ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ತಪ್ಪದೇ ಸುಖ ಐಶ್ವರ್ಯ ನಿಮ್ಮದಾಗಲಿದೆ

ಬೆಳಿಗ್ಗೆ ಎದ್ದ ತಕ್ಷಣ ನೀವು ಯಾವ ವ್ಯಕ್ತಿಯ ಮುಖವನ್ನು ಅಥವಾ ವಸ್ತು ಅಥವಾ ದೇವರನ್ನು ನೋಡಿದರೆ ನಿಮಗೆ ಅಂದಿನ ದಿನದಂದು ಒಳಿತಾಗುತ್ತದೆ, ಕೆಡುಕಾಗುತ್ತದೆ ಎಂದು ಹಾಗಾದರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಯಾರನ್ನು ನೋಡಬೇಕು, ನೋಡಬಾರದು ಎಂಬುದನ್ನು ತಿಳಿಯುವುದಾದರೆ ಇದನ್ನು ಓದಿ. ಹೌದು ಯಾರಿಗಾದರೂ ಅಂದಿನ ಕೆಲಸ ಕಾರ್ಯಗಳು ಅಂದುಕೊಂಡಂತೆ ಆಗದೇ ಬರೀ ಕಿರಿ ಕಿರಿಯಾಗಿ ತೊಂದರೆ ಆಗುತ್ತಿದ್ದರೆ ಇದಕ್ಕೆ ಅವರು ಬೆಳಿಗ್ಗೆ ಎದ್ದ ತಕ್ಷಣ ನೋಡಿದ ವ್ಯಕ್ತಿಗಳನ್ನು ಬೈದುಕೊಳ್ಳುವುದು ಸಹಜವಾಗಿರುತ್ತದೆ. ಹಾಗಾದರೆ ನೀವು ಬೆಳಿಗ್ಗೆ ಎದ್ದ ಕೂಡಲೇ ನೋಡಬೇಕಾದ್ದಾದರೂ ಏನು ಎಂಬುದಕ್ಕೆ ಇದನ್ನು ಕೊನೆಯವರೆಗೂ ಓದಿ.

ಅವರವರ ನಂಬಿಕೆಯ ಅನುಸಾರವಾಗಿ ನೋಡುವುದಾದರೆ ಕೆಲವರು ಹೆಂಡತಿಯರ ಮುಖವನ್ನು ನೋಡುತ್ತಾರೆ ಹೌದು ಕೆಲವರು ಮದುವೆಯಾದ ಮೇಲೆ ಅದೃಷ್ಠವಂತರಾಗುತ್ತಾರೆ ಆದ್ದರಿಂದಲೇ ಕೆಲವರು ತಮ್ಮ ಮಡದಿಯನ್ನು ಲಕ್ಷ್ಮಿ ಎಂದು ಭಾವಿಸಿ ಪ್ರತಿನಿತ್ಯ ಎದ್ದ ಬಳಿಕ ತಮ್ಮ ಹೆಂಡತಿಯ ಮುಖನೋಡಲು ಬಯಸುತ್ತಾರೆ. ಕೆಲವರಿಗೆ ಗೊಂದಲ ಯಾರನ್ನು ನೋಡಿದರೂ ಅಷ್ಟೆ ಎಂದು ಇಷ್ಟಬಂದಂತೆ ಆಲಸ್ಯತನ ವ್ಯಕ್ತಿಗಳು ಕೂಡ ಇರುತ್ತಾರೆ ಇವರು ಇಂತಹ ನಂಬಿಕೆಗೆ ಒಳಗಾಗುವುದಿಲ್ಲ. ನೀವು ಬೆಳಿಗ್ಗೆ ನೋಡಬಹುದಾದ ಒಂದಷ್ಟು ಅಂಶಗಳಿವೆ. ನೀವು ಬೆಳಿಗ್ಗೆ ಎದ್ದ ಬಳಿಕ ನಿಮ್ಮ ಮನೆಯ ದೇವರನ್ನು ನೆನೆದು ನಮಸ್ಕರಿಸಬಹುದು ಅಥವಾ ನಮ್ಮ ಎಲ್ಲಾ ಪಾಪ ಪುಣ್ಯಗಳ ಭಾರವನ್ನು ಹೊತ್ತಿರುವ ಭೂಮಿ ತಾಯಿಯನ್ನು ನೆನೆದು ನಮಸ್ಕರಿಸುವಂತದ್ದು ಉತ್ತಮವಾಗಿರುತ್ತದೆ.

ಅಂದು ನಿಮ್ಮ ದಿನ ಸಂಪೂರ್ಣವಾಗಿ ಉಲ್ಲಾಸಮಯವಾಗಿರುತ್ತದೆ. ಇನ್ನು ವೇದ ಬ್ರಾಹ್ಮಣರ ಮುಖ ದರ್ಶನ ಒಳಿತಾಗುವುದು ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಬೆಳಿಗ್ಗೆಯ ದರ್ಶನವಾಗಿ ಹಸು ಕಾಮಧೇನು ಮತ್ತು ತುಳಸಿ ಗಿಡ ನೋಡುವುದು ರೂಢಿಯಾಗಿರುತ್ತದೆ. ಈ ತುಳಸಿ ಮತ್ತು ಹಸುವಿನಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆಯಾದ್ದರಿಂದ ಬೆಳಿಗ್ಗೆ ನೋಡುವುದು ದೈವಾನುಗ್ರಹಕ್ಕೆ ಒಳಗಾಗುತ್ತೇವೆ. ಇನ್ನು ನೈಸರ್ಗಿಕ ದೇವರಾಗಿರುವ ಬೆಟ್ಟ ಗುಡ್ಡಗಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡುವುದೂ ಉಂಟು. ಹೋಮ ಹವನದ ದೃಶ್ಯಗಳನ್ನು ಕಂಡರೆ ಶುಭಕರವಾಗಿರುತ್ತದೆ.

ಇನ್ನು ಕೆಲವರು ತಮ್ಮ ಕರವನ್ನು ನೋಡಿ ನಮಸ್ಕರಿಸುತ್ತಾರೆ ಕಾರಣ ಧನಕ್ಕೆ ಅಧಿಪತಿಯಾಗಿರುವ ಲಕ್ಷ್ಮಿ, ವಿಧ್ಯೆಗೆ ಅಧಿಪತಿಯಾದ ಸರಸ್ವತಿ, ಜಯಕ್ಕೆ ಅಧಿಪತಿಯಾದ ಮಹಾವಿಷ್ಟು ದೇವತೆಗಳು ಅಂಗೈನ ಭಾಗದಲ್ಲಿ ಇರುತ್ತಾರೆ ಎಂಬ ನಂಬಿಕೆಯಿಂದ ತಮ್ಮ ಅಂಗೈಯನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡುತ್ತಾರೆ. ಇನ್ನು ಯಾವುದನ್ನು ನೋಡಬಾರದು ಎಂದು ತಿಳಿಯುವುದಾದರೆ ಬೆಳಿಗ್ಗೆ ಎದ್ದ ಕೂಡಲೇ ತಲೆಕೂದಲು ಕಟ್ಟದೆ ಹಾಗೇ ಕೂದಲು ಹರಡಿಕೊಂಡಿರುವ ಹೆಂಡತಿಯ ಮುಖ ನೋಡುವುದರಿಂದ ಅಂದಿನ ಕೆಲಸ ಕಾರ್ಯಗಳು ಕಿರಿ ಕಿರಿ ಉಂಟು ಮಾಡುತ್ತದೆ. ಕುರುಡರನ್ನು, ವಿಧವೆಯರನ್ನು ಸಹ ಬೆಳಿಗ್ಗೆ ಎದ್ದ ತಕ್ಷಣ ನೋಡಬಾರದು ಎಂದು ಸಹ ಹೇಳುತ್ತಾರೆ.

ಇನ್ನು ಮನೆಗಳಲ್ಲಿ ಕೆಲವರು ಪ್ರಾಣಿಗಳ ಚಿತ್ರವನ್ನು ಇರಿಸಿರುತ್ತಾರೆ ಅಂತಹವರು ಕ್ರೂರ ಪ್ರಾಣಿಗಳ ಮುಖ ನೋಡಿದರೆ ಅಂದು ಅಪಾಯ ಕಟ್ಟಿಟ್ಟಬುತ್ತಿ ಎಂಬ ಮಾತಿದೆ. ಕೆಲವು ಹೆಂಗಸರು ಎದ್ದ ಕೂಡಲೇ ಅಡುಗೆ ಕೋಣೆಯ ದರ್ಶನ ಮಾಡುತ್ತಾರೆ ಆದರೆ ಇದು ತಪ್ಪು ಕಾರಣ ತೊಳೆಯದ ಪಾತ್ರೆ, ಅಶುಭ್ರ ವಸ್ತುಗಳನ್ನು ನೋಡುವುದು ಒಳಿತಲ್ಲ, ಅದು ಅಂದು ಮನೆಯಲ್ಲಿ ಕಲಹಕ್ಕೆ ಕಾರಣವಾಗುತ್ತದೆ. ಯಾರ ಮನೆಯಲ್ಲಿ ಮಹಿಳೆಯರು ಎಲ್ಲರೂ ಎದ್ದೇಳುವ ಮುಂಚೆ ಎದ್ದು ಹೊರಗಡೆ ಮನೆಯ ಅಂಗಳದಲ್ಲಿ ಕಸಗೂಡಿಸಿ ರಂಗೋಲಿ ಹಾಕಿ, ತುಳಸಿ ಪೂಜೆ, ದೇವರ ಪೂಜೆ ಪುನಸ್ಕಾರ ಹಣೆಯಲ್ಲಿ ಅರಿಶಿನ ಕುಂಕುಮ ಇಟ್ಟು ಸಾಕ್ಷಾತ್ ಲಕ್ಷ್ಮಿಯ ಸ್ವರೂಪಿಯಾದಂತಿರುವ ಮನೆಯ ಹೆಣ್ಣು ಮಕ್ಕಳ ಮುಖ ನೋಡುವುದರಿಂದ ನಿಮಗೆ ನಿತ್ಯ ಉತ್ತಮವಾದ ದಿನ ಉಲ್ಲಾಸ ಉತ್ಸಾಹ, ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

%d bloggers like this: