ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್ ಟಾಕಿಗೆ ಅಮೇರಿಕಾದಲ್ಲಿ ಸಿಕ್ತು ದೊಡ್ಡ ಬಂಪರ್

ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್ ಟಾಕ್ಗೆ ಅಮೇರಿಕಾದಿಂದ ಭರ್ಜರಿ ಆಫರ್ ಬಂದಿದೆ, ಅಮೆರಿಕಾದ ದೊಡ್ಡ ಕಂಪನಿಯೊಂದು ಟಿಕ್ ಟಾಕನ್ನು ಖರೀದಿ ಮಾಡಲು ಮುಂದಾಗಿದೆ. ಮೈಕ್ರೋಸಾಫ್ಟ್ ತೆಕ್ಕೆಗೆ ಬೀಳುತ್ತಾ ಚೀನಾದ ಟಿಕ್ ಟಾಕ್ ಎಂಬ ಪ್ರಶ್ನೆ ಸಧ್ಯದ ಮಟ್ಟಿಗೆ ಚರ್ಚೆಯ ವಸ್ತುವಿಷಯವಾಗಿದೆ, ಇದಕ್ಕೆ ಕಾರಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟಿಕ್ ಟಾಕ್ ನ ಬೈಟ್ ಡ್ಯಾನ್ಸ್ ಗೆ ತಮ್ಮ ಜೊತೆ ಈ ವಿಚಾರವಾಗಿ ಚರ್ಚಿಸಲು ಒಂದಷ್ಟು ದಿನಗಳ ನೀಡಿದ ಅವಕಾಶ ನೀಡಿ ತಮ್ಮ ಜೊತೆ ಮಾತನಾಡಲು ಅಹ್ವಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ ಅವರೊಂದಿಗೆ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ತಮ್ಮ ಸ್ವಾಧೀನಕ್ಕೆ ಪಡೆಯುವಂತಹ ವಿಚಾರದ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಪೂರಕವೆಂಬಂತೆ ರಿಪಬ್ಲಿಕ್ ಶಾಸಕರು ಟಿಕ್ ಟಾಕ್ ಅನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ಪರಿಗಣಿಸಿ ಅದಕ್ಕೆ ಸೂಕ್ತ ಬೆಂಬಲ ನೀಡುವಂತೆ ಸೂಚನೆಯನ್ನು ಸಹ ನೀಡಿದ್ದರು ಟ್ರಂಪ್, ಆದರೆ ಸಮಸ್ಯೆ ಏನೆಂದರೆ ಟಿಕ್ ಟಾಕ್ ಸಾಫ್ಟ್ ವೇರ್ ಗ್ರಾಹಕ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ ಇದರಿಂದ ಅಪಾಯವೂ ಉಂಟು ಎಂದು ತಜ್ಞರು ಎಚ್ಚರಿಕೆಯನ್ನೂ ತಿಳಿಸಿದ್ದಾರೆ. ಇದಾದ ನಂತರ ಟ್ರಂಪ್ ತಮ್ಮ ನಿಲುವನ್ನು ಬದಲಾಯಿಸಿಕೊಂಡು ಬೈಟ್ ಡ್ಯಾನ್ಸ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸತ್ಯ ನಾಡೆಲ್ಲ ಅವರ ಮಾತುಕತೆಯ ನಂತರ ವಿದೇಶಿ ಹೂಡಿಕೆ ಸಮಿತಿ ಇದರ ತೀರ್ಮಾನದ ಬಗ್ಗೆ ಈ ವಿಚಾರದ ಬಗ್ಗೆ ಗಮನಿಸುತ್ತಾರೆ ಎಂದು ಶ್ವೇತಭವನದ ಪ್ರಕಟಣೆಯಲ್ಲಿ ಹೊರಡಿಸಲಾಗಿದೆ. ಟಿಕ್ ಟಾಕ್ ಅಮೇರಿಕಾ ಪಾಲಾದರೆ ಅಮೇರಿಕಾ ಮೂಲಕ ಭಾರತಕ್ಕೆ ಮತ್ತೆ ಬಂದರೂ ಬರಬಹುದು.

%d bloggers like this: