ಬಿಸಿಸಿಐ ಹೊಸ ನಿರ್ಧಾರ, ಕೊಹ್ಲಿ ಅಭಿಮಾನಿಗಳಿಗೆ ಭಾರಿ ಬೇಸರ

ಬಿಸಿಸಿಐ ಮಹತ್ವದ ನಿರ್ಧಾರದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಭಾರಿ ಬೇಸರ! ವಿರಾಟ್ ಕೊಹ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನದಿಂದ ಹೊರ ಬಂದಿದ್ದಾರೆ. ಇದಕ್ಕೂ ಮುನ್ನ ಅವರು ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿಯೂ ಕೂಡ ನಾಯಕ ಸ್ಥಾನ ತೊರೆದು, ಕೇವಲ ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ನಾಯಕನಾಗಿರುತ್ತೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದರು. ಆದರೆ ಇತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿರಾಟ್ ಕೊಹ್ಲಿ ಅವರಿಗೆ ಬಿಗ್ ಶಾಕ್ ನೀಡಿದೆ.

ಹೌದು ವಿರಾಟ್ ಕೊಹ್ಲಿ ಅವರನ್ನ ಏಕದಿನ ಪಂದ್ಯದ ನಾಯಕ ಸ್ಥಾನದಿಂದ ತೆಗೆದಾಕಿ ಆ ಜಾಗಕ್ಕೆ ರೋಹಿತ್ ಶರ್ಮಾ ಅವರನ್ನು ತರಲಾಗಿದೆ. ಇದು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದೇ ಡಿಸೆಂಬರ್ 26 ರಿಂದ ಜನವರಿ 15ರ ವರೆಗೆ ದಕ್ಷಿಣಾ ಆಫ್ರಿಕಾ ವಿರುದ್ದ ಸರಣಿ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26 ರಿಂದ 30 ರವರೆಗೆ ದಕ್ಷಿಣಾ ಆಫ್ರಿಕಾದ ಗೌಟಿಂಗ್ನ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಜನವರಿ 3ರಿಂದ 7 ರವರೆಗೆ ಜೋಹಾನ್ ಬರ್ಗ್ಸ್ ನಲ್ಲಿ ನಡೆಯಲಿದ್ದು, ಮೂರನೇ ಸರಣಿ ಪಂದ್ಯವು ಕೇಪ್ ಟೌನ್ ನಲ್ಲಿ ಜನವರಿ 11 ರಿಂದ 15ನೇ ವರೆಗೆ ನಡೆಯಲಿದೆ.

ಒಟ್ಟು ಮೂರು ವಲಯಗಳಲ್ಲಿ ಈ ಸರಣಿ ಟೆಸ್ಟ್ ಪಂದ್ಯ ನಡೆಯಲಿದ್ದು ಮುಂದಿನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬದಲು ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡವನ್ನ ಡೀನ್ ಎಲ್ಗರ್ ಮುನ್ನೆಡೆಸಲಿದ್ದು ತೆಂಬಾ ಬವುಮಾ ಉಪನಾಯಕನಾಗಿ ಜವಾಬ್ದಾರಿ ಹೊರಲಿದ್ದಾರೆ. ತಂಡದಲ್ಲಿ ಕಗಿಸೊ, ರಬಾಡ, ಕ್ವಿಂಟನ್ ಡಿ ಕಾಕ್, ಲುಂಗಿ ಎನ್ ಗಿಡಿ, ವ್ಯಾನ್ ಡೆರ್ ಡುಸ್ಸೇನ್, ಕೀಗನ್ ಪೀಟರ್ಸನ್, ವಿಯಾನ್ ಮುಲ್ಡರ್, ಪ್ರೆನಲನ್ ಸುಬ್ರಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್ ಮತ್ತು ಡುನೆ ಒಲಿವರ್ ಇರಲಿದ್ದಾರೆ.

%d bloggers like this: