ಬೆಂಗಳೂರು ನಗರವೊಂದರಲ್ಲೇ ದಾಖಲೆ ಮೊತ್ತದ ಹಣ ಗಳಿಕೆ ಮಾಡಿದ ಜೇಮ್ಸ್ ಚಿತ್ರ

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಹಾಗೂ ಅಪ್ಪು ಅವರ ಕೊನೆಯ ಚಿತ್ರ ಮಾರ್ಚ್ 17 ರಂದು ಭಾರತದಾದ್ಯಂತ ಬಿಡುಗಡೆ ಕಂಡಿದೆ. ಅಪ್ಪು ಅವರು ಬದುಕಿದ್ದಾಗ ಈ ಚಿತ್ರದ ಚಿತ್ರೀಕರಣವನ್ನು ಕಂಪ್ಲೀಟ್ ಆಗಿ ಮುಗಿಸಿದ್ದರು. ಆದರೆ ಇನ್ನು ಚಿತ್ರದ ವಾಯ್ಸ್ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿದ್ದವು. ಹೀಗಾಗಿ ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿನಯಕ್ಕೆ ಅವರ ಸಹೋದರ ಹಾಗೂ ಸ್ಯಾಂಡಲ್ವುಡ್ ನ ನಟ ಶಿವ ರಾಜಕುಮಾರ್ ಅವರು ಅಪ್ಪು ಅವರಿಗೆ ಧ್ವನಿ ನೀಡಿದ್ದಾರೆ. ಮೊದಲಿನಿಂದಲೂ ಜೇಮ್ಸ್ ಸಕ್ಕತ್ ಹವಾ ಕ್ರಿಯೆಟ್ ಮಾಡಿತ್ತು. ಆದರೆ ಇದು ಅಪ್ಪು ಅವರ ಕೊನೆಯ ಸಿನಿಮಾ ಎಂದು ಇದರ ಮೇಲಿನ ನಿರೀಕ್ಷೆಗಳು ಇನ್ನು ಹೆಚ್ಚಾಗಿದ್ದವು.

ಈ ಚಿತ್ರ ಅಪ್ಪು ಅವರ ಅಭಿಮಾನಿಗಳಿಗೆ ತುಂಬಾ ವಿಶೇಷವಾದ್ದರಿಂದ ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಈ ಚಿತ್ರವನ್ನು ಬಿಡುಗಡೆ ಮಾಡಲೇಬೇಕು ಎಂದು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಅಂದುಕೊಂಡಂತೆ ಮಾರ್ಚ್ 17 ಪುನೀತ್ ಅವರ ಹುಟ್ಟುಹಬ್ಬದಂದು ಜೇಮ್ಸ್ ಚಿತ್ರ ಭಾರತದಾದ್ಯಂತ ಬಿಡುಗಡೆಯಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ಎನ್ನುವುದಕ್ಕಿಂತ ಪುನೀತ್ ಅವರು ಇನ್ನಿಲ್ಲ ಎಂಬ ದುಃಖದಿಂದಲೇ ಅನೇಕ ಜನರು ಜೇಮ್ಸ್ ಸಿನಿಮಾವನ್ನು ನೋಡಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾಗುವ ಒಂದು ವಾರದ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದವು.

ಟಿಕೆಟ್ ಬುಕ್ಕಿಂಗ್ ನಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಜೇಮ್ಸ್ ಚಿತ್ರವು ಕೆಜಿಎಫ್ ಚಿತ್ರ ಮಾಡಿದ ಎಲ್ಲ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ. ಇನ್ನೂ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ವಿಚಾರದಲ್ಲಿ ಜೇಮ್ಸ್ ಸಿನಿಮಾ ಕೆಜಿಎಫ್ ಸಿನಿಮಾ ದಾಖಲೆಯನ್ನು ಮುರಿದಿದೆ ಎನ್ನಲಾಗುತ್ತಿದೆ. ನಿನ್ನೆ ರಿಲೀಸ್ ಆದ ಜೇಮ್ಸ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಜೇಮ್ಸ್ ಸಿನಿಮಾ ಪುನೀತ್ ರಾಜಕುಮಾರ್ ಅವರ ಸಿನಿ ಕೆರಿಯರ್ ನಲ್ಲಿ ಮೊದಲ ದಿನ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ ಎನ್ನಲಾಗುತ್ತಿದೆ.

ಹೌದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ಭಾರತದಲ್ಲಿ ಅಷ್ಟೇ ಅಲ್ಲದೆ, 15 ದೇಶಗಳಲ್ಲಿ ಪುನೀತ್ ಅವರ ಚಿತ್ರ ರಿಲೀಸ್ ಆಗಿದ್ದು, ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಮಾರ್ಚ್ 16 ರಂದು ರಾತ್ರಿ 12 ಗಂಟೆಗೆ ಥಿಯೇಟರ್ ಮುಂದೆ ಕಾದು ಕುಳಿತಿದ್ದರು. ಮಾರ್ಚ್ 17 ರಂದು 6:00 ಗಂಟೆಗೆ ಜೇಮ್ಸ್ ಸಿನಿಮಾದ ಫಸ್ಟ್ ಶೋ ಆರಂಭವಾಗಿದ್ದು ಬೆಂಗಳೂರು ಒಂದರಲ್ಲಿಯೇ ಜೇಮ್ಸ್ ಚಿತ್ರ ಒಂದು ದಿನಕ್ಕೆ ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿದೆ ಎನ್ನಲಾಗುತ್ತಿದೆ.

%d bloggers like this: