ಬೆಳಿಗ್ಗೆ ಎದ್ದ ಕೂಡಲೇ ಇವುಗಳನ್ನು ನೋಡಬಾರದೆಂದು ಹಿರಿಯರು ಹೇಳಿದ್ದಾರೆ

ಬೆಳಿಗ್ಗೆ ಎದ್ದ ತಕ್ಷಣ ಇವರ ಮುಖವನ್ನು ನೋಡಿದರೆ ಆಪತ್ತು! ಬಹಳಷ್ಟು ಜನರಿಗೆ ದಿನದ ಕೆಲಸ ಕಾರ್ಯಗಳು, ಯೋಜನೆಗಳು ಕೈಕೊಟ್ಟು ತೊಂದರೆ ಅನುಭವಿಸುವಂತಾದರೆ ಇವತ್ತು ಬೆಳಿಗ್ಗೆ ಯಾರ ಮುಖ ನೋಡಿದೆ ಎಂದು ಬೈದುಕೊಳ್ಳುವುದು ಸಹಜವಾಗಿರುತ್ತದೆ. ನಮ್ಮ ಪೂರ್ವಜರು ಮಾಡಿದ ಸಂಪ್ರದಾಯ, ಹೇಳಿಕೊಟ್ಟಂತಹ ನಿಯಮಗಳು ಕಾಟಾಚಾರಕ್ಕೆ ಅಲ್ಲ, ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳು ಇರುತ್ತವೆ. ನಂಬಿಕೆಗಳು ಕೂಡ ಪರಿಣಾಮ ಬೀರುತ್ತವೆ ಎಂದು ಹೇಳಬೇಕಾಗುತ್ತದೆ. ಬೆಳಿಗೆದ್ದು ಯ್ಯಾರ್ಯಾರ ನೆನೆಯಲಿ, ಎಳ್ಳುಜೀರಿಗೆ ಬೆಳೆಯೋಳ, ಭೂಮಿತಾಯಿ ನೆನೆಯೋಣ ಎಂಬ ಜಾನಪದ ಹಾಡಿನಲ್ಲಿ ಬಹಳ ಅರ್ಥ ಪೂರ್ಣವಾದ ಮಹತ್ವದ ಸಂದೇಶ ಅಡಗಿದೆ.

ಭೂಮಿ ತಾಯಿಯು ನಾವು ಮಾಡಿದ ಪಾಪ ಪುಣ್ಯಗಳ ಮೂಟೆಯ ಸಮೇತ ನಮ್ಮನ್ನು ಹೊತ್ತಿಕೊಂಡು ನಿಂತಿದೆ, ಅಂತಹ ಕರುಣಾಮಯಿಯನ್ನು ನೆನೆದು ಕೃತಜ್ಞರಾಗಿರೋಣ ಎಂದು ಈ ಜನಪದ ಹಾಡು ಸಂದೇಶ ಸಾರುತ್ತದೆ. ಆದರೆ ಇಂದಿನ ಯುವ ಪೀಳಿಗೆ ನಮ್ಮ ಹಿರಿಯರ ಸಂಪ್ರದಾಯ, ಆಚಾರ, ವಿಚಾರ, ಸಂಸ್ಕೃತಿಗಳನ್ನು ಗಾಳಿಗೆ ತೂರಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಜೀವನದಲ್ಲಿ ಆತ್ಮವಿಶ್ವಾಸ, ಉತ್ಸಾಹ, ನಂಬಿಕೆಯನ್ನು ಕಳೆದುಕೊಂಡು, ಸದಾ ಒತ್ತಡದ ಜಂಜಾಟ ಜೀವನದಲ್ಲಿ ಬದುಕುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಯಾವುದನ್ನು, ಯಾರನ್ನು ನೋಡಬೇಕು, ನಮಸ್ಕರಿಸಬೇಕು ಎಂಬುದನ್ನು ಅರಿತಿರುವುದಿಲ್ಲ. ಇದು ಮುಖ್ಯವೇ ಎಂದು ಪ್ರಶ್ನೆ ಹಾಕಿಕೊಂಡಾಗ ಖಂಡಿತಾ ಇದು ಉಪಯುಕ್ತವಾದುದು ಎಂದು ತಿಳಿಯುತ್ತದೆ. ಹಾಗಾದರೆ ಬೆಳಿಗ್ಗೆ ಎದ್ದ ತಕ್ಷಣ ಯಾರನ್ನು ನೋಡಬಾರದು.

ಪುರುಷರು ಬೆಳಿಗ್ಗೆ ಎದ್ದ ತಕ್ಷಣ ಕೂದಲು ಕಟ್ಟದೆ, ಹರಡಿಕೊಂಡು ಇರುವ ಮಹಿಳೆಯನ್ನು ನೋಡಬಾರದು. ಇದರಿಂದ ನಿಮ್ಮ ಅಂದಿನ ಕೆಲಸ ಕಾರ್ಯಗಳು ವಿಫಲವಾಗುತ್ತದೆ. ಬಹಳಷ್ಟು ಮಹಿಳೆಯರು ರಾತ್ರಿ ಊಟವಾದ ಬಳಿಕೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದಿಲ್ಲ, ಬೆಳಿಗ್ಗೆ ಮಾಡಿದರಾಯ್ತು ಎಂದು ಆಲಸ್ಯ ಮಾಡುತ್ತಾರೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಅಶುಭ್ರವಾದ ಪಾತ್ರೆಗಳನ್ನು ನೋಡುವುದರಿಂದ ನಿಮಗೆ ಅಂದು ಕಿರಿಕಿರಿಗಳು ಹೆಚ್ಚಾಗಿ ನಡೆಯುತ್ತವೆ. ಕೆಲವರಿಗೆ ಪ್ರಾಣಿಗಳಿಂದ ಅಪಾರ ಪ್ರೀತಿ, ಆ ಪ್ರೀತಿಗೆ ಯಾವುದೇ ರೀತಿಯ ಅಡ್ಡಿಯಿರುವುದಿಲ್ಲ, ಆದರೆ ಮನೆಯ ಒಳಾಂಗಣದಲ್ಲಿ ಕ್ರೂರವಾದ ಪ್ರಾಣಿ ಚಿತ್ರಗಳನ್ನು ಇಟ್ಟುಕೊಳ್ಳಬಾರದು. ಬೆಳಿಗ್ಗೆ ಎದ್ದೊಡನೆ ಆ ಚಿತ್ರಗಳನ್ನು ನೋಡುವುದರಿಂದ ಅಹಿತಕರ, ಅಪಾಯಕಾರಿ ಘಟನೆಗಳು ಸಂಭವಿಸುತ್ತವೆ.

%d bloggers like this: