ಬರುತ್ತಿವೆ ಕಡಿಮೆ ಬೆಲೆಗೆ ಭಾರತದ್ದೇ ಅತ್ಯುತ್ತಮ ಮೊಬೈಲ್ ಫೋನ್ಗಳು

ಮೈಕ್ರೋಮ್ಯಾಕ್ಸ್ 2000ರಲ್ಲಿ ಒಂದು ಐಟಿ ತಂತ್ರಾಂಶ ಕಂಪನಿಯು ಇಂಡಿಯಾದ ಗುರುಗ್ರಾಮ ಎಂಬ ಡೆಲ್ಲಿಯ ಹರಿಯಾಣದಲ್ಲಿ, ರಾಹುಲ್ ಶರ್ಮ ಹಾಗು ರೋಹಿತ್ ಪಾಟೀಲ್ ಎಂಬವರಿಂದ ನಿರ್ಮಿತವಾಗಿದೆ. ಮೈಕ್ರೋಮ್ಯಾಕ್ಸ್ 2010ರಲ್ಲಿ ಕಡಿಮೆ ವೆಚ್ಚದ ಮೂಲಕ ಭಾರತೀಯ ದೇಶೀಯ ಮೊಬೈಲ್ ಹ್ಯಾಂಡ್ಸೆಟ್ಗಳಲ್ಲಿ ಒಂದಾಗಿ ವೈಶಿಷ್ಟ್ಯವನ್ನು ಪಡೆದುಕೊಂಡಿತು. 2006 ಇಂಟರ್ ನ್ಯಾಷನಲ್ ಪೈಪೋಟಿ ದೃಷ್ಟಿಸಿ ಚೀನೀ ಆಮದು ಮೊಬೈಲ್ ಫೋನ್ ರೀಬ್ರಾಂಡಿಂಗ್ ಆರಂಭಿಸಿತು. ಮೈಕ್ರೋಮ್ಯಾಕ್ಸ್, ಮೈಕ್ರೋಮ್ಯಾಕ್ಸ್ ಇನ್ಫಾರ್ಮೆಟಿಕ್ಸ್ ಲಿಮಿಟೆಡ್ ಆಗಿ ಮಾರ್ಪಾಡಾಯಿತು. ಮೈಕ್ರೋಮ್ಯಾಕ್ಸ್ ಗೆ ಎದುರಾಳಿಯಾಗಿ ಭಾರತದಲ್ಲಿ ಒಂದೇ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ಮೈಕ್ರೋಮ್ಯಾಕ್ಸ್ ಕಂಪನಿಯನ್ನು ಮೀರಿಸಿತು. ಇದರಿಂದ ಮೊದಲ ಭಾರತೀಯ ಮೊಬೈಲ್ ಕಂಪನಿಯಾಗಿ ಮೈಕ್ರೋಮ್ಯಾಕ್ಸ್ ರಶಿಯಾ ಮಾರಾಟ ಆರಂಭಿಸಲು ಮುಂದಾಯಿತು.

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ದಂಪತಿಗಳು ಮೈಕ್ರೋಮ್ಯಾಕ್ಸ್ ಮೊಬೈಲ್ ಗಳ ಜಾಹಿರಾತಿಗೆ ಕಾಣಿಸಿಕೊಂಡರು. ಹೀಗೆ ಕಡಿಮೆ ಬೆಲೆಯಿಂದ ಹಾಗು ಆಕರ್ಷಕ ಲುಕ್ ಗಳಿಂದ ಮಿಕ್ರ್ಪ್ಮಕ್ಷ್ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡು ಕಸ್ಟಮರ್ ಗಳನ್ನೂ ತನ್ನ ಕೈವಶ ಮಾಡಿಕೊಂಡಿದ್ದು ‘Made in India’ ಎಂಬ slogan ನಿಂದ ಮತ್ತೆ ಹೊಸದಾದ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಲಾವ ಸ್ಮಾರ್ಟ್ ಫೋನ್ ಬಾರ್ ಫೋನ್ ಗಳಿಗೆ ಹೆಚ್ಚಾದ ಬೇಡಿಕೆ ಹೊಂದಿದೆ. ಲಾವ ಮೊಬೈಲ್ ಫೋನ್ ನ ಸ್ಥಾಪಕ ಹರಿ ಓಂ ರಾಯ್, ಸುನಿಲ್ ಭಳ್ಳ, ಶೈಲೇಂದ್ರ ನಾಥ್ ರಾಯ್, ಹಾಗು ವಿಶಾಲ್ ಸೆಹಗಲ್ ರಿಂದ ಶುರುವಾಗಿದ್ದು, ಇಂಡಿಯನ್ ಮಲ್ಟಿ ನ್ಯಾಷನಲ್ ಇಲೆಕ್ಟ್ರಾನಿಕ್ ಕಂಪನಿಯಾಗಿದೆ. ಲಾವಾ ಕಂಪನಿ ಮೊಬೈಲ್ಗಳು ಮಾತ್ರವಲ್ಲದೇ ಲ್ಯಾಪ್ಟಾಪ್ ಗಳು, ಕಂಪ್ಯೂಟರ್ಸ್, ಟ್ಯಾಬ್ಲೆಟ್ ಕೂಡ ಹೆಸರುವಾಸಿಯಾಗಿದೆ.

ಲಾವ ಇಂಟರ್ನ್ಯಾಷನಲ್ ಲಿಮಿಟೆಡ್ ರೆವಿನ್ಯೂ 2016ರಲ್ಲಿ ₹5,400 crore (US$760 million) ಆಗಿದ್ದು ಇತರ ಬ್ರಾಂಡ್ ಗಳಿಗಿಂತ ಭಿನ್ನವಾಗಿದ್ದು, ಜನರಿಗೆ ಕೈಗೆಟುಕುವ ಬೆಲೆಯಲ್ಲಿ 7ನೇ ಜನವರಿಯಲ್ಲಿ ಹೊಸದಾಗಿ ಲಾವಾ Z6 6.50 ಟಚ್ ಸ್ಕ್ರೀನ್ ಡಿಸ್ಪ್ಲೇ ಲಾಂಚ್ ಮಾಡುವುದರ ಮೂಲಕ ಜನರ ಮನಸೆಳೆಯುವಂತೆ ಅತ್ಯುತ್ತಮ ಕಮ್ಬ್ಯಾಕ್ ನೀಡಿದೆ ಎಂಬ ಉಲ್ಲೇಖ. ಕಾರ್ಬನ್ ಸ್ಮಾರ್ಟ್ಫೋನ್ ಇಂಡಿಯನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯಾಗಿ ಮಾರ್ಚ್ 2009ರಲ್ಲಿ ಪ್ರಾರಂಭವಾಗಿದ್ದು ಇದು ಬಾರ್ ಫೋನ್ ಗಳು, ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್, ಹಾಗು ಮೊಬೈಲ್ ಆಕ್ಸಸರಿಯ ಮಾರಾಟಗಾರವಾಗಿದೆ. ಇದು ಯುನೈಟೆಡ್ ಟೆಲಿಲಿಂಕ್ಸ್ ಹಾಗು ಬೆಂಗಳೂರು ಬೇಸ್ಡ್ ಫರ್ಮ್ ಹಾಗು ಜೈನಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಇದರ ಹೆಡ್ ಕ್ವಾರ್ಟರ್ಸ್ ನ್ಯೂ ಡೆಲ್ಲಿಯಲ್ಲಿದೆ.

ಅಲ್ಲದೆ ಕಾರ್ಬನ್ ಮೊಬೈಲ್ ಲೀಡಿಂಗ್ ಟೆಲಿಕಾಮ್ ಆದ ಏರ್ಟೆಲ್, ವೊಡಫೋನ್, ಜಿಯೋ ಜೊತೆಗೆ ಟೈ ಅಪ್ಸ್ ಹೊಂದಿದೆ. ಅಲ್ಲದೆ ಈ ಸಂಸ್ಥೆಯ ಒಟ್ಟು ಹೂಡಿಕೆ ಭಾರತೀಯ ಗ್ರಾಹಕ ಮಾರುಕಟ್ಟೆಯ ಬೆಲೆಯಲ್ಲಿ US$5 ಮಿಲಿಯನ್ (2011) ಹಾಗು ಈ ಸಂಸ್ಥೆ 65000 ಚಿಲ್ಲರೆ ಗ್ರಾಹಕರನ್ನು 1000+ ಗ್ರಾಹಕ ಸೇವೆಯನ್ನು ೧೫೦ ಸರ್ವೀಸ್ ಸೆಂಟರ್ ಅನ್ನು ಪ್ರತ್ಯೇಕವಾಗಿ ಕಾರ್ಬನ್ ಗಾಗಿಯೇ ಮೀಸಲಿತ್ತಿರುವುದನ್ನು ಕಾಣಬಹುದು. ಹೀಗೆ 2013-2014ರ ಮಾಹಿತಿಯ ಪ್ರಕಾರ ಕಾರ್ಬನ್ ನ ಟರ್ನ್ ಓವರ್ ₹4,000 ಕ್ರೋರ್ ಎಂಬ ಉಲ್ಲೇಖ ಪತ್ತೆಯಾಗಿದೆ.

ಹೀಗೆ ಚಿಕ್ಕದಾಗಿ ಸ್ಥಾಪನೆಯಾದ ಈ ಮೂರು ಕಂಪನಿಗಳು ಹಿಂದಿನ ದಿನಗಳಲ್ಲಿ ಜನರನ್ನು ಉತ್ತಮ ಬೆಲೆಗಳಿಂದ ಆಕರ್ಷಿಸುವುದರ ಮೂಲಕ ಭಾರೀ ಸದ್ದು ಮಾಡಿ 2021ರಲ್ಲಿ ಕೂಡ ಹೊಸ ಲುಕ್ ನಲ್ಲಿ ಮತ್ತಷ್ಟು ಜನರನ್ನು ಕೈಸೆರೆ ಮಾಡುವಂತಿದೆ. ಹೀಗೆ ಒಂದರ ಮೇಲೊಂದು ಸ್ಮಾರ್ಟ್ ಫೋನ್ಗಳ ಮೋಹ ಮಾತ್ರ ಜನರಲ್ಲಿ ಕುಗ್ಗೋದಿಲ್ಲ ಯಾಕಂದ್ರೆ ಜನರಿಗೆ ಫೋನ್ ಗಳ ಅಡಿಕ್ಷನ್ ಯಾವ ರೀತಿ ಹವಾ ಇದೆ ಅಂದರೆ ಜನಕ್ಕೆ ಊಟ ಮಾಡುವಾಗ, ಕೆಲಸ ಮಾಡುವಾಗ, ಮಲಗುವಾಗ ಮಾತ್ರವಲ್ಲದೇ ಬಾತ್ರೂಂಗಳಲ್ಲಿ ಕೂಡ ಜನರಿಗೆ ಕಂಪನಿ ನೀಡುವ ಮನೋರಂಜನೆಯಾಗಿ ಮಾರ್ಪಟ್ಟಿದೆ.

%d bloggers like this: