ಬೇರೆ ಚಿತ್ರರಂಗಗಳಲ್ಲಿ ಕನ್ನಡಿಗರದ್ದೇ ಹವಾ

ಇದೀಗ ಕನ್ನಡ ಭಾಷೆಯ ನಟರಿಗೂ ಕೂಡ ಪರಭಾಷೆ ಚಿತ್ರಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಕನ್ನಡ ನಟರ ಪ್ರತಿಭೆಯ ಬಗ್ಗೆ ತಮಿಳು, ತೆಲುಗು, ಹಿಂದಿ ನಿರ್ದೇಶಕರಿಗೂ ಕೂಡ ಅರಿವಾಗಿದೆ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣವಿದೆ, ಹೌದು ಯಾವುದೇ ರೀತಿಯ ಹಣಬಲ, ಪ್ರಭಾವ ಹಿನ್ನೆಲೆಯಿಲ್ಲದೆ ತಮ್ಮ ಪ್ರತಿಭೆಯ ಮೂಲಕವೇ ಗುರುತಿಸಿಕೊಂಡ ನಟರು ಈಗ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಅವರ ಸಾಲಿನಲ್ಲಿಯೇ ಕನ್ನಡದ ಈ ನಟರು ಕೂಡ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಕನ್ನಡದ ದಿಯಾ ಸಿನಿಮಾದಲ್ಲಿ ತನ್ನ ಅಮೋಘ ಅಭಿನಯದ ಮೂಲಕ ಎಲ್ಲರ ಮನಗೆದ್ದ ನಾಯಕ ಪೃಥ್ವಿ ಅಂಬಾರ್ ಇದೀಗ ಬಾಲಿವುಡ್ ನಲ್ಲಿ ರೀಮೇಕ್ ಆಗುತ್ತಿರುವ ದಿಯಾ ಸಿನಿಮಾದಲ್ಲಿಯೂ ಕೂಡ ಇವರೇ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ಭಜರಂಗಿ ಚಿತ್ರದಲ್ಲಿ ತನ್ನ ಅಜಾನುಬಾಹು ದೇಹಧಾರ್ಡತೆ, ಖಡಕ್ ಡೈಲಾಗ್ ಡೆಲಿವರಿ, ಭಯಂಕರ ನಟನೆಯಿಂದ ಚಿತ್ರರಸಿಕರ ಗಮನ ಸೆಳೆದಿದ್ದ ಲೋಕಿ ಅಲಿಯಾಸ್ ಭಜರಂಗಿ ಲೋಕಿ ಇದೀಗ ಟಾಲಿವುಡ್ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡುತ್ತಿರುವ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಬದಲಾವಣೆಯ ಪರ್ವ ಆರಂಭವಾಗಿದೆ ಎನ್ನಬಹುದು.

%d bloggers like this: