2022 ರ ಹೊಸ ವರ್ಷದಿಂದ ದ್ವಾದಶ ರಾಶಿ ಚಕ್ರಗಳಲ್ಲಿ ಅನೇಕ ಬದಲಾವಣೆಗಳು ಕಾಣಬಹುದು. ಅಂತೆಯೇ ಆಯಾ ರಾಶಿಯ ವ್ಯಕ್ತಿಗಳು ಕಾಲಕ್ಕೆ ತಕ್ಕಂತೆ ತಮ್ಮವ್ಯಕ್ತಿತ್ವ ಸ್ವಭಾವಗಳನ್ನು ಬದಲಾವಣೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹಾಗೆಯೇ ಈ 2022 ನೇ ವರ್ಷದಲ್ಲಿ ವಿಶಿಷ್ಟ ರಾಶಿಯಾಗಿ ಗುರುತಿಸಿಕೊಂಡಿರುವ ಕಟಕ ರಾಶಿಯವರು ಯಾವ ರೀತಿಯಾಗಿ ತಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಬೇಕು, ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ. ಈ ಕಟಕ ರಾಶಿಯವರು ಯಾವ ರೀತಿಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು. ಈ ರಾಶಿಯವರ ಫಲಾಫಲಗಳು ಹೇಗಿರುತ್ತದೆ ಎಂಬುದನ್ನ ತಿಳಿಯುವುದಾದರೆಗೆ ಪರಿಶ್ರಮ ಪಟ್ಟಿದಷ್ಟು ಅತ್ಯುತ್ತಮ ಪ್ರತಿಫಲ ಲಭಿಸುತ್ತದೆ.

ಮುಂದಿನ ವರ್ಷ 2022 ರಲ್ಲಿ ಹೂವು ಇರುವುದು ದುಂಬಿಗಾಗಿ ಎಂಬಂತೆ ಇವರ ಸೇವಾ ಮನೋಭಾವ, ಉದಾರ ಗುಣ ಮೆಚ್ಚಿ ಸಮಾಜದಲ್ಲಿ ಉನ್ನತ ಮಟ್ಟದ ಗೌರವ ಮನ್ನಣೆ ಸಿಗುವ ಅವಕಾಶ ಇರುತ್ತದೆ.ಆದರೆ ಇವರ ಅನಾವಶ್ಯಕವಾದ ಮಾತು ಇವರಿಗೆ ಮುಳುವಾಗುತ್ತದೆ. ಮಾತಿನಲ್ಲಿ ಆದಷ್ಟು ಹಿಡಿತ ವಿದ್ದಷ್ಟು ಒಳಿತಾಗುತ್ತದೆ. ಇನ್ನು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವ ಇವರಿಗೆ ಭಾವನಾತ್ಮಕ ಜೀವಿಗಳಾದವರಿಗೆ 2022 ನೇ ವರ್ಷದಲ್ಲಿ ನಂಬಿಕೆ ದ್ರೋಹವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೊಂಚ ಎಚ್ಚರವಹಿಸಬೇಕಾಗುತ್ತದೆ.ವ್ಯಾಪಾರ,ವ್ಯವಹಾರಗಳಲ್ಲಿ ಉತ್ತಮವಾದ ಧನಲಾಭ ಪಡೆಯಲಿದೆ ಎನ್ನಬಹುದು.

ತಾಯಿಯವರ ಮೂಲದಿಂದ ಬರಬೇಕಾದ ಆಸ್ತಿಗಳು ನಿಮ್ಮ ಕೈ ಸೇರಲಿವೆ. ಇನ್ನು ನಿಮ್ಮ ಬಹುಕಾಲದ ಆಪ್ತಮಿತ್ರರು ಸಿಕ್ಕು, ನಿಮಗೆ ಖುಷಿಯಾಗುವಂತದ್ದಾಗಿದೆ. ಆರ್ಥಿಕ ವಿಚಾರದಲ್ಲಿ ಉತ್ತಮವಾಗಿದ್ದರು ಕೂಡ ಅಧಿಕ ಖರ್ಚು ನಿಮ್ಮನ್ನು ಭಾದಿಸುತ್ತದೆ ಎಂದು ಹೇಳಬಹುದು. ಇನ್ನು ವಿಧ್ಯಾರ್ಥಿಗಳ ವಿಧ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಶುಭಸುದ್ದಿ ಬರಲಿದೆ. ರಾಜಕೀಯ ವ್ಯಕ್ತಿಗಳಿಗೆ ಪದವಿಯಿಂದ ವಿಮುಕ್ತರಾಗಬಹುದು, ಸದಾ ಎಚ್ಚರದಿಂದಿರಿ ನಿಮ್ಮಶತ್ರುಗಳು ನಿಮ್ಮ ಸನಿಹದಲ್ಲಿಯೇ ಇದ್ದಾರೆ.

ಮನೆಯಲ್ಲಿರುವ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉದಾಸೀನ ಬೇಡ. ಸಮಸ್ಯೆಗಳ ಪರಿಹಾರಕ್ಕಾಗಿ ಹನುಮಾನ್ ಚಾಲೀಸಾ ಮಂತ್ರ ಪಠಿಸಿ ಒಳಿತಾಗುತ್ತದೆ. ಈ ಕಟಕ ರಾಶಿಯವರಿಗೆ 3,7,9 ಸಂಖ್ಯೆಗಳು ಶುಭ ತರುತ್ತವೆ. ಮಂಗಳವಾರ, ಗುರುವಾರ ಶುಭದಿನಗಳಾಗಿದ್ದು, ಕನಕಪುಷ್ಪ ರಾಗ ಅದೃಷ್ಟ ತರುವ ರತ್ನವಾಗಿದೆ. ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸಲು ಕೆಂಪು ಬಣ್ಣದ ದಾರವನ್ನು ಧಾರಣೆ ಮಾಡಿಕೊಳ್ಳುವುದು ಉತ್ತಮವಾಗಿದೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸಿದ್ದಾರೆ.