ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿಸಿ ಸಂತಸ ಪಟ್ಟ ಕನ್ನಡ ಕಿರುತೆರೆಯ ನಟಿ

ಕಡಲೆಕಾಯಿ ಪರಿಷೆಯಲ್ಲಿ ನೂರಾರು ಜನರ ನಡುವೆ ಮಸ್ತ್ ಮಜಾ ಮಾಡಿದ ಕಿರುತೆರೆ ಜನಪ್ರಿಯ ನಟಿ, ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಕಾರ್ತಿಕ ಸೋಮವಾರದಂದು ಬೆಂಗಳೂರಿನ ಐತಿಹಾಸಿಕ ಪ್ರಸಿದ್ದ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಈ ಕಡಲೆಕಾಯಿ ಪರಿಷೆಗೆ ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ವಿವಿಧ ವ್ಯಾಪಾರಿಗಳು ಬಂದು ಇಲ್ಲಿ ವ್ಯಾಪಾರ ಮಾಡುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಕಡಲೆಕಾಯಿ ಪರಿಷೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಯುವಕ ಯುವತಿಯರ ದಂಡೇ ಇಲ್ಲಿ ನೆರೆದಿರುತ್ತದೆ.

ಇಂತಹ ಜನ ಜಂಗುಳಿಯ ಹಳ್ಳಿ ರೂಪದಲ್ಲಿ ನಡೆಯುವ ಜಾತ್ರೆ ನೋಡಲು ಅನೇಕ ಸ್ಟಾರ್ ನಟರು ಕೂಡ ಮುಸುಕುದಾರಿಯಾಗಿ ಬಂದು ಎಂಜಾಯ್ ಮಾಡುತ್ತಾರೆ. ಅದರಂತೆ ಕಡೆ ದಿನವಾದ ಈ ಕಡಲೆಕಾಯಿ ಪರಿಷೆಗೆ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಆಗಮಿಸಿ ಮಸ್ತ್ ಮಜಾ ಮಾಡಿದ್ದಾರೆ. ಹೌದು ಇತ್ತೀಚೆಗೆ ಕಲರ್ಸ್ ಕನ್ನಡ ದ ಜನಪ್ರಿಯ ರಿಯಾಲಿಟಿ ಶೋ ಆದಂತಹ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ತಮ್ಮ ಹಸನ್ಮುಖಿ ಮೊಗದೊಂದಿಗೆ ಎಲ್ಲರೊಂದಿಗೆ ಬೆರೆತು ಮನೆ ಮಂದಿಗೆಲ್ಲಾ ಅಚ್ಚು ಮೆಚ್ಚಾಗಿದ್ದ ನಟಿ ವೈಷ್ಣವಿ ಅವರು ಅಗ್ನಿಸಾಕ್ಷಿ ಧಾರಾವಾಹಿ ನಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ವ್ಯಕ್ಚಿತ್ವದ ಮೂಲಕವೂ ಕೂಡ ವೀಕ್ಷಕರಿಗೆ ಬಹಳ ಪ್ರೀತಿಪಾತ್ರರಾದರು.

ಇನ್ನು ಈ ಕಡಲೆಕಾಯಿ ಪರಿಷೆಗೆ ಬಂದ ನಟಿ ವೈಷ್ಣವಿ ಗೌಡ ಸಿಕ್ಕ ಒಂದಷ್ಟು ಅಭಿಮಾನಿಗಳೊಂದಿಗೆ ಸೆಲ್ಫಿ ಪೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಪೊಲೀಸ್ ಅವರೊಟ್ಟಿಗೂ ಕೂಡ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ ಪರಿಷೆಯಲ್ಲಿ ಇದ್ದಂತಹ ರಿಂಗ್ ಎಸೆಯುವ ಆಟ ಸೇರಿದಂತೆ ಒಂದಷ್ಟು ಆಟವಾಡಿ ಸುತ್ತಾಡಿ ಮಸ್ತ್ ಮಸ್ತ್ ಎಂಜಾಯ್ ಮಾಡಿದ್ದಾರೆ. ತಾವು ಕಡಲೆಕಾಯಿ ಪರಿಷೆಯಲ್ಲಿ ಸಂಭ್ರಮಿಸಿದ ಸಂತಸ ಕ್ಷಣದ ಒಂದಷ್ಟು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

%d bloggers like this: