ಭಾರತ ದೇಶದಿಂದಲೇ ಬರುತ್ತಿದೆ ಸಿಹಿ ಸುದ್ದಿ

ಕೋವಿಡ್19 ಹೆಮ್ಮಾರಿಗೆ ನಲುಗಿರುವ ಇಡೀ ಜಗತ್ತಿನ ಆಯಾ ದೇಶಗಳು ಅವರದೇ ಆದ ವೈಧ್ಯಕೀಯ ಸಂಶೋಧನ ಕೇಂದ್ರಗಳು ಪರಿಹಾರವಾಗಿ ಕೆಲವು ನಿಯಂತ್ರಕ ಔಷಧಿಗಳನ್ನ ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿವೆ. ಅದೇ ರೀತಿಯಲ್ಲಿ ಭಾರತವು ಸಹ ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಎಂಬ ಸಂಸ್ದೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಕಾರದೊಂದಿಗೆ ಸ್ವದೇಶಿಯ ಲಸಿಕೆಯಾಗಿ ಭಾರತ್ ಕೋವ್ಯಾಕ್ಸಿನ್ ಎಂಬ ಔಷಧವನ್ನು ತಯಾರಿಕೆಯಲ್ಲಿ ತೊಡಗಿದ್ದು, ಆ ಲಸಿಕೆಯನ್ನ ಮಾನವರ ಮೇಲೆ ಪ್ರಾಯೋಗಿಕವಾಗಿ ಬಳಸಲು ಡಿಸಿಜಿಐಯಿಂದ ಸ್ವದೇಶಿಯ ಕೋವ್ಯಾಕ್ಸಿನ್ ನ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ಪಡೆದಿದೆ.

ಭಾರತದಲ್ಲೆ ತಯಾರಿಸಲಾಗಿರುವ ಕೋವಿಡ್ 19 ಲಸಿಕೆಯ ಮುಂದಿನ ಪ್ರಯೋಗಕ್ಕೆ ಅನುಮತಿ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಭಾರತ್ ಬಯೋಟಿಕ್ ಎಂಬ ಹೆಸರು ಹೊಂದಿರುವ ಈ ಲಸಿಕೆಯನ್ನು ಪ್ರಯೋಗತ್ಮಕವಾಗಿ ಬಳಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಯಿಂದ ಗ್ರೀನ್ ಸಿಗ್ನಲ್ ಕೊಟ್ಟು ಈ ಲಸಿಕೆಯು ಮಾನವನ ದೇಹದ ಮೇಲೆ ಯಾವ ರೀತಿಯ ಸಕರಾತ್ಮಕ ಪರಿಣಾಮ ಬೀರಬಹುದು ಎಂಬುದನ್ನ ತಜ್ಞರು ಪರಿಶೀಲಿಸಿದ್ದಾರೆ. ಈ ವಿಚಾರವನ್ನು ಅದೇ ಇಲಾಖೆಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎಎನ್ಐ ವರದಿ ನೀಡಿದ್ದಾರೆ.

ಅಕ್ಟೋಬರ್ ಎರಡರಂದು ಈ ವಿಚಾರವಾಗಿ ಕೋವ್ಯಾಕ್ಸಿನ್ ಅನ್ನು ಮೂರನೇಯ ಹಂತವಾಗಿ ಪ್ರಯೋಗ ಮಾಡಲು ಅವಕಾಶ ಕೇಳಿತು. ತದನಂತರ ಅಕ್ಟೋಬರ್ ಐದರಂದು ಭಾರತ್ ಕೋವ್ಯಾಕ್ಸಿನ್ ಲಸಿಕೆಯ ಕಳೆದ ಎರಡು ಹಂತಗಳ ಬಗ್ಗೆ ಮಾನವನ ದೇಹದ ಮೇಲೆ ಪ್ರಯೋಗಮಾಡಿದ ನಂತರ ಅವರಲ್ಲಿ ಆಗುವ ಬದಲಾವಣೆ ಕುರಿತು ಅಂಕಿಅಂಶಗಳನ್ನು ನೀಡಿತ್ತು. ಈ ಭಾರತ್ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗ ಮಾಡುವುದಕ್ಕೆ ದೇಶಾದ್ಯಂತ ಸುಮಾರು ಮುಂಬೈ,ಪಾಟ್ನಾ, ಲಖ್ನೌ, ದೆಹಲಿ ಸೇರಿದಂತೆ 18 ವಯಸ್ಸಳ್ಳು ಬರೋಬ್ಬರಿ ಇಪ್ಪತ್ತೆಂಟುವರೆ ಸಾವಿರ ಯುವಕರ ಮೇಲೆ ಲಸಿಕೆಯ ಪ್ರಯೋಗ ನಡೆಸಲಾಗಿತ್ತು.

%d bloggers like this: