ನಮ್ಮ ಜಗತ್ತಿನಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ, ಹೀಗಾಗಿಯೇ ಮನುಕಾಲ ಈ ಹಂತಕ್ಕೆ ಬಂದು ತಲುಪಿರುವುದು. ವಿಶ್ವದಲ್ಲಿ ನವೀಕರಿಸಲಾಗಿದ ಶಕ್ತಿಗಳ ಕೊರತೆಯನ್ನು ಇನ್ನೇನು ಕೆಲವೇ ವರ್ಷಗಳಲ್ಲಿ ನಾವು ಕಾಣುತ್ತೇವೆ. ಹೀಗಾಗಿ ಪ್ರೆಟ್ರೋಲ್ ಡೀಸೆಲ್ ಅಂತಹ ಇಂಧನಗಳ ಹೊರತು ವಾಹನ ನಡೆಸುವ ದಿನಗಳು ದೂರವಿಲ್ಲ. ಹೀಗಿರುವಾಗ ವಿಶ್ವದ ಎಲ್ಲಾ ದೇಶಗಳ ವಾಹನ ತಯಾರಿಕಾ ಕಂಪನಿಗಳು ಎಲ್ರೆಕ್ಟಿಕ್ ವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ, ಬಗೆ ಬಗೆಯ ವಿನ್ಯಾಸ ಬಗೆಬಗೆಯ ಸಾಮರ್ಥ್ಯಗಳ ವಾಹನಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಯಾವಾಗಲೂ ಬದಲಾವಣೆ ಬೇಡುವ ಮಾನವನ ಮನಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ತಯಾರಕರು ಬೆಸ್ಟ್ ಮತ್ತು ಅಡ್ವಾನ್ಸ್ ಫೀಚರ್ ಗಳೊಂದಿಗೆ ಎಲರೆಕ್ಟಿಕ್ ಸ್ಕೂಟರ್ ಗಳನ್ನು ಈಗ ನಮ್ಮ ಮಾರುಕಟ್ಟೆಗೆ ಬಿಡುತ್ತಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ದೇಶದ ಐಐಟಿ ಹೈದ್ರಾಬಾದ್ ನ ಇನ್ಸ್ ಕುಬೇಟೆಡ್ ಎಂಬ ಸ್ಟಾರ್ಟ್ ಅಪ್ ಕಂಪನಿ ಪ್ಯೂರ್ ಇ ವಿ ಎಂಬ ಹೆಸರಿನ ಸ್ಕೂಟರನ್ನು ತಯಾರಿಸಿ ಪರಿಚಯಿಸಿದೆ. ಈ ಸ್ಕೂಟರ್ ಬಗ್ಗೆ ನೀವು ಕೇಳಿದರೆ ನಿಜಕ್ಕೂ ಒಂದು ನಿಮಿಷ ಗಾಬರಿಯಾಗುತ್ತದೆ. ಹೌದು 1.5 ಕೆಎಂ ಬ್ಯಾಟರಿಯನ್ನು ಹೊಂದಿರುವ ಈ ಸ್ಕೂಟರ್ 2.2 kw peak bldc ಮೋಟಾರು ಹೊಂದಿರುವ ಗರಿಷ್ಠ ಪವರ್ ಸ್ಕೂಟರ್ ಆಗಿದೆ. ಈ ಸ್ಕ್ಯೂಟರಿನ ಅತಿ ಮುಖ ಫೀಚರ್ ಏನೆಂದರೆ ಒಂದು ಸಲ ಚಾರ್ಜ್ ಮಾಡಿದರೆ ಸಾಕು ಇದು ಬರೋಬ್ಬರಿ 125 ಕಿಲೋ ಮೀಟರ್ಗಳಷ್ಟು ಮೈಲೇಜ್ ನೀಡಲಿದೆ. ಸದ್ಯಕ್ಕೆ ಈ ಸ್ಟಾರ್ಟ್ ಅಪ್ ಕಂಪೆನಿಯು ಪ್ರತಿ ತಿಂಗಳು ಇಪ್ಪತ್ತು ಸಾವಿರ ಸ್ಕೂಟರ್ ಗಳನ್ನೂ ಉತ್ಪಾದಿಸಲು ಮುಂದಾಗಿದೆ ಮತ್ತು ಸದ್ಯ ಅದರ ಬೆಲೆ 76ಸಾವಿರ ರೂಗಳು ಎನ್ನಲಾಗುತ್ತಿದೆ.