ಬರೊಬ್ಬರಿ 800 ಯಶಸ್ವಿ ಸಂಚಿಕೆಗಳನ್ನು ಪೂರೈಸಿದ ಕನ್ನಡದ ಪ್ರಸಿದ್ಧ ಧಾರಾವಾಹಿ

ಕನ್ನಡ ಕಿರುತೆರೆಯ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಗಟ್ಟಿ ಮೇಳ ಧಾರಾವಾಹಿ ಇದೀಗ ಬರೋಬ್ಬರಿ ಎಂಟು ನೂರು ಎಪಿಸೋಡ್ ಯಶಸ್ವಿಯಾಗಿ ಪೂರೈಸಿದೆ. ಎಂಟುನೂರು ಎಪಿಸೋಡ್ ಪೂರೈಸಿದ ಹಿನ್ನೆಲೆ ಇಡೀ ಗಟ್ಟಿಮೇಳ ಧಾರಾವಾಹಿ ತಂಡ ಸಂಭ್ರಮಾಚಾರಣೆ ಮಾಡಿಕೊಂಡಿದೆ. ಕನ್ನಡ ಸಿನಿಮಾ ಮತ್ತು ಕಿರುತೆರೆಗೆ ಡಬ್ಬಿಂಗ್ ವಕ್ಕರಿಸಿರುವ ಕಾರಣ ಕನ್ನಡ ವಾಹಿನಿಗಳಲ್ಲಿ ಹಿಂದಿ, ಮರಾಠಿ ಪರಭಾಷಾ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆಗುತ್ತಿವೆ. ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕನ್ನಡ ಧಾರಾವಾಹಿಗಳಿಗೆ ಹೊಡೆತ ಬಿದ್ದಿದೆ. ಜೊತೆಗೆ ಕಠಿಣ ಸ್ಪರ್ಧೆ ಕೂಡ ಏರ್ಪಟ್ಟಿದೆ. ಇದರ ನಡುವೆ ಕೂಡ ನಮ್ಮ ಕನ್ನಡ ಧಾರಾವಾಹಿಗಳು ಗಟ್ಟಿಯಾದ ಕಥೆ, ಉತ್ತಮ ಗುಣಮಟ್ಟ, ಮೇಕಿಂಗ್ ಮೂಲಕ ಅತ್ಯುತ್ತಮವಾಗಿ ಮೂಡಿ ಬರುತ್ತಿವೆ.

ಅದರ ಪೈಕಿ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಕೂಡ ಒಂದಾಗಿದೆ. ಗಟ್ಟಿಯಾದ ಕಥೆಯಲ್ಲಿ ಕಥಾ ನಾಯಕನಾಗಿ ವೇದಾಂತ್ ಮತ್ತು ಅಮೂಲ್ಯ ರೌಡಿ ಬೇಬಿ ಆಗಿ ರಕ್ಷಿತ್ ಗೌಡ ಮತ್ತು ನಿಶಾ ಅವರ ನಟನೆ ಕಿರುತೆರೆ ವೀಕ್ಷಕರನ್ನ ಮೋಡಿ ಮಾಡಿದೆ. ಈ ಗಟ್ಟಿ ಮೇಳ ಧಾರಾವಾಹಿ ಕಥೆಯಲ್ಲಿ ಅಲ್ಲಲ್ಲಿ ರೋಚಕ ತಿರುವು ಪಡೆದುಕೊಂಡು ವೀಕ್ಷಕರನ್ನು ತನ್ನಲ್ಲೇ ಹಿಡಿದಿಟ್ಟುಕೊಂಡು ಸಾಗುತ್ತಿದೆ. 2019ರಲ್ಲಿ ಆರಂಭಗೊಂಡ ಈ ಗಟ್ಟಿಮೇಳ ಧಾರಾವಾಹಿಯು ನಿರಂತರವಾಗಿ ಕನ್ನಡ ಕಿರುತೆರೆಯ ವೀಕ್ಷಕರನ್ನು ರಂಜಿಸುತ್ತಾ ಇದೀಗ ಯಶಸ್ವಿಯಾಗಿ ಎಂಟು ನೂರು ಎಪಿಸೋಡ್ ಗಳನ್ನ ಪೂರೈಸಿದೆ. ವೇದಾಂತ್ ಪಾತ್ರದಲ್ಲಿ ರಕ್ಷಿತ್ ಗೌಡ, ಅಮೂಲ್ಯ ಪಾತ್ರದಲ್ಲಿ ನಿಶಾ, ಸುಧಾ ನರಸಿಂಹರಾಜು ಅಭಿಷೇಕ್ ದಾಸ್.

ಗಗನ ಮುಂತಾದ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿ ನಾಡಿನಾದ್ಯಂತ ಮನೆ ಮಾತಾಗಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡ ಕಿರುತೆರೆಯ ಜನಪ್ರಿಯ ಟಾಪ್ ಫೈವ್ ಸೀರಿಯಲ್ ಗಳಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಸ್ಥಾನ ಪಡೆದುಕೊಂಡಿದೆ. ಈ ಫೈವ್ ಪ್ಲೇಸ್ ನಲ್ಲಿ ತನ್ನ ಗಟ್ಟಿಮೇಳ ಧಾರಾವಾಹಿ ಐದನೇ ಸ್ಥಾನವನ್ನು ಉಳಿಸಿಕೊಂಡು ಕಿರುತೆರೆ ವೀಕ್ಷಕರನ್ನ ಮನರಂಜನೆ ಮಾಡುತ್ತಾ ಸಾಗುತ್ತಿದೆ. ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ನೂರು, ಇನ್ನೂರು ಎಪಿಸೋಡ್ ಕಂಪ್ಲೀಟ್ ಮಾಡಲು ಹರ ಸಾಹಸ ಪಡುವಂತಹ ಸ್ಥಿತಿಯಲ್ಲಿರುವಾಗ ಗಟ್ಟಿಮೇಳ ಧಾರಾವಾಹಿ ನೀರಸವಾಗಿ ಎಂಟು ನೂರು ಎಪಿಸೋಡ್ ಗಳನ್ನ ಯಶಸ್ವಿಯಾಗಿ ಪೂರೈಸಿರುವುದು ನಿಜಕ್ಕೂ ಕೂಡ ಮೆಚ್ಚುಗೆಯೇ ಸರಿ.

%d bloggers like this: