ಸಾಮಾನ್ಯವಾಗಿ ಭವಿಷ್ಯ ಹೇಳುವವರು ಜಾತಕನೋಡಿ, ಮುಖಲಕ್ಷಣ ನೋಡಿ ಅಥವಾ ನಿಮ್ಮ ಹಸ್ತ ರೇಖೆಯನ್ನು ನೋಡಿ ಭವಿಷ್ಯ ನುಡಿಯುತ್ತಾರೆ. ಆದರೆ ಕೈ ಬೆರಳಿನ ಉಗುರಿನಲ್ಲಿ ಮೂಡುವ ಚಿಹ್ನೆ ಗುರುತುಗಳನ್ನು ನೋಡಿ ಭವಿಷ್ಯ ಹೇಳುವುದು ನಿಜಕ್ಕೂ ಆಶ್ಚರ್ಯ ಎನಿಸಿದರೂ ಸಹ ಇದು ಸತ್ಯವಾಗಿದೆ. ಹೌದು ನಿಮ್ಮ ಕೈಬೆರಳಿನ ಉಗುರಿನಲ್ಲಿ ಏನಾದ್ರೂ ಅರ್ಧ ಚಂದ್ರನ ಆಕೃತಿ ಕಾಣಿಸಿಕೊಂಡರೆ ನಿಮಗದು ಶುಭ ಸೂಚನೆ ಆಗಿದೆ ಈ ಉಗುರಿನ ವಿಶೇಷತೆಯ ಬಗ್ಗೆ ಸಾಮಾನ್ಯ ಜನರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಆದರೆ ಈ ಉಗುರಿನ ಬಗ್ಗೆಯೇ ಅಧ್ಯಾಯನ ನಡೆಸಿದ ಸಂಶೋಧಕರಿಗೆ ಇದು ವಿಶೇಷವಾಗಿ ಕಾಣಿಸುತ್ತದೆ.

ಸಂಶೋಧನಾ ವಿಭಾಗದಲ್ಲಿ ಈ ಅಧ್ಯಾಯನಕ್ಕೆ ಯ್ಯಾನಿಕೋಮ್ಯಾನ್ಸಿ ಎಂದು ಕರೆಯುತ್ತಾರೆ. ಹಾಗದರೆ ಯಾವ ಬೆರಳಿನ ಉಗುರಿನಲ್ಲಿ ಆ ಚಂದ್ರನ ಆಕೃತಿ ಮೂಡಿರಬೇಕು ಎಂದು ತಿಳಿದುಕೊಳ್ಳುವುದು ಸ್ವಾರಸ್ಯಕರ ಸಂಗತಿಯಾಗಿದೆ, ಈ ಚಂದ್ರನ ಆಕೃತಿಯು ಎಲ್ಲರ ಕೈ ಬೆರಳಿನ ಉಗುರಲ್ಲಿ ಮೂಡುವುದಿಲ್ಲ. ನಿಮ್ಮ ತೋರುಬೆರಳಿನಲ್ಲಿ ಈ ರೀತಿಯಾಗಿ ಅರ್ಧ ಚಂದ್ರನ ಆಕೃತಿ ಕಂಡು ಬಂದರೆ ನಿಮಗೆ ಮುಂದಿನ ದಿನಗಳು ಒಳ್ಳೆಯ ಶುಭ ಸಮಾಚಾರಗಳನ್ನು ನೀಡುತ್ತವೆ ಎಂಧರ್ಥ. ಜೊತೆಗೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ ಹೆಚ್ಚು ಇರುತ್ತದೆ.

ಇನ್ನು ನಿಮ್ಮಕರದಲ್ಲಿರುವ ಹೆಚ್ಚು ಉದ್ದವಾಗಿರುವ ಇತರೆ ಬೆರಳುಗಳಿಗಿಂತ ನೀಳವಾಗಿರುವ ಬೆರಳು ಅಂದ್ರೆ ಅದು ಈ ಮಧ್ಯದ ಬೆರಳು. ಈ ಮಧ್ಯದ ಬೆರಳಿನ ಉಗುರಿನಲ್ಲಿ ಅರ್ಧ ಚಂದಿರನ ಆಕೃತಿ ಕಾಣಿಸಿಕೊಂಡರೆ ನಿಮಗೆ, ನಿಮ್ಮ ಕುಟುಂಬದವರಿಗೆ ಲಕ್ಷ್ಮಿ ಕೃಪಾಕಟಾಕ್ಷ ಆಗುತ್ತದೆ ಮತ್ತು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ದಿ ಕಾಣುತ್ತದೆ ಅನಿರೀಕ್ಷಿತ ಶುಭ ಫಲಗಳು ನಿಮ್ಮದಾಗುತ್ತವೆ ಎಂಬುವ ಅರ್ಥವನ್ನು ಕೊಡುತ್ತದೆ.

ಹೆಚ್ಚು ಜನರು ಆಭರಣ ಧರಿಸುವ ಬೆರಳೆಂದರೆ ಅದು ಕಿರುಬೆರಳಿನ ಮುಂಚಿನ ಬೆರಳು, ಉಂಗುರ ಧರಿಸುವ ಬೆರಳು ಅಂತಾನೇ ಕರೆಯಲ್ಪಡುವ ಈ ಉಂಗುರ ಬೆರಳಲ್ಲಿ ಅರ್ಧ ಚಂದ್ರನ ಗುರುತು ಕಾಣಲು ಆರಂಭಿಸಿದರೆ ನಿಮ್ಮ ಜೀವನದಲ್ಲಿ ಮಹತ್ತರವಾದ ಬದಲಾವಣೆಗೆ ಸಮಯ ಕೂಡಿಬರುತ್ತಿದೆ ಎಂಧರ್ಥ. ಸಾಮಾಜಿಕವಾಗಿ ನಿಮ್ಮ ಜೀವನದಲ್ಲಿ ಗೌರವ, ಸ್ಥಾನಮಾನ, ಅಂತಸ್ತು ಬಂದು ನಿಮ್ಮ ಬದುಕಿನ ದಿಕ್ಕಿಗೆ ಹೊಸದೊಂದು ತಿರುವು ನೀಡುವ ಅದೃಷ್ಟ ನಿಮ್ಮದಾಗುತ್ತದೆ ಎಂಬ ಸಂಕೇತವಾಗಿದೆ. ನಿಮ್ಮ ಹಸ್ತದ ಕೊನೆಯ ಬೆರಳು ಕಿರುಬೆರಳಲ್ಲಿ ಸಾಮಾನ್ಯವಾಗಿ ಈ ಅರ್ಧ ಚಂದಿರನ ಆಕೃತಿ ಮುಡುವುದಿಲ್ಲ. ಅಕಸ್ಮಾತ್ ಮೂಡಿದರೆ ನಿಮಗದು ನಿಮ್ಮ ವ್ಯಾಪಾರದಲ್ಲಿ ವ್ಯವಹಾರಗಳಲ್ಲಿ ಮೂರು ಪಟ್ಟು ಧನಲಾಭ ಪಡೆಯುತ್ತೀರಿ ಎಂಧರ್ಥವಾಗಿದೆ.

ನಿಮ್ಮ ಅಂಗೈಯಲ್ಲಿ ಪ್ರಥಮ ಬೆರಳು, ಹೆಡ್ ಆಫ್ ದಿ ಫಿಂಗರ್ಸ್ ಎಂದು ಕರೆಸಿಕೊಳ್ಳುವ ಹೆಬ್ಬೆರಳಿನ ಉಗುರಲ್ಲಿ ಈ ಅರ್ಧ ಚಂದ್ರನ ಗುರುತು ಕಾಣಿಸಿಕೊಂಡರೆ ನಿಮಗೆ ಶುಭ ಸುದ್ದಿ ಮತ್ತು ನಿಮ್ಮ ಮನೆಯಲ್ಲಿ ಯಾವುದಾದರು ಒಂದು ಶುಭಕಾರ್ಯಗಳು ಶೀಘ್ರದಲ್ಲಿ ನಡೆಯುತ್ತವೆ ಎಂದರ್ಥ ಎಂದು ಸಂಶೋಧಕರ ಅಧ್ಯಾಯನ ಪ್ರಕಾರ ತಿಳಿಸುತ್ತದೆ. ಒಟ್ಟಾರೆಯಾಗಿ ಇದು ಅವರವರ ನಂಬಿಕೆಯ ಅನುಸಾರವಾಗಿ ಅವರವರ ವಿವೇಚನೆಗೆ ಬಿಟ್ಟಿರುವ ವಿಷಯವಾಗಿದೆ. ಆದರೆ ಸಂಶೋಧಕರು ಹೇಳಿರುವ ಪ್ರಕಾರ ಈ ಅರ್ಧ ಚಂದ್ರನ ಆಕೃತಿಯು ಯಾವುದಾದರೊಂದು ಬೆರಳಿನ ಉಗುರಿನಲ್ಲಿ ಇದ್ದೇ ಇರುತ್ತದೆ, ಇಲ್ಲದೇ ಹೋದಲ್ಲಿ ಅದು ಆ ವ್ಯಕ್ತಿಗೆ ಅನಾರೋಗ್ಯದ ಸಮಸ್ಯೆಗಳು ಕಾಡಲಾರಂಭಿಸುತ್ತವೆ ಎಂದು ಸಲಹೆಯನ್ನು ಕೂಡ ನೀಡುತ್ತಾರೆ.