ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಷ್ಟೇ ಕ್ರೇಜ಼್ ಹುಟ್ಟುಹಾಕಿ ಹುಚ್ಚೆಬ್ಬಿಸುವ ಕ್ರಿಕೆಟ್ ಅಂದರೆ ಐಪಿಎಲ್ ಕ್ರಿಕೆಟ್. ಇದೊಂದು ರೀತಿಯ ಹವಾಮಾನದ ಸೀಸನ್ ಅಂತೇಯೇ ಆಗಿದೆ. ಏಕೆಂದರೆ ಐಪಿಎಲ್ ಸೀಸನ್ ಅಂದರೆ ಅದು ದುಡ್ಡಿನ ಮಳೆ ಸುರಿಸುವ ಕಾಲ ಅಂತಾನೇ ಆಗಿದೆ ಕೆಲವರಿಗೆ. ಇದು ಎಲ್ಲಾರಿಗೂ ಸೂಕ್ತವಾದುದ್ದಲ್ಲ. ಆದರೆ ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅಂತೂ ಯುವ ಸಮೂಹವನ್ನು ತನ್ನತ್ತ ಹಿಡಿದಿಟ್ಟುಕೊಳ್ಳುವಲ್ಲಿ ಸಖತ್ ಆಗಿಯೇ ಕಾರ್ಯ ನಿರ್ವಹಿಸುತ್ತದೆ. ಅಷ್ಟರ ಮಟ್ಟಿಗೆ ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಯುವ ಜನಾಂಗಕ್ಕೆ ಮೋಡಿ ಮಾಡಿದೆ. ಕಳೆದ ವರ್ಷ ಕೋವಿಡ್ ಅಲೆಯ ಗಂಭೀರ ಪರಿಣಾಮ ಎದುರಿಸಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯನ್ನು ಸಾಕಷ್ಟು ಸವಾಲುಗಳೊಂದಿದೆ ಯಶಸ್ವಿಯಾಗಿಯೇ ಪೂರೈಸಿದೆ.

ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಗೆ ಕೆಲವೇ ದಿನಗಳು ಉಳಿದಿದ್ದು ಆರಂಭವಾಗುವ ದಿನಾಂಕವನ್ನು ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆಯಂತೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸಿದ ಸಭೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಅನ್ನು ಇದೇ ಮುಂದಿನ ಮಾರ್ಚ್ ತಿಂಗಳ 26ರಿಂದ ಮೇ29ರ ವರೆಗೆ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರಾದ ಬ್ರಿಜೇಶ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ. ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೆಕೆಟ್ ಪಂದ್ಯಗಳಲ್ಲಿ ಎಂಟು ಫ್ರಾಂಚೈಸಿ ತಂಡಗಳಿದ್ದವು. ಆದರೆ ಈ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಹೊಸ ಫ್ರಾಂಚೈಸಿ ತಂಡಗಳಾಗಿ ಲಖನೌ ಸೂಪರ್ ಜ್ಯೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಎಂಬ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿದ್ದು, ಒಟ್ಟು ಹತ್ತು ತಂಡಗಳು ಈ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಭಾಗವಹಿಸಲಿವೆ.



ಇದರ ಹಿನ್ನೆಲೆಯಲ್ಲಿ ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಕೂಡ ಮುಗಿದಿದ್ದು, ವಿವಿಧ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅಗತ್ಯವಾದ ಸೂಕ್ತ ಆಟಗಾರರನ್ನು ಕೋಟಿ ಕೋಟಿ ರೂ.ಗಳ ಸಂಭಾವನೆ ನೀಡಿ ಖರೀದಿ ಮಾಡಿದ್ದಾರೆ. ಇನ್ನು ಏನಿದ್ದರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಸ್ಪರ್ಧಿಸುವ ಫ್ರಾಂಚೈಸಿ ಆಟಗಾರರು ತಮ್ಮ ಸಾಮರ್ಥ್ಯವನ್ನು ಮೈದಾನದಲ್ಲಿ ತೋರಿಸಬೇಕಾಗಿರುತ್ತದೆ. ಅದರಂತೆ ಈ 15ನೇ ಆವೃತ್ತಿಯಲ್ಲಿ ಮುಂಬೈನ ವಾಂಖೆಡೆ ಸ್ಟೇಡೀಯಂ, ಬ್ರಬೋರ್ನ್ ಸ್ಟೇಡಿಯಂ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಗಹುಂಜೆ ಕ್ರೀಡಾಂಗಣಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿದೆ ಅಧ್ಯಕ್ಷರಾದ ಬ್ರಿಜೇಶ್ ಪಟೇಲ್ ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ.