ಭಾರತ ತಂಡದ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾದ ರೋಹಿತ್ ಶರ್ಮ ಅವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೇ

ಕ್ರಿಕೆಟ್ ಭಾರತ ತಂಡದ ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾ ಅವರನ್ನು ನಾಯಕರಾಗಿ ಆಯ್ಕೆ ಮಾಡಿದಕ್ಕಾಗಿ ಬಿಸಿಸಿಐಗೆ ಧನ್ಯವಾದ ತಿಳಿಸಿದ ರೋಹಿತ್! ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿ ಘೋಷಿಸಿದೆ. ಈ ಹಿಂದೆ ಟೀಮ್ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರು ನಿರಂತರ ಕ್ರಿಕೆಟ್ ಪಂದ್ಯಗಳ ಒತ್ತಡದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೊತೆಗೆ ವಿರಾಟ್ ಕೊಹ್ಲಿ ಟಿಟ್ವೆಂಟಿ ಕ್ರಿಕೆಟ್ ಗೂ ಕೂಡ ನಾಯಕ ಸ್ಥಾನ ತೊರೆದು, ಕೇವಲ ಏಕದಿನ ಪಂದ್ಯ ಮತ್ತು ಟೆಸ್ಟ್ ಪಂದ್ಯಗಳಿಗೆ ಮಾತ್ರ ನಾಯಕನಾಗಿರುತ್ತೇನೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದರು. ಆದರೆ ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಏಕದಿನ ಪಂದ್ಯದಿಂದಲೂ ಕೂಡ ಕ್ಯಾಪ್ಟನ್ಶಿಪ್ನಿಂದ ರಿಮೂವ್ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಟೆಸ್ಟ್ ಮೊದಲ ಪಂದ್ಯವು ಡಿಸೆಂಬರ್ 26ರಿಂದ 30ರವರೆಗೆ ದಕ್ಷಿಣಾ ಆಫ್ರಿಕಾದ ಗೌಟಿಂಗ್ ನ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾಗೆ ಹೊಸ ನಾಯಕರಾಗಿ ಆಯ್ಕೆ ಆದ ರೋಹಿತ್ ಶರ್ಮಾ ಅವರಿಗೆ ಭಾರಿ ಸಂಭಾವನೆ ಮೊತ್ತ ಘೋಷಣೆ ಮಾಡಿದೆ. ಬಿಸಿಸಿಐ ನಾಯಕರಾಗಿ ಆಯ್ಕೆಯಾದ ರೋಹಿತ್ ಶರ್ಮಾ ಅವರಿಗೆ ಏಳು ಕೋಟಿ ಸಂಭಾವನೆ ನೀಡಲಿದೆ. ಜೊತೆಗೆ ವಿರಾಟ್ ಕೊಹ್ಲಿ ಅವರ ಸಂಭಾವನೆಯಲ್ಲಿಯೂ ಕೂಡ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬೂಮ್ರಾ ಅವರು ಎ ಪ್ಲಸ್ ದರ್ಜೆಯ ಶ್ರೇಣೆಯ ಸ್ಥಾನ ಹೊಂದಿದ ಕಾರಣ ಇವರ ಸಂಭಾವನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗದೇ ರೋಹಿತ್ ಶರ್ಮಾ ಅವರಿಗೆ ನೀಡುವಂತೆ ವಿರಾಟ್ ಕೊಹ್ಲಿ ಅವರಿಗೂ ವಾರ್ಷಿಕವಾಗಿ ಏಳು ಕೋಟಿ ಸಂಭಾವನೆ ನೀಡಲಾಗುತ್ತಿದೆ.

%d bloggers like this: