ಬ್ಯೂಟಿ ಉದ್ಯಮದ ನಂತರ ಈಗ ಮತ್ತೊಂದು ಬೃಹತ್ ಉದ್ಯಮಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಸ್ಟಾರ್ ನಟಿ

ಬಣ್ಣದ ಲೋಕದಲ್ಲಿ ಬಜಾ಼ರ್ ಇರೋವರ್ಗೂ ಮಾತ್ರ ಅವರಿಗೆ ಬೇಡಿಕೆ ಇರುತ್ತದೆ. ಸಾಮಾನ್ಯವಾಗಿ ಕಲಾವಿದರಿಗೆ ವಯಸ್ಸಾಗುತ್ತಿದ್ದಂತೆ ಅವರ ವರ್ಚಸ್ಸು ಮತ್ತು ಅವರ ಚಿತ್ರಗಳನ್ನ ನೋಡುವ ಅಭಿಮಾನಿ ವರ್ಗ ಕಡಿಮೆ ಆಗುತ್ತದೆ. ಜನರೇಶನ್ ಗ್ಯಾಪ್ ಆಗುತ್ತಿದ್ದಂತೆ ಅದೆಂತಹ ಸ್ಟಾರ್ ನಟ-ನಟಿಯಾದರು ಕೂಡ ತೆರೆಯಿಂದ ಮರೆಗೆ ಸರಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲಿಯೂ ನಟಿಯರಂತೂ ಅಬ್ಬಬ್ಬಾ ಅಂದರೂ ಕನಿಷ್ಟ ಎರಡರಿಂದ ಐದು ವರ್ಷ ಒಂದಷ್ಟು ಸಿನಿಮಾಗಳ ಯಶಸ್ಸಿನ ಆಧಾರದ ಮೇಲೆ ಆಯಾಯಾ ಭಾಷೆಯ ಚಿತ್ರರಂಗವನ್ನು ಆಳಬಹುದು. ಆದರೆ ಈ ಲೇಡಿ ಸೂಪರ್ ಸ್ಟಾರ್ ನಟಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ ಎರಡು ದಶಕಗಳು ಪೂರೈಸಿಯೂ ಕೂಡ ಇಂದಿಗೂ ಕೂಡ ಅದೇ ಬೇಡಿಕೆ ಜನಪ್ರಿಯತೆ ಚಾರ್ಮ್ ಉಳಿಸಿಕೊಂಡು ದಕ್ಷಿಣ ಭಾರತ ಚಿತ್ರರಂಗದ ಸುಪ್ರಸಿದ್ದ ನಟಿಯಾಗಿ ಮಿಂಚುತ್ತಿದ್ದಾರೆ.

ಹೌದು ನಾವು ಹೇಳಲು ಹೊರಟಿರುವುದು ನಟಿ ನಯನ ತಾರಾ ಅವರ ಬಗ್ಗೆನೇ, ನಟಿ ನಯನ ತಾರಾ ಅವರು ತಮಿಳು, ತೆಲುಗು, ಕನ್ನಡ ಇತ್ತೀಚೆಗೆ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದು ಸೌತ್ ಸಿನಿ ರಂಗದ ಬಹು ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ಬಿಝಿ಼ ಆಗಿದ್ದು, ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರು ಸಹ ಇತರೆ ಆದಾಯ ಮೂಲದತ್ತ ಗಮನ ಹರಿಸಿದ್ದಾರೆ ನಯನ ತಾರಾ. ನಟಿ ನಯನ ತಾರಾ ಅವರು ಸಿನಿಮಾ ನಟನೆ, ನಿರ್ಮಾಣದ ಜೊತೆಗೆ ವಾಯ್ ವಾಲೆ ಎಂಬ ಕಾರ್ಪೋರೇಟ್ ಮಾದರಿಯ ಟೀ ಶಾಪ್ ಗಳನ್ನ ಆರಂಭಿಸಿದ್ದರು‌. ಇತ್ತೀಚೆಗೆ ಲಿಪ್ ಬಾಮ್ ಎಂಬ ಸೌಂದರ್ಯ ವರ್ಧಕ ಉದ್ಯಮದಲ್ಲಿ ಪಾಲುದಾರಿಕೆ ಹೊಂದುವ ಮೂಲಕ ಸುದ್ದಿಯಾಗಿದ್ದರು. ಇದೀಗ ತನ್ನ ಸ್ನೇಹಿತರೊಟ್ಟಿಗೆ ಪಾಲುದಾರಿಕೆಯಾಗಿ ಅರಬ್ ರಾಷ್ಟ್ರಗಳಲ್ಲಿ ಕಚ್ಚಾ ತೈಲ ಉದ್ಯಮದಲ್ಲಿ ಬರೋಬ್ಬರಿ ನೂರು ಕೋಟಿ ಬಂಡವಾಳ ಹೂಡಲು ಮುಂದಾಗಿದ್ದಾರಂತೆ.

ಕಚ್ಚಾ ತೈಲ ಉದ್ಯಮ ಭಾರಿ ಲಾಭದಾಯಕವಾಗಿದ್ದು, ಇದರಿಂದ ಅಧಿಕ ಆದಾಯ ಗಳಿಸಬಹುದಾದ ಉದ್ದೇಶದಿಂದ ನಟಿ ನಯನ ತಾರಾ ಅವರು ತನ್ನ ಪ್ರೇಯಸಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನೊಳಗೊಂಡಂತೆ ಈ ಕಚ್ಚಾ ತೈಲ ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದ್ದಾರಂತೆ. ನಯನ ತಾರಾ ಅವರು ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಟ್ಟಿಗೆ ನಟಿಸಿದ ಅಣ್ಣಾತೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸದ್ಯಕ್ಕೆ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ನಿರ್ದೇಶನ ಮಾಡುತ್ತಿರುವ ಲಯನ್ ಎಂಬ ಚಿತ್ರದಲ್ಲಿ ನಟಿ ನಯನ ತಾರಾ ಬಾಲಿವುಡ್ ಬಾದ್-ಶಾ ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

%d bloggers like this: