ಬೆಳಿಗ್ಗೆ ಎದ್ದ ತಕ್ಷಣ ನಾವು ಹಸ್ತ ಅಥವಾ ದೇವರ ಫೋಟೋಗಳನ್ನು ನೋಡುತ್ತೇವೆ. ಕೆಲವರು ತಮಗೆ ಇಷ್ಟವಾದ ಅದೃಷ್ಟ ತರುವ ವ್ಯಕ್ತಿಗಳನ್ನು ನೋಡಲು ಬಯಸುತ್ತಾರೆ. ಕೆಲವೊಮ್ಮೆ ಎದ್ದು ಕಣ್ಣು ತೆರೆದಾಗ ಕೆಲವು ಸಂಗತಿಗಳು, ಸನ್ನಿವೇಶ, ವಸ್ತುಗಳನ್ನು ನೋಡುತ್ತೇವೆ. ಆದರೆ ಅವುಗಳಲ್ಲಿ ಮುಖ್ಯವಾಗಿ ಕೆಲವು ವಸ್ತು ವಿಷಯಗಳನ್ನು ನೋಡಿದರೆ ಆ ದಿನ ನಿಮಗೆ ತುಂಬಾ ಶುಭದಾಯಕ ವಾಗಿರುತ್ತದೆ. ಹಾಗಾದರೆ ಶುಭತರುವ ಆ ವಸ್ತುಗಳು ಯಾವುದೆಂದು ತಿಳಿಯುವುದಾದರೆ, ಮುಂಜಾನೆಯ ಸಮಯದಲ್ಲಿ ಸೂರ್ಯನ ಎಳೆಯ ಕಿರಣಗಳನ್ನು ನೋಡುವುದರಿಂದ ಆ ದಿನದಂದು ನಿಮಗೆ ಹೊಸ ಭರವಸೆ, ಹೊಸ ಚೈತನ್ಯ ಹುರುವು ಮೂಡುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಮನೆಯ ಹೊರಾಂಗಣ ಅಥವಾ ಒಳಾಂಗಣದಲ್ಲಿ ಜೇಡವು ಮೇಲೆ ಏರುತ್ತಿರುವ ದೃಶ್ಯ ಸನ್ನಿವೇಶವನ್ನು ಕಂಡರೆ, ನಿಮಗೆ ಅಂದು ಪ್ರಗತಿ ಕಾಣುತ್ತದೆ ಎಂಬ ಸಂಕೇತ ಸೂಚಕವಾಗಿದೆ. ಹಸು ಮನೆ ಬಾಗಿಲ ಬಳಿ ಬಂದರೆ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿಯೇ ನಿಮ್ಮ ಮನೆಯ ಬಳಿಗೆ ಬಂದಿದ್ದಾಳೆ ಎಂಬ ಸಂಕೇತ ಸೂಚಕವಾಗಿದೆ. ಹಸು ಬಂದಾಗ ಅದಕ್ಕೆ ಹಸಿರು ಸೊಪ್ಪುಅಥವಾ ಆಹಾರವನ್ನು ನೀಡಿ ಸಾಧ್ಯವಾದರೆ ಕಾಲಿಗೆ ಬಿಟ್ಟು ನಮಸ್ಕರಿಸುವುದರಿಂದ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಮುಂಜಾನೆಯ ಸಮಯದಲ್ಲಿ ದೇವಾಲಯದ ಗಂಟೆಯನ್ನು, ಅದರ ನಾದವನ್ನು ಕೇಳಿದರೆ ನಿಮಗೆ ಎಂದು ದೇವರ ಆಶೀರ್ವಾದ ಸಿಕ್ಕಿದೆ ಎಂದು ಅರ್ಥವಾಗುತ್ತದೆ.

ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಕೆಲಸ ಕಾರ್ಯಗಳಿಗೆ ಚಾಲನೆ ದೊರೆತು, ಸರಾಗವಾಗಿ ಸುಗಮವಾಗಿ ನಡೆಯುತ್ತದೆ. ಬೆಳಿಗ್ಗೆಯ ಸಮಯದಲ್ಲಿ ಪಾರಿವಾಳ, ಗಿಳಿ, ಇತರೆ ಪಕ್ಷಿಗಳು ಚಿಲಿಪಿಲಿ ಶಬ್ಧಕೇಳಿದರೆ ಅಂದು ನಿಮಗೆ ಒಳ್ಳೆಯ ಸಮಾಚಾರವನ್ನು ಕೇಳಬಹುದಾಗಿದ್ದು, ಉತ್ತಮವಾದ ದಿನ ಆಗುತ್ತದೆ, ಅದಲ್ಲದೆ ಆ ದಿನಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ ಎಂದು ತಿಳಿಯುತ್ತದೆ. ಇನ್ನು ಏನಾದರು ಪಕ್ಷಿಗಳು ಮನೆಯ ಮೇಲ್ಛಾವಣಿಯಲ್ಲಿ ಅಥವಾ ಮನೆಯ ಮುಂಭಾಗದಲ್ಲಿ ಬಂದರೆ ಅವುಗಳಿಗೆ ನೀರು ಅಥವಾ ಆಹಾರವನ್ನು ನೀಡಲು ಮರೆಯಬಾರದು. ಬೆಳಿಗ್ಗೆ ನೀವು ಕೆಲಸ ಕಾರ್ಯನಿಮಿತ್ತವಾಗಿ ಹೊರ ಹೋಗುತ್ತಿರುವಾಗ ವಿವಾಹಿತ ಮಹಿಳೆಯು ಕೆಂಪು ಸೀರೆಯನ್ನು ಧರಿಸಿ ನಿಮ್ಮ ಎದುರಿಗೆ ಪ್ರತ್ಯಕ್ಷವಾದರೆ ಅಂದು ನಿಮಗೆ ಅತ್ಯಂತ ಶುಭದಾಯಕ ಅದೃಷ್ಟವನ್ನು ಕಾಣಬಹುದಾಗಿದೆ.