ನಮ್ಮ ಭಾರತವು ಸರ್ವ ಜನಾಂಗದ ಶಾಂತಿಯ ತೋಟ ಎಂದು ಇಡೀ ಜಗತ್ತಿಗೆ ಹೊತ್ತು. ಶತ ಶತಮಾನಗಳಿಂದ ನಮ್ಮ ದೇಶದಲ್ಲಿ ಹಲವಾರು ಭಾಷೆಯ ಹಲವಾರು ಧರ್ಮದ ಹಲವಾರು ಜಾತಿಯ ಕೋಟಿ ಕೋಟಿ ಜನ ಸಾಮರಸ್ಯದಿಂದ ಹೊಂದಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಎಲ್ಲೋ ಕೆಲವು ಜನ ಸಾಮರಸ್ಯ ದಿಂದ ಇರದ ಮಾತ್ರಕ್ಕೆ ಎಲ್ಲರೂ ಹಾಗೆ ಇರುವರು ಎಂದು ಹೇಳಲು ಆಗುವುದಿಲ್ಲ. ಹೌದು ನಮ್ಮ ದೇಶ ಇದೆ ವಿಷಯಕ್ಕೆ ಇಡೀ ವಿಶ್ವಕ್ಕೆ ಮಾದರಿ ಆಗಿದೆ. ಹೀಗಾಗಿಯೇ ದೇಶದ ಮೊದಲ ಪ್ರಧಾನಿ ಆಗಿದ್ದ ನೆಹರು ಅವರು ಭಾರತವನ್ನು ಕರಗಿಸುವ ಮೂಸೆ ಎಂದು ಕರೆದಿದ್ದರು.

ಈಗ ಸರ್ವ ಧರ್ಮ ಸಮನ್ವಯ ಸಾರುವ ಮತ್ತೊಂದು ವಿಶೇಷ ಘಟನೆ ನಮ್ಮ ರಾಜ್ಯದ ರಾಜಧಾನಿಯಲ್ಲಿಯೆ ನಡೆದಿದೆ. ಬೆಂಗಳೂರಿನ ಹೊರ ವಲಯದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ಭಕ್ತರ ಗಣ ಬಹಳ ಆದರೆ ತಮ್ಮ ಇಷ್ಟದ ದೇವನಿಗೆ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಬೇಕಾದ ಸ್ಥಳ ಇಲ್ಲದೆ ಪರದಾಡುವಂತಾಗಿತ್ತು. ಆದರೆ ಭಾಷಾ ಎಂಬ ಮುಸ್ಲಿಂ ವ್ಯಕ್ತಿ ಒಬ್ಬರು ದೇವಾಲಯಕ್ಕೆ ಒಂದು ಕೋಟಿ ಬೆಲೆಬಾಳುವ 1650 ಚದರ ಅಡಿ ಜಾಗವನ್ನು ದಾನ ಮಾಡುವ ಮೂಲಕ ಹಿರಿಮೆ ಮೆರೆದಿದ್ದಾರೆ.

ಬೆಂಗಳೂರಿನಿಂದ 40ಕಿಲೋ ಮೀಟರ್ ದೂರದಲ್ಲಿರುವ ವೈಟೆಫೀಲ್ಡ್ ಹೊಸಕೋಟೆ ಭಾಗದಲ್ಲಿ ಈ ದೇವಾಲಯ ಇದೆ. ಕೆಲ ವರ್ಷಗಳ ಹಿಂದೆ ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ದೇವಾಲಯ ಬಿಟ್ಟು ಕೊಡ್ಬೇಕು ಎಂದು ಸರಕಾರ ಆದೇಶಿಸಿತ್ತು. ಒಟ್ಟಾರೆ ದೇವಸ್ಥಾನದ ಸಿಬ್ಬಂದಿ ಮತ್ತು ಭಕ್ತರು ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಭಾಷಾ ಅವರು ಎಲ್ಲರ ಕಷ್ಟವನ್ನು ಅರಿತು ತಮ್ಮ ಜಾಗ ದಾನ ಮಾಡಿ ಹಿಂದೂ ಮುಸ್ಲಿಂ ಸೌಹಾರ್ದತೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.