ಬರುವ ತಿಂಗಳು ಬಿಡುಗಡೆ ಆಗುತ್ತಿದೆ ರಾಯಲ್ ಎನ್ ಫೀಲ್ಡ್ ಕಂಪನಿಯ ಹೊಸ ಬೈಕ್

ರಾಯಲ್ ಎನ್ ಫೀಲ್ಡ್ ಬೈಕ್ ಕಂಪನಿಯಿಂದ ಮತ್ತೊಂದು ನೂತನ ಮಾದರಿಯ ಬೈಕ್ ವೊಂದು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪರಿಚಯವಾಗುತ್ತಿದೆ. ಇತ್ತೀಚೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಅದು ಕಾರು ಅಥವಾ ದ್ವಿಚಕ್ರ ವಾಹನಗಳು ಭಾರಿ ಸುದ್ದಿ ಮಾಡುತ್ತಿವೆ. ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಅಪಾರ ನಷ್ಟದ ಸುಳಿಯಲ್ಲಿದ್ದ ಅನೇಕ ವಾಹನ ತಯಾರಕ ಕಂಪನಿಗಳು ಇತ್ತೀಚೆಗೆ ಕೆಲವು ತಿಂಗಳಿಂದೀಚೆಗೆ ಗರಿಗೆದರಿದ್ದು ಭಾರಿ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಕೋವಿಡ್ ಸಂಕಷ್ಟದಲ್ಲಿದ್ದರು ಕೂಡ ಕಾರು ಮತ್ತು ಈ ದ್ವಿಚಕ್ರ ವಾಹನ ಪ್ರಿಯರಿಗೇನೂ ಕೊರತೆ ಇಲ್ಲ ಎನ್ನಬಹುದಾಗಿರುತ್ತದೆ. ಯಾಕೆಂದರೆ ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಬಗೆಯ ವಾಹನಗಳು ಪರಿಚಯಗೊಳ್ಳುತ್ತಿವೆ.

ಅದಕ್ಕೆ ತಕ್ಕಂತೆ ಗ್ರಾಹಕರಿಂದ ಉತ್ತಮ ಬೇಡಿಕೆ ಕೂಡ ಬರುತ್ತಿದೆ. ಇದೀಗ ಅಂತೆಯೇ ದ್ವಿಚಕ್ರ ವಾಹನ ತಯಾರಿಕೆ ಕಂಪನಿಗಳಲ್ಲಿ ಪ್ರಸಿದ್ದವಾಗಿರುವ ರಾಯಲ್ ಎನ್ ಫೀಲ್ಡ್ ಸಂಸ್ಥೆಯಿಂದ ಹೊಸದೊಂದು ಬೈಕ್ ಲಾಂಚ್ ಮಾಡಲು ಹೊರಟಿದೆ. ಈ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಯಂತೆಯೇ ಕೊಂಚ ವಿಶಿಷ್ಟವಾಗಿ ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411 ಬೈಕ್ ಇದೇ ಮಾರ್ಚ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಇನ್ನು ಈ ನೂತನ ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411 ಬೈಕ್ ಅದೇ ಕಂಪನಿಯ ಹಿಮಾಲಯನ್ ಬೈಕ್ ಮಾದರಿಯನ್ನೇ ಹೋಲುವಂತಿದ್ದು, ಹೆಚ್ಚಾಗಿ ಸ್ಕ್ರಾಂಬ್ಲರ್ ಮಾಡೆಲ್ ಅನ್ನು ಹೊಂದಿರುತ್ತದೆ. ಈಗಾಗಲೇ ಈ ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411 ಬೈಕ್ ನ ಒಂದಷ್ಟು ಛಾಯಾಚಿತ್ರಗಳು ರಾಯಲ್ ಎನ್ ಫೀಲ್ಡ್ ಕಂಪನಿಯ ವೆಬ್ಸೈಟ್ ಗಳಲ್ಲಿ ಹರಿದಾಡುತ್ತಿದೆ. ಈ ಬೈಕ್ ಫೋಟೋ ನೋಡಿದ ಬೈಕ್ ಪ್ರಿಯರು ಮನ ಸೋತಿದ್ದಾರೆ. ಈ ನೂತನ ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411 ಬೈಕ್ ನೋಡಲು ಅತ್ಯಾಕರ್ಷಕವಾಗಿದೆ.

ಈ ಬೈಕ್ ನಲ್ಲಿ ಫ್ರಂಟ್ ಫೆಂಡರ್ ಮತ್ತು ರಿಯರ್ ರಾಕ್ ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬೈಕ್ ಮುಂಭಾಗ ಟರ್ನ್ ಇಂಡಿಕೇಟರ್ಸ್ ನೋಡಲು ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಅನ್ನೇ ಹೋಲುವಂತಿದೆ. ರಿಯರ್ ವ್ಯೂ ಮಿರರ್, ಪೋರ್ಕ್ ಗೈಟರ್, ವಿಶಾಲವಾದ ಹ್ಯಾಂಡಲ್ ಬಾರ್, ಸ್ಪ್ಲಿಟ್ ಸೀಟ್, ಸಿಂಗಲ್ ಪೀಸ್ ಗ್ರಾಬ್ ರೈಲ್ ಮತ್ತು ಅಪ್ ಸ್ವೆಪ್ಟ್ ಎಕ್ಸಾಸ್ಟ್ ಒಳಗೊಂಡಿದೆ. 411 ಸಿಸಿ ಸಿಂಗಲ್ ಸಿಲಿಂಡರ್ ಎಸ್ ಒ ಹೆಚ್ ಸಿ, ಏರ್ ಕೂಲ್ಡ್ ಎಂಜಿನ್ ಅನ್ನು ಈ ರಾಯಲ್ ಎನ್ ಫೀಲ್ಡ್ ಸ್ಕ್ರಾಮ್ 411 ಬೈಕ್ ವೊಂದಿದೆ. ಈ ನೂತನ ಬೈಕ್ ಆರಂಭಿಕ ಬೆಲೆಯು ಕನಿಷ್ಟ ಅಂದರು ಕೂಡ 1.75 ಲಕ್ಷ ಮೌಲ್ಯ ಆಗಿರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

%d bloggers like this: