ಭಾರತದ ಖ್ಯಾತ ಕ್ರಿಕೆಟ್‌ ಆಟಗಾರ್ತಿಯ ಜೀವನ ಚರಿತ್ರೆ ಚಿತ್ರ ಮಾಡುತ್ತಿದ್ದಾರೆ ನಟಿ ತಾಪ್ಸಿ ಅವರು

ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಿಥಾಲಿ ದೊರೈರಾಜ್ ಅವರ ಸಾಹಸಗಾಥೆ ಜೀವನ ಕುರಿತು ಶಭಾಸ್ ಮಿಥು ಎಂಬ ಸಿನಿಮಾ ಇದೇ ಜುಲೈ 15ರಂದು ಗ್ರ್ಯಾಂಡ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಮಿಥಾಲಿ ರಾಜ್ ಅವರ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ. ತಾಪ್ಸಿ ಪನ್ನು ಮಿಥಾಲಿ ರಾಜ್ ಅವರ ಪಾತ್ರದಲ್ಲಿ ಜೀವ ತುಂಬಿ ನಟಿಸಿದ್ದಾರೆ. ತಾಪ್ಸಿ ಪನ್ನು ಅವರ ನಟನೆಗೆ ಸಿನಿ ಪ್ರೇಕ್ಷಕರು ಫಿಧಾ ಆಗಿದ್ದಾರೆ. ಹೌದು ಭಾರತದ ಸಾಧನೆ ಹಿರಿಮೆಗಳು ಅಂದರೆ ಅನೇಕ ವಿವಿಧ ಕ್ಷೇತ್ರಗಳು ಇವೆ. ಅವುಗಳಲ್ಲಿ ಕ್ರಿಕೆಟ್ ಕ್ಷೇತ್ರ ಕೂಡ ಒಂದು. ಕ್ರಿಕೆಟ್ ಕ್ಷೇತ್ರ ಅಂದರೆ ಕೇವಲ ಪುರುಷರ ತಂಡದ ಕ್ರಿಕೆಟ್ ಮಾತ್ರ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯವಾಗಿದೆ. ಆದರೆ ಇದರ ನಡುವೆ ಮಹಿಳಾ ತಂಡದ ಕ್ರಿಕೆಟ್ ಕೂಡ ನಾವು ಕೂಡ ಯಾರಿಗೂ ಕಡಿಮೆ ಇಲ್ಲ.

ಪುರುಷ ತಂಡದ ಕ್ರಿಕೆಟ್ ಎಷ್ಟು ಸವಾಲು ಇರುತ್ತವೋ ಸಾಧನೆಗಳು ಆಗುತ್ತವೋ, ಅಷ್ಟೇ ಸಾಧನೆಯನ್ನ ಮಹಿಳಾ ಕ್ರಿಕೆಟ್ ನಲ್ಲಿಯೂ ಕೂಡ ಸಾಧಿಸಿ ತೋರಿಸಬಹುದು ಎಂಬುದನ್ನ ಸಾಧಿಸಿ ತೋರಿಸಿಕೊಟ್ಟವರು ಮಿಥಾಲಿ ದೊರೈರಾಜ್. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಶ್ರಮಿಸಿ ಬರೋಬ್ಬರಿ ಹತ್ತು ಸಾವಿರ ರನ ಗಾಡಿ ದಾಟಿಸಿ ಸಾಧನೆಗೈದ ವಿಶ್ವದ ಎರಡನೇ ಆಟಗಾರ್ತಿ ಮತ್ತು ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಮಿಥಾಲಿ ರಾಜ್ ಅವರು ಪಾತ್ರರಾಗಿದ್ದಾರೆ. ಮಿಥಾಲಿ ರಾಜ್ ಅವರ ಇಪ್ಪತ್ಮೂರು ವರ್ಷದ ಕ್ರಿಕೆಟ್ ಅನುಭವದಲ್ಲಿ ಅವರು ಎದುರಿಸಿದ ಸವಾಲು ಮತ್ತು ಸಾಧಿಸಿದ ಸಾಧನೆಗಳನ್ನ ತಿಳಿಸುವ ಸಿನಿಮಾನೇ ಈ ಶಭಾಸ್ ಎಂಬ ಈ ಸ್ಪೂರ್ತಿದಾಯಕ ಸಿನಿಮಾ.

ಈ ಸಿನಿಮಾವನ್ನು ವಯೋಕಾಮ್18 ಸ್ಟೂಡಿಯೋಸ್ ನಿರ್ಮಾಣ ಮಾಡಿದ್ದು, ಶ್ರೀಜಿತ್ ಮುಖರ್ಜಿ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಮಿಥಾಲಿ ರಾಜ್ ಅವರ ಪಾತ್ರದಲ್ಲಿ ತಾಪ್ಸಿ ಪನ್ನು ಅವರ ನಟನೆ ಇದೀಗ ಎಲ್ಲೆಡೆ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಅದು ಯಾವ ಮಟ್ಟಿಗೆ ವಿಮರ್ಶೆ ಆಗುತ್ತಿದೆ ಅಂದರೆ ಮಿಥಾಲಿ ರಾಜ್ ಅವರ ಪಾತ್ರವನ್ನು ನಟಿ ತಾಪ್ಸಿ ಪನ್ನು ಅವರನ್ನ ಹೊರತು ಪಡಿಸಿದರೆ ಮತ್ಯಾವ ನಟಿ ಕೂಡ ಅವರ ಪಾತ್ರದಲ್ಲಿ ಅಷ್ಟು ಜೀವಿಸಿ ನಟಿಸುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಟಿ ತಾಪ್ಸಿ ಪನ್ನು ಅವರು ಮಿಥಾಲಿ ರಾಜ್ ಅವರನ್ನ ಬೆಳ್ಳಿತೆರೆಯಲ್ಲಿ ಪ್ರತಿಬಿಂಬಿಸುತ್ತಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಭಾರತದ ಮಹಿಳಾ ಕ್ರಿಕೆಟ್ ನಲ್ಲಿ ಸಾಧನೆಗೈದ ಮಿಥಾಲಿ ರಾಜ್ ಅವರ ಸಾಹಸ ಜೀವನಗಾಥೆಯಾಗಿರುವ ಶಭಾಸ್ ಮಿಥು ಚಿತ್ರ ಉತ್ತಮವಾಗಿ ಮೂಡಿಬಂದಿದೆ.

%d bloggers like this: