ಬೆಂಗಳೂರು ದೇಶಕ್ಕೆ ಮಾದರಿ, ಬೆಂಗಳೂರಿನಲ್ಲಿ ರಸ್ತೆಗಿಳಿದವು ಹೊಸ ಎಲೆಕ್ಟ್ರಿಕ್ ಬಸ್ ಗಳು

ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಕಾರ್ಯರೂಪಕ್ಕೆ, ಉದ್ಯಾನನಗರಿ ಬೆಂಗಳೂರಿನಲ್ಲಿ ವಿದ್ಯುಚ್ಚಾಲಿತ ಸಾರಿಗೆ ಆರಂಭವಾಗಿದೆ. ಹೌದು ಕಳೆದ ಒಂದಷ್ಟು ವರ್ಷಗಳಿಂದ ಸಾರ್ವಜನಿಕ ಸೇವೆಗೆ ಎಲೆಕ್ಟ್ರಿಕ್ ಬಸ್ ಗಳು ಕಾರ್ಯರಂಭ ಆಗಲಿದೆ ಎಂಬ ಸುದ್ದಿ ಕೇಳಿ ಬರುತ್ತಿಲೇ ಇತ್ತು. ಇದೀಗ ಈ ಸುದ್ದಿ ಕಾರ್ಯರೂಪಕ್ಕೆ ಬಂದಿದೆ. ಸೋಮವಾರದಿಂದ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ವಿಧಾನಸೌಧ ಬಳಿ ಈ ಎಲೆಕ್ಟ್ರಿಕ್ ಬಿ.ಎಸ್ ಸಿಕ್ಸ್ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಮಾಲಿನ್ಯಯುಕ್ತ ಅನಿಲದಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯ ತಡೆಗಟ್ಟಲು ಹೊಳೆ ರಹಿತ ವಾಹನಗಳನ್ನ ತಯಾರಿಸುವುದಕ್ಕೆ ಹೆಚ್ಚು ಒತ್ತು ನೀಡಿತು.

ಅದರಂತೆ ರಾಜಧಾನಿ ಬೆಂಗಳೂರಿನ ಮೆಟ್ರೋ ಫೀಡರ್ ಜೊತೆಗೆ ಯಶವಂತಪುರ, ಕೆಂಗೇರಿ, ಕೆ.ಆರ್.ಪುರಂ, ಘಟಕಗಳಲ್ಲಿ ಬಿ.ಎಸ್.ಸಿಕ್ಸ್ ಡೀಸೆಲ್ ಆಧಾರಿತ ಬಸ್ ಸಿದ್ದವಾಗಿದೆ. ನಗರದಲ್ಲಿ ಸೋಮವಾರದಿಂದ ಈ ನೂತನ 90 ವಿದ್ಯುಚ್ಚಾಲಿತ ಸಾರಿಗೆ ವಾಹನ ಮತ್ತು 265 ಬಿ.ಎಸ್. ಸಿಕ್ಸ್ ಬಸ್ ಆರಂಭವಾಗಿದೆ. ಈ ಹೊಸ ಎಲೆಕ್ಟ್ರಿಕ್ ಬಸ್ ಅನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ಚಾರ್ಜಿಂಗ್ ಮಾಡಿದರೆ 180 ಕಿ.ಮೀ ಕ್ರಮಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಬಸ್ ನಲ್ಲಿ ಮೈಕ್ ಸಿಸಿ ಟಿವಿಯನ್ನ ಅಳವಡಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸುವ ಎಲ್ಲಾ ರೀತಿಯ ವ್ಯವಸ್ಥೆಯನ್ನ ರೂಪಿಸಿದ್ದು, ಬಸ್ ನಲ್ಲಿ ಕನಿಷ್ಠ ಹೊಗೆ ಮಾತ್ರ ಹೊರ ಸೂಸುತ್ತದೆ ಎಂದು ತಿಳಿದು ಬಂದಿದೆ.

ಈ ಎಲೆಕ್ಟ್ರಿಕ್ ಬಸ್ ಅನ್ನು ಪ್ರಾರಂಭಿಸುವುದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಹು ವರ್ಷಗಳ ಕನಸಾಗಿದ್ದು, ಈ ಕನಸು ನನಸಾಗಿರುವುದಕ್ಕೆ ಸಂಸ್ಥೆ ಸಂಭ್ರಮ ಪಟ್ಟಿದೆ. ಈ ಎಲೆಕ್ಟ್ರಿಕ್ ಬಸ್ ನಿಂದಾಗಿ ವಾಯು ಮಾಲಿನ್ಯ ನಿಯಂತ್ರಣ ಮಾಡುವುದರ ಜೊತೆಗೆ ಪರಿಸರ ಮಾಲಿನ್ಯ ಆಗುವುದನ್ನ ತಡೆಗಟ್ಟುವಲ್ಲಿ ಉತ್ತಮ ಕಾರ್ಯ ನಿರ್ವಹಿಸಲಿದೆ. ಈ ಎಲೆಕ್ಟ್ರಿಕ್ 535 ಬಿ.ಎಸ್. ಸಿಕ್ಸ್ ಡೀಸೆಲ್ ಸಾರಿಗೆಯನ್ನ ಕಳೆದ ಬಾರಿಯ ಬಜೆಟ್ ನಲ್ಲಿ ಸರ್ಕಾರ ಖರೀದಿ ಮಾಡಲಾಗಿತ್ತು. ಒಟ್ಟು 40 ಎಲೆಕ್ಟ್ರಿಕ್ ಬಸ್ ಗಳು ಮತ್ತು 150 ಬಿ.ಎಸ್.ಸಿಕ್ಸ್ ಡೀಸೆಲ್ ಆಧಾರಿತ ಬಸ್ ಗಳನ್ನ ಬೆಂಗಳೂರು ಸಾರಿಗೆ ಸಂಸ್ಥೆಯು ಖರೀದಿ ಮಾಡಿದೆ. ಹೊಸ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಎಲ್ಲಾ ಎಲೆಕ್ಟ್ರಿಕ್ ಬಸ್ ಗಳು ಸಾರ್ವಜನಿಕ ಸೇವೆಗೆ ಇರಲಿದೆ ಎಂದು ಬಿ.ಎಂ.ಟಿ.ಸಿ ತಿಳಿಸಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲೆಕ್ಟ್ರಿಕ್ ಬಸ್ ಗಳಿಗೆ ನೀಡುವ ಪ್ರೋತ್ಸಾಹಧನವನ್ನುನೀಡುತ್ತಿರುವುದು ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಕೇವಲ ಪ್ರೋತ್ಸಾಹಧನ ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನ ಮಾರಾಟದಲ್ಲಿ ಹೆಚ್ಚಳ ಮಾಡುವುದಕ್ಕಿಂತ ಪರ್ಯಾಯ ಮಾರ್ಗವನ್ನು ಅನುಸರಿಸಿ. ಇನ್ನು ಖಾಸಗಿ ಬಸ್ ಕಂಪನಿಗಳು ತಮ್ಮ ಉದ್ಯಮದಲ್ಲಿ ಲಾಭದಾಯಕವಾಗಿ ಕಾಣುತ್ತಿವೆ. ಆದರೆ ಸರ್ಕಾರದ ಸಾರಿಗೆ ವಾಹನಗಳು ಮಾತ್ರ ನಷ್ಟದಲ್ಲಿ ನಡೆಯುತ್ತಿರುವುದಕ್ಕೆ ಕಾರಣವೇನು ಎಂಬುದನ್ನ ತಿಳಿದು ಅದರ ಅನಗತ್ಯ ಖರ್ಚು ವೆಚ್ಚಗಳನ್ನ ಕಡಿಮೆ ಮಾಡಿ ಅವಲೋಕಿಸಿ ಎಂದು ಬಿಎಂಟಿಸಿ ಅಧಿಕಾರಿಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಲಹೆ ನೀಡಿದರು.

%d bloggers like this: