ಭಾರತ ತಂಡವನ್ನು ಹಾಡಿ ಹೊಗಳಿದ ಪಾಕಿಸ್ತಾನ ಕ್ರಿಕೆಟಿನ ದಿಗ್ಗಜ

ಆಸ್ಟ್ರೇಲಿಯಾದ ಬ್ರಿಸ್ಟೇನ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ 4ನೇಯ ಪಂದ್ಯ ರೋಚಕ ಪಂದ್ಯವಾಗಿತ್ತು. ಭಾರತ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ, ಆದರೆ ಆಸ್ಟ್ರ್ರೇಲಿಯಾ ತಂಡದಲ್ಲಿ ಸಂಪೂರ್ಣವಾಗಿ ಅನುಭವಿ ಅಟಗಾರರಿಂದ ಕೂಡಿದ್ದು, ಪ್ರಬಲ ಸಾಮರ್ಥ್ಯವನ್ನು ಹೊಂದಿದೆ. ಆದರೆ ಭಾರತ ತನ್ನ ಪ್ರಮುಖ ಬ್ಯಾಟ್ಸ್ ಮನ್ ಆಟಗಾರರನ್ನು ಕಳೆದುಕೊಂಡು ಹೊಸ ಆಟಗಾರರಿಗೆ ಮಣೆಹಾಕಿ, ಪ್ರಬಲ ತಂಡವಾಗಿರುವ ಆಸ್ಟ್ರೇಲಿಯಾ ವಿರುದ್ದ ಹೋರಾಡುತ್ತಿದೆ ಎಂದು ಪಾಕಿಸ್ತಾನ ಮಾಜಿ ಆಟಗಾರ ಶೋಯಬ್ ಅಖ್ತರ್ ಭಾರತ ತಂಡದ ಆಟಗಾರರನ್ನು ಮೆಚ್ಚಿ ಹೊಗಳಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ನಾಲ್ಕನೇಯ ಟೆಸ್ಟ್ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾದ ವಿರುದ್ದ ಸೆಣಸಾಟದಲ್ಲಿ ಯುವ ಆಟಗಾರರಾದ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ ಟನ್ ಸುಂದರ್ ಜೊತೆಗೂಡಿ ಮೊದಲ ಅರ್ಧ ಶತಕ ಗಳಿಸಿ, ಆಸ್ಟ್ರೇಲಿಯಾ ತಂಡದ ಬೌಲರ್ಸ್ ಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಬ್ಬರ 118 ರನ್ ಗಳ ಜೊತೆಯಾಟದಿಂದ ಭಾರತ ತಂಡ ಸಂಕಷ್ಟದಿಂದ ಹೊರ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಭಾರತ ತಂಡ ಸರಣಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಡ್ರಾ ಅಥವಾ ಗೆಲುವನ್ನು ಪಡೆಯುವುದು ಅನಿವಾರ್ಯವಾಗಿದೆ.

ಈ ನಾಲ್ಕನೇಯ ಪಂದ್ಯವನ್ನು ಗಮನಿಸಿರುವ ಪಾಕಿಸ್ತಾನದ ಮಾಜಿ ಅಟಗಾರ,ವೇಗದ ಬೌಲರ್ ಆಗಿರುವ ಶೋಯಬ್ ಅಖ್ತರ್ ತಮ್ಮ ಯ್ಯುಟ್ಯುಬ್ ಚಾನೆಲ್ ನಲ್ಲಿ ಭಾರತದ ಸೌಂದರ್ಯ ಅಂದರೆ ತನ್ನ ಅನುಭವಿ ಆಟಗಾರರನ್ನೆಲ್ಲಾ ಕಳೆದುಕೊಂಡಿದ್ದರು ಸಹ, ಯುವ ಅಟಗಾರರಾದ ಸುಂದರ್, ನಟರಾಜನ್, ಶಾರ್ದೂಲ್ ಠಾಕೂರ್ ಅಂತಹ ಅನನುಭವಿ ಮಕ್ಕಳನ್ನು ಮುಂದಿಟ್ಟುಕೊಂಡು ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ವನ್ನು ಮಣಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದದ್ದು. ಅದಲ್ಲದೆ ಈ ಯುವಕರು ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಎದುರಿಸಿದ ಪರಿ ಅದ್ಭುತ ಎಂದು ಹೊಗಳಿದ್ದಾರೆ. ಈ ಸಂಧರ್ಭದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಈ ಪಂದ್ಯದಲ್ಲಿ ಸೋಲಿಸಿದರೆ ಇದು ಇತಿಹಾಸವಾಗಲಿದೆ ಎಂದು ತಿಳಿಸಿದ್ದಾರೆ.

%d bloggers like this: