ಬರುತ್ತಿದೆ ಯೂಟ್ಯೂಬ್ ಶಾಪಿಂಗ್, ಇನ್ಮೇಲೆ ವಿಡಿಯೋ ಜೊತೆ ಖರೀದಿ ಕೂಡಾ ಮಾಡಬಹುದು

ಗೂಗಲ್ ಸೇವೆಗಳಲ್ಲಿ ಒಂದಾಗಿರುವ ಯೂಟ್ಯೂಬ್ ನಲ್ಲಿ ಶಾಪಿಂಗ್ ಅವಕಾಶ! ಇದೀಗ ಯುಟ್ಯುಬ್ ನಲ್ಲಿ ಶಾಪಿಂಗ್ ಮಾಡುವಂತಹ ಅವಕಾಶವಿದೆ, ಹೌದು ಸಾಮಾನ್ಯವಾಗಿ ನಾವು ಯೂಟ್ಯುಬ್ ನಲ್ಲಿ ಒಂದಷ್ಟು ವಿಡಿಯೋಗಳು ಅಥವಾ ಇತರ ಯಾವುದೇ ಹಾಡು ಸಿನಿಮಾ ನೋಡುವಾಗ ಅದರ, ನಡುವೆ ಒಂದಷ್ಟು ಜಾಹೀರಾತುಗಳು ಬರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಯುಟ್ಯುಬ್ ನಲ್ಲಿ ಬರುವ ಜಾಹೀರಾತಲ್ಲಿ ತೋರಿಸುವ ವಸ್ತುಗಳು, ಉತ್ಪನ್ನಗಳನ್ನು ಯುಟ್ಯುಬ್ ಮುಖಂತರ ಖರೀದಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸೇವೆ ಇದೀಗ ಯುಟ್ಯುಬ್ ನಲ್ಲಿಯೂ ಕೂಡ ಆರಂಭಗೊಳ್ಳಲಿದೆ. ಯುಟ್ಯುಬ್ ನಲ್ಲಿ ಜಾಹೀರಾತು ಮುಖೇನ ಬರುವ ಉತ್ಪನ್ನಗಳನ್ನು ನೇರವಾಗಿ ಖರೀದಿಸುವಂತಹ ನೂತನವಾದ ವೈಶಿಷ್ಟ್ಯವನ್ನು ಅಭಿವೃದ್ದಿ ಪಡಿಸಿದೆ.

ಇದರ ಮೂಲಕ ಖರೀದಿ ಸೇವಾ ವೇದಿಕೆಗಳಾಗಿದ್ದ, ಅಮೇಜಾ಼ನ್, ಫ್ಲಿಪ್ ಕಾರ್ಟ್ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡುವ ಸಾಧ್ಯತೆ ಇರುತ್ತದೆ. ಯುಟ್ಯುಬ್ ತನ್ನ ವೇದಿಕೆಯಲ್ಲಿ ತೋರಿಸುವ ಜಾಹೀರಾತಿನ ಉತ್ಪನ್ನ ವಸ್ತುಗಳು ಎಷ್ಟರ ಮಟ್ಟಿಗೆ ಗುಣಮಟ್ಟ ಹೊಂದಿದೆ, ಜೊತೆಗೆ ಆ ವಸ್ತುಗಳ ವಿಶ್ವಾಸರ್ಹತೆ ಬಗ್ಗೆಯೂ ಯೋಚಿಸಬೇಕಾಗಿದೆ. ಯುಟ್ಯುಬ್ ನಲ್ಲಿ ಈ ಸೇವೆಯು ಶೀಘ್ರದಲ್ಲಿ ಲಭ್ಯವಾಗಲಿದೆ ಎಂದು ಯುಟ್ಯುಬ್ ಸಂಸ್ಥೆಯು ಮಾಹಿತಿಯನ್ನು ಹೊರಹಾಕಿದೆ. ಇನ್ನು ಮುಂದೆ ಯುಟ್ಯುಬ್ ತನ್ನ ಜಾಹೀರಾತಿನಲ್ಲಿ ಪ್ರದರ್ಶನ ಮಾಡುವ ಉತ್ಪನ್ನಗಳನ್ನು ಜನರ ಇಚ್ಚೆಯಂತೆ, ನೇರವಾಗಿ ಅವರ ಮನೆಭಾಗಿಲಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.

ಯುಟ್ಯುಬ್ ಬಳಕೆದಾರರು ತಮಗೆ ಇಷ್ಟವಾದ ಉತ್ಪನ್ನಗಳನ್ನು ಒಂದು ಕ್ಲಿಕ್ ಒತ್ತುವುದರ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಯುಟ್ಯುಬ್ ಬಳಕೆದಾರರಿಗೆ ಜನರು, ಉತ್ಪನ್ನಗಳ ವೀಡಿಯೋ ನೋಡಿ, ಅದರ ಸಂಪೂರ್ಣವಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಯುಟ್ಯುಬ್ ನಲ್ಲಿ ಹಲವಾರು ಪ್ರತಿಷ್ಠಿತ ಕಂಪನಿಯ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತದೆ. ಯುಟ್ಯುಬ್ ನ ಬಲ ಭಾಗದಲ್ಲಿ ಶಾಪಿಂಗ್ ಬ್ಲ್ಯಾಗ್ ಎಂಬ ಐಕಾನ್ ಅನ್ನು ಕೂಡ ಸೇರಿಸಲಾಗುತ್ತದೆ.

ಈ ಯ್ಯುಟ್ಯುಬ್ ನಲ್ಲಿ ವಿವಿಧ ರೀತಿಯ ವಿಭಿನ್ನ ಬಟ್ಟೆ, ಶೂಗಳಂತಹ ಉತ್ಪನ್ನಗಳನ್ನ, ಜಾಗತಿಕವಾಗಿ ಹೆಸರು ಮಾಡಿರುವ ಬ್ರ್ಯಾಂಡ್ ಸಂಸ್ಥೆಗಳಿಂದ ಖರೀದಿಸುವ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಈ ವೈಶಿಷ್ಟ್ಯ ಉತ್ಪನ್ನಗಳ ಪಟ್ಟಿಯನ್ನು ವೀಕ್ಷಣೆ ಮಾಡಲು ಕ್ಲಿಕ್ ಬಟನ್ ಆಯ್ಕೆ ನೀಡಿರುತ್ತದೆ. ಅದನ್ನು ಒತ್ತುವುದರಿಂದ ನೀವು ಬಯಸಿದ, ಹುಡುಕಿದ ಉತ್ಪನ್ನಗಳು ನಿಮ್ಮ ಕಣ್ಣಿಗೆ ಬೀಳುತ್ತವೆ‌. ಕಳೆದ ವಾರ ಗೂಗಲ್,ಗೂಗಲ್ ಸರ್ಚ್ ನಲ್ಲಿ ಶಾಪಿಂಗ್ ಅನುಭವವನ್ನು ನವೀಕರಣ ಮಾಡಿದೆ. ಸಧ್ಯಕ್ಕೆ ಇರುವ ಆನ್ಲೇನ್ ಸೇವೆಗಳ ಪಟ್ಟಿಯಲ್ಲಿ ಯುಟ್ಯುಬ್ ಕೂಡ ಸೇರಿಕೊಂಡಿದ್ದು, ಸೇವಾ ವಲಯದ ದೈತ್ಯ ಸಂಸ್ಥೆಗಳಾದ ಅಮೇಜಾ಼ನ್, ಫ್ಲಿಪ್ ಕಾರ್ಟ್ ಗಳಿಗೆ ದೊಡ್ಡ ಮಟ್ಟದ ಪೈಪೋಟಿ ನೀಡಲು ಯುಟ್ಯುಬ್ ಸಜ್ಜಾಗಿದೆ.

%d bloggers like this: