ಸಾಮಾನ್ಯವಾಗಿ ನಮ್ಮ ಹಿರಿಯರು ನಮಗೆ ಬ್ರಾಹ್ಮಿ ಮುಹೂರ್ತ ದಲ್ಲಿ ಎದ್ದೇಳಲು ಹೇಳುತ್ತಾರೆ, ಆ ಸಮಯದಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಿ, ಸಂಕಲ್ಪ ಮಾಡಿ ಎಂದು ಸಲಹೆ ನೀಡುತ್ತಿರುತ್ತಾರೆ. ಕಾರಣ ಅಂದುಕೊಂಡ ಕೆಲಸಗಳು ಜರುಗುತ್ತದೆ, ಉತ್ತಮ ಪ್ರತಿಫಲ ಪಡೆಯಬಹುದು ಎಂಬುದು ಅದರ ಉದ್ದೇಶವಾಗಿದೆ. ಹಾಗಾದರೆ ಆ ಸಮಮ ಸೌರಮಂಡಲದಲ್ಲಿ ಗತಿಸುವುದಾದರು ಏನು ಎಂಬುದನ್ನು ತಿಳಿಯಬೇಕಾಗಿದೆ. ಬ್ರಾಹ್ಮಿ ಮುಹೂರ್ತ ಅದರ ಹಿನ್ನೆಲೆ, ಮಹತ್ವ ತಿಳಿಯುವುದಾದರೆ ಇಂದು ಮಾನವ ನರಳುತ್ತಿರುವ ಸಮಸ್ಯೆಗಳಿಗೆ ರೋಗಗಳಿಗೆ ಮುಖ್ಯವಾದ ಕಾರಣ ಪ್ರಕೃತಿಯೊಂದಿಗೆ ಲಯ ಸಾಧಿಸುವುದರಲ್ಲಿ ವಿಫಲರಾಗಿರುವುದು.
ನಮ್ಮ ಜೀವನದಲ್ಲಾ ನಾವು ಪ್ರಕೃತಿಯ ಲಯದ ಅರಿವನ್ನು ಕಳೆದುಕೊಂಡಿದ್ದೇವೆ ಜೀವನದಲ್ಲಿ ನಾವು ಲಯಬದ್ಧ ಬದುಕಿದರೆ ನಮಗೆ ಯಾರ ಸಹಾಯವಿಲ್ಲದೆ ಸರಿಯಾಗಿ ಬೆಳಿಗ್ಗೆಯ ಸಮಯ 3:00 ಗಂಟೆಗೆ ಎಚ್ಚರಗೊಳ್ಳುತ್ತವೆ. ಆ ಸಮಯದಲ್ಲಿ ನಿಮಗೆ ನೀಡಿರುವಂತಹ ದೀಕ್ಷೆಯನ್ನು ಅಧ್ಯಯನ ಮಾಡಿದ್ದರೆ ಅತ್ಯಂತ ಹೆಚ್ಚು ಪ್ರತಿಫಲವನ್ನು ನೀಡುತ್ತದೆ.
ಭೂಮಿಯ ಪರಿಭ್ರಮಣೆಯಲ್ಲಿ ಬೆಳಗ್ಗಿನ ಜಾವ 3.20 ರಿಂದ 3.40 ರ ನಡುವೆ ಏನೋ ಒಂದು ಮೂಲಭೂತವಾದ ಸಂಗತಿ ಜರಗುತ್ತದೆ. ಅದನ್ನು ನಾವು ಬ್ರಹ್ಮ ಮುಹೂರ್ತ ಎಂದು ಕರೆಯುತ್ತೇವೆ. ಇದು 33 ಡಿಗ್ರಿ ಅಕ್ಷಾಂಶ ದವರಿಗೆ ಮಾತ್ರ ಪ್ರಸ್ತುತ ವಾಗಿರುತ್ತದೆ. ಮಾನವನ ಜೀವನ ವ್ಯವಸ್ಥೆ ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತದೆ, ಆ ಸಮಯದ ಒಂದು ಸಾಧ್ಯತೆ ಆ ಸಾಧ್ಯತೆ ಬಳಸಿಕೊಳ್ಳುವ ಬಗ್ಗೆ ಸ್ವಲ್ಪ ಅರಿವನ್ನು ನಾವು ತಿಳಿದುಕೊಳ್ಳಬೇಕು. ಮಾನವನ ಜೀವ ಒಂದು ವಿಶ್ವ ಅಥವಾ ಅಸ್ತಿತ್ವ ಎಂದು ಕರೆಯಬಹುದು. ಅದು ಹಲವು ವಿಷಯಗಳ ಒಂದು ಉತ್ಪನ್ನವಾಗಿದೆ.
ಮನುಷ್ಯನ ಜೀವನವನ್ನು ಒಂದು ಬ್ರಹ್ಮಾಂಡ ಅಂತ ಕರೆಯುವ ಅದ್ಭುತ ವಿದ್ಯಾಮಾನವಾಗಿದೆ, ಅದರ ಪರಿಣಾಮ ನಮ್ಮ ಅಸ್ತಿತ್ವ ಪ್ರತ್ಯೇಕವಾದುದ್ದಲ್ಲ ಎಂಬುದನ್ನು ತಿಳಿಸುತ್ತದೆ. ಪ್ರಕೃತಿಯೊಂದಿಗೆ ಲಯ ಕಂಡುಕೊಂಡರೆ ಕೆಲವು ಸಂಗತಿಗಳು ನಡೆಯುತ್ತವೆ ಉದಾಹರಣೆಗೆ ಅಮೆರಿಕದಲ್ಲಿರುವ ಟೆನ್ನಿಸ್ ಆಶ್ರಮದಲ್ಲಿ ಇರುವಂತಹ ಕೀಟ ವೊಂದು ಬರೋಬ್ಬರಿ 17ವರ್ಷಕ್ಕೊಮ್ಮೆ ಮಾತ್ರ ಎಚ್ಚರಗೊಳ್ಳುತ್ತದೆ. ಅದು ಹೇಗೆ ಅಷ್ಟು ನಿರ್ದಿಷ್ಟವಾಗಿ ಹದಿನೇಳು ವರ್ಷಕ್ಕೊಮ್ಮೆ ಎಚ್ಚರಗೊಳ್ಳುತ್ತದೆ ಎಂದರೆ ಅದು ಪ್ರಕೃತಿಯೊಂದಿಗೆ ಕಂಡುಕೊಂಡಿರುವ ಲಯದ ಪರಿಣಾಮದಿಂದಾಗಿ ಅದು 17ವರ್ಷಕ್ಕೊಮ್ಮೆ ನಿರ್ದಿಷ್ಟವಾಗಿ ಎಚ್ಚರಗೊಳ್ಳುತ್ತದೆ ಎಚ್ಚರಗೊಂಡು ಸಂತಾನೋತ್ಪತಿ ಮಾಡಿ ಮತ್ತೆ ನಿದ್ದೆಗೆ ಜಾರುತ್ತದೆ.
ಪ್ರಕೃತಿ ಪ್ರಕೃತಿ ಲಯಕ್ಕೆ ಅದು ಒಳಪಟ್ಟಿದೆ, ಆದರೆ ಮನುಷ್ಯರಾದ ನಾವು ಪ್ರಕೃತಿ ಲಯವನ್ನು ಕಳೆದುಕೊಂಡಿದ್ದೇವೆ. ಈ ಲಯ ಕಂಡು ಕೊಳ್ಳುವುದಕ್ಕೆ ಯೋಗವು ಸಹಾಯ ಮಾಡುತ್ತದೆ. ಲಯವನ್ನು ಕೊಂಡುಕೊಳ್ಳುವುದಕ್ಕೆ ಜೀವನದಲ್ಲಿ ಲಯಬದ್ಧವಾಗಿ ಇರುವುದಕ್ಕೆ ಯೋಗ ಕ್ರಮವು ಸಹಾಯಮಾಡುತ್ತದೆ. ಬೆಳಿಗ್ಗೆ 3:00 ನಂತರ ಯಾವುದೇ ಅಲರಾಂ ಸಹಾಯವಿಲ್ಲದೆ ಎಚ್ಚರಗೊಳ್ಳುತ್ತೇವೆ. ಪ್ರಮುಖವಾಗಿ ನೀವು ಆಳವಾದ ನಿದ್ದೆಯಲ್ಲಿದ್ದರು ಸಹ ನಿಮ್ಮಲ್ಲಿರುವ ಒಂದು ಜೀವಂತಿಕೆ ನಿಮ್ಮನ್ನು ಎಚ್ಚರ ಗೊಳಿಸುತ್ತದೆ. ಆ ಸಮಯದಲ್ಲಿ ನೀವು ನಿಮಗೆ ಸಿಕ್ಕಿರುವ ದೀಕ್ಷೆ ಅಭ್ಯಾಸ ಮಾಡಿದರೆ ಅದು ನಿಮಗೆ ಹೆಚ್ಚು ಪ್ರತಿಫಲವನ್ನು ನೀಡುತ್ತದ.
ಭೂಮಿ ನಿಮ್ಮ ಶರೀರದ ದೃಷ್ಟಿಯಿಂದ ವರ್ಧಿಸುತ್ತಿರುತ್ತದೆ, ನಿಮ್ಮಲ್ಲಿ ಒಂದು ರೀತಿಯ ಅರಿವು ಸಾಧಿಸಿದರೆ ಸರಿಯಾದ ಸಮಯಕ್ಕೆ ಮಲಗಿದರೆ ನೀವು ಯಾರ ಸಹಾಯವಿಲ್ಲದೆ ಬ್ರಾಹ್ಮಿ ಮೂಹೂರ್ತದಲ್ಲಿ ಎಚ್ಚರಗೊಳ್ಳುತ್ತೀರಿ. ಬೀಜಕ್ಕೆ ಸಮಯಕ್ಕೆ ತಕ್ಕ ಪೋಷಣೆ ಮಾಡಿದರೆ ಅದು ಮೊಳಕೆಯೊಡೆದು ಬೇಗ ವೇಗವಾಗಿ ಬೆಳೆಯುತ್ತದೆ. ಹಾಗೆ ನಮ್ಮ ಜೀವನವನ್ನು ಸಹ ಪ್ರಕೃತಿಯ ಲಯದೊಂದಿಗೆ ಒಳಪಡಿಸಿದರೆ ಜೀವನ ಅದ್ಭುತವಾದ ಪರಿಣಾಮ ಫಲವನ್ನು ಉಂಟು ಮಾಡುತ್ತದೆ.