿಎಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಿಸಿಸಿಐ ಇವರನ್ನು ಕ್ರಿಕೆಟ್ ಪಂದ್ಯಗಳಿಂದ ಕಿತ್ತೊಗೆದಿತ್ತು‌, ಇದೀಗ ಕೋರ್ಟನಲ್ಲಿ ಕ್ಲೀನ್ ಚಿಟ್ ನೀಡಿದ್ದು ಫಿಕ್ಸಿಂಗ್ ಆರೋಪದಿಂದ ದೋಷ ಮುಕ್ತರಾಗಿದ್ದಾರೆ. ಇದರ ಸೈಯದ್ ಮೀಫ್ತಾಕ್ ಅಲಿ
ಟೂರ್ನಿ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಭಾಗವಹಿಸಲು ಅಭ್ಯಾಸ ಮಾಡುತ್ತಿರುವ ದೃಶ್ಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೇರಳ ತಂಡದ ಪರವಾಗಿ ಆಟವಾಡಲು ಅಭ್ಯಾಸದಲ್ಲಿ ನಿರತರಾಗಿದ್ದ ಶ್ರೀಶಾಂತ್ ಮತ್ತೆ ತನ್ನ ವರಸೆಯನ್ನು ತೋರಿಸಿದ್ದಾರೆ. ಆಟದಲ್ಲಿ ಯಾವುದೋ ಕಾರಣಕ್ಕೆ ಕೋಪಗೊಂಡ ವೇಗಿ ಶ್ರೀಶಾಂತ್ ಬ್ಯಾಟ್ಸ್ ಮನ್ ನನ್ನು ಸ್ಲೆಡ್ಜ್ ಮಾಡಿದ್ದಾರೆ.

ಯಂಗ್ ಅಂಡ್ ಎನರ್ಜೆಟಿಕ್ ಆಗಿರುವ ಶ್ರೀಶಾಂತ್ ತವರು ರಾಜ್ಯ ಕೇರಳ ರಾಜ್ಯದ ಪರವಾಗಿ ಪಂದ್ಯವಾಡಲಿದ್ದಾರೆ, ಈ ಟಿ ಟ್ವೆಂಟಿ ಟೂರ್ನಿಯಲ್ಲಿ ಸಂಜು ಸ್ಯಾಮಸನ್ ತಂಡದ ನಾಯಕರಾಗಿದ್ದಾರೆ. ತಂಡದಲ್ಲಿ ಶ್ರೀಶಾಂತ್ ಸೇರಿ ರಾಬಿನ್ ಉತ್ತಪ್ಪ, ಜಲಜಾ ಸಕ್ಸೇನಾ, ವಿಷ್ಣುವಿನೋದ್, ಕೆಎಂ ಆಸಿಫ್ ಮತ್ತು ಇತರರು ಪಂದ್ಯದಲ್ಲಿ ಭಾಗವಹಿಸುತ್ತಾರೆ‌. ಶ್ರೀಶಾಂತ್ ತಮಗೆ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅವಕಾಶ ಪಡೆಯಲು ಈ ಟೂರ್ನಿಯ ಪಂದ್ಯಾವಳಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಾಗಿದೆ. ಇನ್ನು ಶ್ರೀಶಾಂತ್ ಭಾರತದ ಪರ 27 ಟೆಸ್ಟ್ 53 ಏಕದಿನ ಪಂದ್ಯ ಆಡಿದ್ದಾರೆ. ಟಿಟ್ವೆಂಟಿ ಪಂದ್ಯವಳಿಯಲ್ಲಿ ಸುಮಾರು ಹತ್ತು ಪಂದ್ಯಗಳನ್ನು ಆಡಲೇ ಬೇಕಾಗಿರುತ್ತದೆ‌. ಶ್ರೀಶಾಂತ್ ಭಾರತದ ಪರ ಆಡಿದ್ದು 2011ರ ವಿಶ್ವಕಪ್ ಪಂದ್ಯದಲ್ಲಿ ಎನ್ನಬಹುದಾಗಿದೆ‌.

%d bloggers like this: