ಬರುತ್ತಿವೆ ಸಾಲು ಸಾಲು ಅತ್ಯುತ್ತಮ ಮೊಬೈಲುಗಳು, ದೀಪಾವಳಿಗೆ ಇಲ್ಲಿವೆ ಭರ್ಜರಿ ಮೊಬೈಲ್ ಹಾಗು ಆಫರ್

ಮಾರುಕಟ್ಟೆಗಳಲ್ಲಿ ರಾಜ್ಯೋತ್ಸವ ದಿನದಂದೇ ರಾರಾಜಿಸಿದ ಪ್ರತಿಷ್ಠಿತ ಮೊಬೈಲ್ ಕಂಪನಿಗಳು. ಬದಲಾವಣೆ ಎಷ್ಟು ಬೇಗ ಆಗುತ್ತದೆ ಅಂದರೆ ಅದರಲ್ಲೂ ಈ ತಂತ್ರಜ್ಞಾನ ಮೊಬೈಲ್ ಕ್ಷೇತ್ರದಲ್ಲಿ ರಾತ್ರಿ ಇದ್ದದ್ದು ಬೆಳಿಗ್ಗೆ ಇರೋಲ್ಲ ಅಷ್ಟು ಅಡ್ವಾನ್ಸ್ ಅಪ್ಡೇಟೇಡ್ ಇನ್ನು ಯಾವುದೇ ಕ್ಷೇತ್ರದಲ್ಲೂ ಆಗುವುದಿಲ್ಲ. ಅಂದ್ಹಾಗೆ ಐಫೋನ್ ಗಳು ವಾರಕೊಂದಂತೆ, ತಿಂಗಳಿಗೊಂದಂತೆ ಹೊಸ ಆವಿಷ್ಕಾರದೊಂದಿಗೆ ಬರುತ್ತಲೇಯಿರುತ್ತವೆ. ಹಾಗೆಯೇ ಈ ತಿಂಗಳು ಸಹ ಮೊಬೈಲ್ ಮಾರುಕಟ್ಟೆಯಲ್ಲಿ ವೀವೋ, ಓಪ್ಪೋ, ಸ್ಯಾಮ್ಸಂಗ್, ಒನ್ ಪ್ಲಸ್ ಮೊಬೈಲ್ ಗಳು ನವ ಆವಿಷ್ಕಾರ ಅಡ್ವಾನ್ಸ್ ಅಪ್ಡೆಟ್ ಹೊಂದಿ ಹೊಸ ವಿನ್ಯಾಸದೊಂದಿಗೆ ಮಾರುಕ್ಟಟೆಗೆ ಲಗ್ಗೆ ಇಟ್ಟಿವೆ. ನವೆಂಬರ್ ತಿಂಗಳಲ್ಲಿ ಒಂದಷ್ಟು ಮೊಬೈಲ್ ಗಳು ಬಿಡುಗಡೆಯಾಗಲು ತುದಿಗಾಲಲ್ಲಿ ನಿಂತಿವೆ ಅವುಗಳಲ್ಲಿ ಮೊದಲನೆಯದಾಗಿ.

ವೀವೋ ವಿ20ಪ್ರೋ‌‌ ಸಧ್ಯಕ್ಕೆ ಬೇಡಿಕೆಯಲ್ಲಿರುವ ಮೊಬೈಲ್ ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು ಈಗಾಗಾಲೇ ಮುಂಗಡ ಬುಕ್ಕಿಂಗ್ ಕೂಡ ನಡೆಯುತ್ತಿದೆ. ಈ ಮೊಬೈಲಿನ ವಿಶೇಷತೆ ಮತ್ತು ಫೀಚರ್ ತಿಳಿಯುವುದಾದರೆ ಇದರಲ್ಲಿ 644ಇಂಚು ಅಮೋಲ್ಟ್ ಡಿಸ್ ಪ್ಲೇ ಹೊಂದಿದ್ದು, ಸ್ನ್ಯಾನ್ ಡ್ರಾಗನ್ 765 ಚಿಪ್ ಸೆಟ್, 8 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ ಸಾಮಾರ್ಥ್ಯವನ್ನೂ ಹೊಂದಿದೆ. ಇದರ ಜೊತೆಗೆ ಥ್ರಿಬ್ಬಲ್ ಕ್ಯಾಮೆರಾ ಮತ್ತು 4000 Mah ಬ್ಯಾಟರಿಯನ್ನು ಹೊಂದಿದೆ. ಇದಾದ ನಂತರ ಎರಡನೆಯದಾಗಿ ರೆಡ್ಮಿನೋಟ್10ಪ್ರೋ ಶಿಯೋಮಿ 6.7 ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದ್ದು, ಓಕ್ಟಾಕೋರ್ ಸ್ನ್ಯಾಪ್ ಡ್ರಾಗನ್ 765ಜಿ ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸುತ್ತದೆ. ಇದು 5100 Mah ಸಾಮರ್ಥ್ಯವುಳ್ಳ ಬ್ಯಾಟರಿ ಹೊಂದಿದ್ದು ವೇಗವಾಗಿ ಚಾರ್ಜ್ ಆಗುವಂತಹ ಲಕ್ಷಣಹೊಂದಿದೆ.

ರಿಯಲ್ ಮಿಸಿ17 ಈಫೋನ್ ಕಂಪನಿಯು ಕೂಡ ಇದೇ ತಿಂಗಳಲ್ಲಿ ಬಿಡುಗಡೆ ಮಾಡಲು ಕಾತುರದಿಂದ ಕಾದಿದೆ. ಇದರ ವಿಶೇಷತೆ ತಿಳಿಯುವುದಾದರೆ 6.7 ಇಂಚಿನ ಎಚಡಿ ಮತ್ತು ಎಲ್ಸಿಡಿ ಹೊಂದಿರುವ ಡಿಸ್ ಪ್ಲೇ ಹೊಂದಿದ್ದು, 460 ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. 128 ಜಿಬಿ ಸಂಗ್ರಹ ಸಾಮಾರ್ಥ್ಯ ಹೊಂದಿದೆ. 8 ಮೆಗಾಫಿಕ್ಸೇಲ್ ಕ್ಯಾಮೆರಾ ಹೊಂದಿದ್ದು ನೋಡಲು ಆಕರ್ಷಕವಾಗಿದೆ. ಇದರ ಜೊತೆಗೆ ಭಾರತದಲ್ಲಿ ಮೈಕ್ರೋ ಮ್ಯಾಕ್ಸ್ ಕಂಪನಿಯ ಫೋನ್ ಗಳು ಕೂಡ ಸ್ಪರ್ಧೆಯೊಡ್ಡಲು ರೆಡಿಯಾಗಿ ಮಾರುಕಟ್ಟೆಗೆ ಬರಲು ಸಿದ್ದತೆ ನಡೆಸಿವೆ. ಅವುಗಳಲ್ಲಿ ಮೈಕ್ರೋ ಮ್ಯಾಕ್ಸ್ ಒನ್ ಮತ್ತು ಒನ್ ಎಎಂಬ ಎರಡು ಫೋನ್ ಗಳು ಲಗ್ಗೆ ಇಟ್ಟಿವೆ. ಒಟ್ಟಿನಲ್ಲಿ ಹಬ್ಬಗಳ ತಿಂಗಳಾಗಿರುವ ನವೆಂಬರ್ ನಲ್ಲಿ ಹಲವು ಮೊಬೈಲ್ ಕಂಪನಿಗಳು ವಿವಿಧ ರೂಪದ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಮೊಬೈಲ್ ಗಳನ್ನು ಬಿಡುಗಡೆ ಮಾಡಲು ವೀವೋ, ಓಪ್ಪೋ, ಸ್ಯಾಮ್ಸ್ಂಗ್ ಕಂಪನಿಗಳು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ ಎಂದು ಟೆಲಿಕಾಂ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

%d bloggers like this: