ಬೆಂಗಳೂರಿಗೆ ಮತ್ತೊಂದು ಗರಿ, ದೇಶದಲ್ಲೇ ಅತ್ಯಂತ ಸೇಫ್ ನಗರ

ದೇಶದಲ್ಲಿ ಅತ್ಯಂತ ಕಡಿಮೆ ಅಪರಾಧ ಪ್ರಕರಣ ಹೊಂದಿರುವ ಮತ್ತು ಸುರಕ್ಷತೆಯ ವಿಚಾರದಲ್ಲಿ ಉದ್ಯಾನನಗರಿ ಬೆಂಗಳೂರು ನಂಬರ್ ಒನ್ ಸ್ಥಾನ ಪಡೆದಿದೆ. ದೇಶದಲ್ಲಿ ಇತ್ತ ಕಡೆ ಕೋವಿಡ್ ಮೂರನೇ ಅಲೆ ವೇಗವಾಗಿ ಹರಡುತ್ತಿದ್ದು ಕೋವಿಡ್ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ ಐದು ಸಾವಿರ ಗಡಿ ದಾಟಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಸಹ ವಾರಾಂತ್ಯ ದಿನ ಶನಿವಾರ ಮತ್ತು ಭಾನುವಾರ ದಿನಗಳಂದು ಸಂಪೂರ್ಣವಾಗಿ ನಿಷೇಧ ಏರಲಾಗಿದೆ. ಕೋವಿಡ್ ಮೊದಲನೇ ಅಲೆ ಮತ್ತು ಎರಡನೇಯಲ್ಲಿ ಲಾಕ್ ಡೌನ್ ಮಾಡಿದಾಗ ಲಕ್ಷಾಂತರ ಮಂದಿ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಇದೇ ಸಂಧರ್ಭದಲ್ಲಿ ದೇಶಾದ್ಯಂತ ಕಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು.

ಅನೇಕ ಬಾರಿ ಸುರಕ್ಷತೆಯ ವಿಚಾರವಾಗಿ ಸಾರ್ವಜನಿಕರಿಗೆ ಭಯದ ವಾತಾವರಣ ನಿರ್ಮಾಣವಾಗುವಂತೆ ಸೃಷ್ಟಿಯಾಗಿತ್ತು. ದೇಶದ ಪ್ರತಿಷ್ಟಿತ ನಗರಗಳಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿದ್ದವು. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಇತರೆ ನಗರಗಳಿಗೆ ಹೋಲಿಸಿದರೆ ಕಡಿಮೆ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು ಬೆಂಗಳೂರು ಪೊಲೀಸರ ಕಾರ್ಯ ವೈಖರಿ ಎಷ್ಟು ಸಮರ್ಥವಾಗಿದೆ ಎಂದು ತಿಳಿಸುತ್ತದೆ. ಬೆಂಗಳೂರು ಕೋಟ್ಯಾಂತರ ಮಂದಿಗೆ ಬದುಕು ನೀಡಿರುವ ಊರು. ಈ ಉದ್ಯಾನ ನಗರಿಯಲ್ಲಿ ದೇಶದ ನಾನಾ ಭಾಗಗಳ ಜನರು ಬಂದು ನೆಲೆಸಿದ್ದಾರೆ. ಏಕೆಂದರೆ ಬೆಂಗಳೂರು ನಗರ ಅತ್ಯಂತ ಸುರಕ್ಷತೆಯ ನಗರ ಎಂಬುದರಿಂದ‌.

ಇಲ್ಲಿನ ಆಹಾರ, ಉದ್ಯೋಗ, ವಾತಾವರಣ ಇತರೆ ಯಾವ ನಗರದಲ್ಲಿಯೂ ಕೂಡ ನೋಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಬೆಂಗಳೂರು ಮಹಾನಗರ ಆಯುಕ್ತರಾದ ಕಮಲ್ ಪಂತ್ ಅವರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ದಾಖಲಾಗಿವೆ. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಅತ್ಯಂತ ಸುರಕ್ಷತೆಯ ನಗರವಾಗಿದೆ. ಇನ್ನು ಕಾರಾಗೃಹದಲ್ಲಿ ಶಿಕ್ಷೆ ವಿಧಿಸುತ್ತಿರುವ ಅಪರಾಧಿಗಳು ಜೈಲಿನಲ್ಲಿದ್ದುಕೊಂಡೇ ಹೊರಗಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಲವತ್ತು ರೌಡಿಗಳನ್ನು ಬೇರೆ ಕಡೆ ಸ್ಥಳಾಂತರಕ್ಕೆ ವರ್ಗಾಯಿಸಲಾಗಿದೆ.

ಕಳೆದ ವರ್ಷ 2,363 ಸ್ತ್ರೀಯರ ಪ್ರಕರಣ ದಾಖಲಾಗಿದ್ದು, 2072 ಜನರನ್ನ ಪತ್ತೆ ಹಚ್ಚಲಾಗಿದೆ. ಇನ್ನು 2021 ವರ್ಷದಲ್ಲಿ ಯಾವುದೇ ರೀತಿಯ ಬಾಲಕಿ ಅಥವಾ ಬಾಲಕರ ಪ್ರಕರಣ ದಾಖಲಾಗಿಲ್ಲ. ಇನ್ನ ಕಳೆದ ವರ್ಷದಲ್ಲಿ ದಾಖಲಾದ 825 ಕಿಡ್ನ್ಯಾಪ್ ಪ್ರಕರಣಗಳ ಪೈಕಿ 658 ಕೇಸ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಆಯುಕ್ತರಾದ ಕಮಲ್ ಪಂತ್ ಅವರು ತಿಳಿಸಿದರು. ಇನ್ನು ಕಳೆದ ವರ್ಷ ದಾಖಲಾದ ಅಪರಾಧ ಪ್ರಕರಣಗಳನ್ನ ತಿಳಿಯುವುದಾದರೆ 115 ಅತ್ಯಾಚಾರ, 446 ಲೈಂಗಿಕ ದೌರ್ಜನ್ಯ ಪ್ರಕರಣ, 25 ವರದಕ್ಷಿಣಿ ಕೇಸ್ ದಾಖಲಾಗಿದ್ದು, 6423 ಸೈಬರ್ ಅಪರಾಧ ಪ್ರಕರಣಗಳ ಪೈಕಿ 787 ಕೇಸ್ ಮುಕ್ತಿಗೊಳಿಸಲಾಗಿದೆಯಂತೆ. 2019ರಲ್ಲಿ 10,553 2020 ರಲ್ಲಿ 8,892 ಅಪರಾಧ ಪ್ರಕರಣಗಳು ದಾಖಲಾಗಿದ್ದವು‌ ಎಂದು ಗೃಹ ಇಲಾಖೆ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದೆ.

%d bloggers like this: