ಬಟ್ಟೆ ಅಂಗಡಿ ವ್ಯಾಪಾರಿ ಇದೀಗ ತಮಿಳು ಚಿತ್ರದ ಹೀರೋ

ಚಿತ್ರರಂಗದಲ್ಲಿ ರಾತ್ರೋರಾತ್ರಿ ಸ್ಟಾರ್ ಆದವರು ಎಷ್ಟು ಜನ ಹೇಳಿ. ಹೌದು ಒಂದು ಚಿತ್ರ ಯಶಸ್ವಿ ಆದರೆ ಸಾಕು ಅದರಲ್ಲಿನ ನಟ ನಟಿಯರು ಒಂದೇ ದಿನದಲ್ಲಿ ಫೇಮಸ್ ಆಗಿರುತ್ತಾರೆ. ಆದರೆ ಇಲ್ಲೊಬ್ಬ ಖ್ಯಾತ ಉದ್ಯಮಿ ಇದೀಗ ಚಿತ್ರ ಒಂದರ ನಾಯಕನಾಗಿ ಎಲ್ಲೆಡೆ ವೈರಲ್ ಆಗಿದ್ದಾರೆ. ಹೌದು ತಮಿಳುನಾಡಿನಲ್ಲಿ ಸರವಣ ಸ್ಟೋರ್ಸ ಎಂಬ ಬಟ್ಟೆ ಅಂಗಡಿ ತುಂಬಾ ಪ್ರಖ್ಯಾತಿ ಪಡೆದಿರುವಂತದ್ದು. ವರ್ಷಕ್ಕೆ ಕೋಟಿ ಕೋಟಿ ರೂಪಾಯಿಗಳ ವಹಿವಾಟನ್ನು ನಡೆಸುತ್ತದೆ ಈ ಬಟ್ಟೆ ಅಂಗಡಿ. ಆದರೆ ಈಗ ವಿಷಯ ಅದಲ್ಲ. ಇದರ ಮಾಲೀಕರಾದಂತಹ ಅರುಣ್ ಸರವಣನ್ ಅವರು ಇದೀಗ ಒಂದು ಚಿತ್ರದ ಹೀರೋ. ಅದರ ಹೆಸರು ದಿ ಲೆಜೆಂಡ್.

ಹೌದು ಈ ಮೂಲಕ ಅರುಣ್ ಅವರು ತಮಿಳು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಈ ಚಿತ್ರಕ್ಕೆ ಅವರಿಗೆ ನಾಯಕಿಯರಾಗಿ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಊರ್ವಶಿ ರೌಟೇಲಾ ಹಾಗು ಸೌತ್ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾದ ಲಕ್ಷ್ಮಿ ರೈ ಬಣ್ಣ ಹಚ್ಚಿದ್ದಾರೆ. ಸಿನಿಮಾ ಮಾಡಬೇಕೆಂಬ ಹಂಬಲ ಸಣ್ಣ ವಯಸ್ಸಿನಿಂದಲೇ ಇತ್ತು. ಆದರೆ ಗಮನ ವ್ಯವಹಾರದ ಕಡೆಗೆ ಇತ್ತು. ಆದರೆ ಇದೀಗ ಎಲ್ಲವು ಸೆಟ್ಲ್ ಆಗಿದೆ ಹಾಗಾಗಿ ಚಿತ್ರರಂಗಕ್ಕೆ ಬಂದೆ ಎಂದು ಹೇಳುತ್ತಾರೆ ಅರುಣ್. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಜೆ ಡಿ ಚೆರ್ರಿ ಅವರು. ಒಟ್ಟಾರೆಯಾಗಿ ಹೇಳುವುದಾದರೆ ಖ್ಯಾತ ಬಟ್ಟೆ ವ್ಯಾಪಾರೀ ಇದೀಗ ತಮಿಳಿನ ನಾಯಕನಟರುಗಲ್ಲಿ ಒಬ್ಬರಾಗಿದ್ದಾರೆ. ಇನ್ನೇನು ಕೆಲವೇ ದಿನಗಲ್ಲಿ ಅವರ ದಿ ಲೆಜೆಂಡ್ ಚಿತ್ರ ಬಿಡುಗಡೆ ಆಗಲಿದೆ.

%d bloggers like this: