ಬಜಾ಼ರ್ ಹುಡ್ಗನ ಹೊಸ ಅವತಾರಕ್ಕೆ ಫಿದಾ ಆದ ಕನ್ನಡ ಸಿನಿ ಪ್ರೇಕ್ಷಕರು

ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ಬಜಾ಼ರ್ ಸಿನಿಮಾದ ನಾಯಕ ನಟರಾಗಿ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟ ಧನ್ವೀರ್ ತಮ್ಮ ಖಡಕ್ ಲುಕ್, ಅಟ್ರ್ಯಾಕ್ಟೀವ್ ಸ್ಮೈಲ್, ಹೈಟ್ ವೇಯ್ಟ್ ಜೊತೆಗೆ ತಮ್ಮ ಸಹಜ ನಟನೆಯ ಮೂಲಕ ಮೊದಲ ಚಿತ್ರದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ರು. ಅದರಲ್ಲಿಯೂ ವಿಶೇಷವಾಗಿ ನಟ ಧನ್ವೀರ್ ತಮ್ಮ ಮೊದಲ ಚಿತ್ರದಲ್ಲೇ ಅಪಾರ ಫೀಮೆಲ್ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಬಜಾ಼ರ್ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡದಿದ್ದದು ಕೂಡ ಧನ್ವೀರ್ ಅವರಿಗೆ ತಕ್ಕ ಮಟ್ಟಿಗೆ ಯಶಸ್ಸು ತಂದುಕೊಟ್ಟಿತು. ಬಜಾ಼ರ್ ಚಿತ್ರದಲ್ಲಿ ಧನ್ವೀರ್ ಅವರ ಅಭಿನಯ ಕಂಡ ಅಲೆಮಾರಿ, ಕಾಲೇಜ್ ಕುಮಾರ ಸಿನಿಮಾ ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ಅವರು ತಮ್ಮ ಬೈ ಟೂ ಲವ್ ಸಿನಿಮಾಗೆ ಧನ್ವೀರ್ ಅವರನ್ನ ನಾಯಕ ನಟರಾಗಿ ಆಯ್ಕೆ ಮಾಡಿಕೊಂಡರು.

ಈಗಾಗಲೇ ಈ ಬೈ ಟೂ ಲವ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ. ಈ ಬೈ ಟೂ ಲವ್ ಸಿನಿಮಾದಲ್ಲಿ ಕಿಸ್ ಚಿತ್ರ ಖ್ಯಾತಿಯ ನಟಿ ಶ್ರೀ ಲೀಲಾ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನು ನಟ ಧನ್ವೀರ್ ತಮ್ಮ ಎರಡನೇ ಸಿನಿಮಾ ಬಿಡುಗಡೆಗೆ ಮುನ್ನವೇ ಇದೀಗ ಮೂರನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಹೊಸ ಚಿತ್ರದ ಹೆಸರು ವಾಮನ ಎಂದು ಟೈಟಲ್ ಫಿಕ್ಸ್ ಆಗಿದೆ. ಈ ವಾಮನ ಚಿತ್ರಕ್ಕೆ ಶಂಕರ್ ರಾಮನ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಪಕ್ಕ ಮಾಸ್ ಎಂಟರ್ಟೈನರ್ ಸಿನಿಮಾವಾಗಿರಲಿದೆಯಂತೆ.

ನಿನ್ನೆ ತಾನೇ ಅಂದರೆ ಜನವರಿ 14ರಂದು ಧನ್ವೀರ್ ಅವರ ಮೂರನೇ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ವಾಮನನ ಅವತಾರ ತೋರಲು ಕೈಯಲ್ಲಿ ಚಾಕು ಹಿಡಿದು ಧನ್ವೀರ್ ಅವರು ಸಖತ್ ರಾ ಸ್ಟೈಲ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ಈ ವಾಮನ ಚಿತ್ರಕ್ಕೆ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ ಮೆಂಟ್ ಪ್ರೊಡಕ್ಷನ್ ಅಡಿಯಲ್ಲಿ ಚೇತನ್ ಕುಮಾರ್ ಗೌಡ ಅವರು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ವಾಮನ ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಚಿತ್ರ ತಂಡ ತಿಳಿಸಿರುವ ಪ್ರಕಾರ ವಾಮನ ಚಿತ್ರದ ಚಿತ್ರೀಕರಣವನ್ನು ಇದೇ ಜನವರಿ 20ರಿಂದ ಆರಂಭ ಮಾಡಲಾಗುತ್ತದೆಯಂತೆ. ಒಟ್ಟಾರೆಯಾಗಿ ಬಜಾ಼ರ್ ಹುಡುಗ ನಟ ಧನ್ವೀರ್ ಅವರು ಹ್ಯಾಟ್ರಿಕ್ ಬಾರಿಸಲು ಸಜ್ಜಾಗುತ್ತಿದ್ದಾರೆ.

%d bloggers like this: