ಸಲ್ಮಾನ್ ಖಾನ್ ಎಂಬ ಒಂದು ಹೆಸರು ಹಲವು ದಶಕಗಳಿಂದ ಭಾರತ ಚಿತ್ರಂಗದಲ್ಲಿ ರಾರಾಜಿಸುತ್ತ ಬಂದಿದ್ದು ಈಗಲೂ ಕೂಡ ಅದೇ ಹೊಳಪಿನಲ್ಲಿ ಹೊಳೆಯುತ್ತಿದೆ. ಅದೇ ಸಲ್ಮಾನ್ ಖಾನ್ ಅವರಿಗೆ ಇರುವ ತಾಕತ್ತು. ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಎಂದೇ ಕರೆಯಲ್ಪಡುವ ಸಲ್ಮಾನ್ ತಮ್ಮ 55ನೆ ವ್ವಯಸ್ಸಿನಲ್ಲಿಯು ಕೂಡ ಅದೇ ಹುರಿಕಟ್ಟದ ಕಟ್ಟುಮಸ್ತಾದ ಮೈಕಟ್ಟು ಹೊಂದಿದ್ದಾರೆ. ಕೇವಲ ಭಾರತ ಅಲ್ಲ ಏಷ್ಯಾ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಲಕ್ಷ ಲಕ್ಷ ಅಭಿಮಾನಿಗಳನ್ನು ಹೊಂದಿರುವ ನಟ. ಬಾಲಿವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತವಗಿರುವ ಸಲ್ಮಾನ್ ಯಾವದೇ ಚಿತ್ರ ಮಾಡಲಿ ಆ ಚಿತ್ರ ಓಡಿವಲ್ಲಿ ಯಶಸ್ವಿ ಆಗದಿದ್ದರೂ ಕೂಡ ಗಳಿಕೆಯಲ್ಲಿ ತರ್ಕಕ್ಕೆ ಸಿಗದ ಹಣ ಗಳಿಕೆ ಮಾಡಿರುತ್ತದೆ.

ಇನ್ನು ಸಲ್ಮಾನ್ ಮಾಡುವ ಚಿತ್ರಗಳು ಓಡುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಯಾವಗಲು ಇಡೀ ಕುಟುಂಬ ಕೂತು ನೋಡುವ ಸಿನಿಮಾಗಳನ್ನು ಮಾಡುವ ಸಲ್ಮಾನ್ ಪಕ್ಕ ಕಮರ್ಷಿಯಲ್ ಜೊತೆಗೆ ಒಬ್ಬ ಫ್ಯಾಮಿಲಿ ಹೀರೊ. ಇಂತಹ ಸಲ್ಮಾನ್ ಖಾನ್ ಆಸ್ತಿ ಏಷ್ಟಿರಬಹುದು ಎಂದು ಎಲ್ಲರಿಗೂ ಒಂದು ಸಣ್ಣ ಕುತೂಹಲ ಇದ್ದೇ ಇರುತ್ತದೆ. ಹಾಗಿದ್ದರೆ ಇದನ್ನು ಪೂರ್ತಿಯಾಗಿ ಓದಿ. ಕಳೆದ ಹಲವು ವರ್ಷಗಳಿಂದ ಹಿಂದಿ ಬಿಗ್ ಬಾಸ್ ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಸಲ್ಮಾನ್ ಖಾನ್, ಜೊತೆಗೆ ಬೀಯಿಂಗ್ ಹ್ಯೂಮನ್ ಎಂಬ ಸ್ವಂತ ಬ್ರಾಂಡ್ ಹೊಂದಿರುವ ಸಲ್ಮಾನ್ ಕೋಟಿ ಕೋಟಿ ಆದಾಯ ಗಳಿಸುತ್ತಾರೆ.

ಸಲ್ಮಾನ್ ಚಿತ್ರ ಎಂದರೆ ಸಾಕು ಕಣ್ಣು ಮುಚ್ಚಿ ಕೋಟಿ ಕೋಟಿ ಬಂಡವಾಳ ಸುರಿಯವ ನಿರ್ಮಾಪಕ ಇನ್ನೂ ಸಲ್ಮಾನ್ ಅವರಿಗೆ ಒಂದು ಚಿತ್ರಕ್ಕೆ ಎಷ್ಟು ಆದಾಯ ಕೊಡಬೇಡ ಹೇಳಿ. ಬರೋಬ್ಬರಿ ಒಂದು ಚಿತ್ರಕ್ಕೆ ಸಲ್ಮಾನ್ ಪಡೆಯುವ ಸಂಭಾವನೆ 50 ಕೋಟಿ ರೂಪಾಯಿಗಳು. ಬೆಂಗಳೂರಿನ ಗ್ಯಾಲಕ್ಸಿ ಎಂಬ ಅಪಾರ್ಟ್ಮೆಂಟ್ ಒಂದರಲ್ಲಿ ಮನೆ ಹೊಂದಿದ್ದಾರೆ ಸಲ್ಮಾನ್ ಮತ್ತು ಅದರ ಬೆಲೆ ಬರೋಬ್ಬರಿ 16ಕೋಟಿ ರೂಪಾಯಿಗಳು. ತಮ್ಮ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಮತ್ತು ಗೆಳೆಯರೊಂದಿಗೆ ಮಜಾ ಮಾಡಲು ಸಲ್ಮಾನ್ ಅವರು 150ಎಕರೆ ವಿಸ್ತೀರ್ಣದ ಫಾರ್ಮ್ ಹೌಸ್ ಒಂದನ್ನು ಹೊಂದಿದ್ದಾರೆ ಮತ್ತು ಅದರ ಬೆಲೆ ಸುಮಾರು90 ಕೋಟಿ ಎನ್ನಲಾಗುತ್ತಿದೆ.

ದೇಶದ ದೊಡ್ಡ ಶಹರಗಳಲ್ಲಿ ಎಲ್ಲದರಲ್ಲಿ ಫ್ಲಾಟ್ ಖರೀದಿಸಿರುವ ಸಲ್ಮಾನ್ ಅವರ ಒಟ್ಟು ಆಸ್ತಿಯ ಮೌಲ್ಯ 2000 ಕೋಟಿ ರೂಪಾಯಿ ಗಳಷ್ಟು ಇದೆ ಎನ್ನಲಾಗುತ್ತಿದೆ. ಸೂಪರ್ಸ್ಟಾರ್ ಸಲ್ಮಾನ್ ಒಟ್ಟಾರೆಯಾಗಿ ದೇಶದ ಅಗ್ರ ಗಣ್ಯ ಸಿನಿ ರಂಗದ ವ್ಯಕ್ತಿಗಳಲ್ಲಿ ತಾವು ಕೂಡ ಒಬ್ಬರು ಎಂಬುದನ್ನು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಆಸ್ತಿ ಪಾಸ್ತಿ ಹೊಂದಿದ ಸಲ್ಮಾನ್ ಅವರ ಬಗ್ಗೆ ನೀವು ಮತ್ತೊಂದು ವಿಷಯ ತಿಳಿಯಲೇ ಬೇಕು. ಹೌದು ಸಲ್ಮಾನ್ ತಮ್ಮ ಆದಾಯದ ಅರ್ಧಕ್ಕಿಂದ ಹೆಚ್ಚಿನ ಭಾಗವನ್ನು ಅಸಹಾಯಕರಿಗೆ ಸಹಾಯ ಮಾಡಲು ಮೀಸಲಿಟ್ಟಿದ್ದು ಈ ಮೂಲಕ ನಿಜವಾಗಿಯೂ ಅವರೊಬ್ಬ ಒಳ್ಳೆಯ ಹ್ಯೂಮನ್ ಬೀಯಿಂಗ್ ಆಗಿದ್ದಾರೆ. ಕೋಟಿ ಕೋಟಿ ಜನರ ನೆಚ್ಚಿನ ನಾಯಕ ಸಲ್ಮಾನ್ ಅವರ ಸಿಂಪಲ್ ಸ್ಟೋರಿ ಇದು.