ಟಾಲಿವುಡ್ ಮೆಗಾಸ್ಟಾರ್ ಸಿನಿಮಾ ಮಕಾಡೆ ಮಲಗಿದೆ. ಇದು ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿ ವೃತ್ತಿ ಜೀವನದಲ್ಲಿ ಭಾರಿ ನಷ್ಟ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಅದು ಸೌತ್ ಇಂಡಿಯಾ ಅಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು. ಅದು ಯಾವ ಮಟ್ಟಿಗೆ ಅಂದರೆ ತೆರೆ ಮೇಲೆ ಚಿರಂಜೀವಿ ಎಂಟ್ರಿ ಆಗುತ್ತಿದ್ದಂತೆ ಥಿಯೇಟರ್ ಗಳಲ್ಲಿ ತುಂಬಿ ತುಳುಕುತ್ತಿದ್ದ ಅಭಿಮಾನಿಗಳು ಚಿಲ್ಲರೆ ಕಾಸು ಎರಚಿ ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮ ಪಡುತ್ತಿದ್ದರು. ಅಂತಹ ಕ್ರೇಜ಼್ ಹೊಂದಿದ್ದ ಸ್ಟಾರ್ ನಟನ ಸಿನಿಮಾ ಇಂದು ಹೇಳಲಾಗದ ಸ್ಥಿತಿ ತಲುಪಿದೆ. ಹೌದು ಖ್ಯಾತ ನಿರ್ದೇಶಕರಾದ ಕೊರಾಟಲ ಶಿವ ಅವರ ನಿರ್ದೇಶನದಲ್ಲಿ ಮೂಡಿಬಂದ ಮೆಗಾ ಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್, ಪೂಜಾ ಹೆಗ್ಡೆ ಅಭಿನಯದ ಆಚಾರ್ಯ ಸಿನಿಮಾ ಕಳೆದ ವಾರ ದೇಶಾದ್ಯಂತ ರಿಲೀಸ್ ಆಗಿದೆ.

ಆಚಾರ್ಯ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆಚಾರ್ಯ ಸಿನಿಮಾದ ಮೇಲೆ ರಿಲೀಸ್ ಗೂ ಮೊದಲು ಅಷ್ಟಾಗಿ ಕ್ರೇಜ಼್ ಇರಲಿಲ್ಲ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದ ನಿರ್ದೇಶಕ ಕೊರಟಾಲ ಶಿವ ಅವರು ಈ ಆಚಾರ್ಯ ಸಿನಿಮಾವನ್ನು ಕೂಡ ತುಂಬಾ ಚೆನ್ನಾಗಿಯೇ ಮಾಡಿರುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು ಮೆಗಾಸ್ಟಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಇನ್ನೊಂದು ವಿಶೇಷ ಅಂದರೆ ರಾಮ್ ಚರಣ್ ತೇಜಾ ಮಗಧೀರ ಚಿತ್ರದ ನಂತರ ತಮ್ಮ ತಂದೆ ಚಿರಂಜೀವಿ ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದರು. ಅಭಿಮಾನಿಗಳಿಗೆ ಇದು ಕೂಡ ಸಖತ್ ಎಕ್ಸ್ಟೈಟ್ಮೆಂಟ್ ಹುಟ್ಟು ಹಾಕಿತ್ತು. ಆದರೆ ಇವರಿಬ್ಬರ ಕಾಂಬಿನೇಶನ್ ಸಿನಿಮಾ ಇದೀಗ ಸೋತಿದೆ.



ಬರೋಬ್ಬರಿ ನಲವತ್ತು ಕೋಟಿ ಬಂಡವಾಳ ಹೂಡಿಕೆ ಮಾಡಿ ನಿರ್ಮಾಣ ಮಾಡಿದ ಆಚಾರ್ಯ ಸಿನಿಮಾ ಇದೀಗ ಬರೊಬ್ಬರಿ ನೂರು ಕೋಟಿ ಅಷ್ಟ ನಷ್ಟ ಅನುಭವಿಸಿದೆ ಎಂದು ಮೂಲಗಳು ತಿಳಿಸಿದೆ. ಆಚಾರ್ಯ ಸಿನಿಮಾವನ್ನು ಥಿಯೇಟರ್ ನಲ್ಲಿ ಅರ್ಧಗಂಟೆ ಕೂಡ ನೋಡಲು ಆಗುವುದಿಲ್ಲ. ಚಿತ್ರದಲ್ಲಿ ಕಥೆಯೇ ಇಲ್ಲ. ಇದು ಕೊರಟಾಲ ಶಿವ ಅವರ ನಿರ್ದೇಶನದ ಶೈಲಿಯೇ ಅಲ್ಲ ಎಂದು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲಾರ್ಧದಲ್ಲಿ ಹಾಡು, ಫೈಟ್ ಓಕೆ ಅನಿಸಿದರೂ ಕೂಡ ದ್ವಿತಿಯಾರ್ಧದಲ್ಲಿ ಹಳೆ ಕಥೆಯ ಅಪ್ ಡೇಟ್ ಆಗದ ಚಿತ್ರಕತೆ ಚಿತ್ರದ ಬಗ್ಗೆ ನೀರಸ ಮೂಡಿಸುತ್ತದೆ. ಸಾಮಾಜಿಕ ಸಂದೇಶ ಇದ್ದರು ಕೂಡ ಸಿನಿಮಾ ಕಮರ್ಷಿಯಲ್ ಆಗಿ ಇಷ್ಟ ಆಗುವುದಿಲ್ಲ ಎಂದು ಚಿತ್ರ ನೋಡಿದ ಪ್ರೇಕ್ಷಕರು ತಿಳಿಸಿದ್ದಾರೆ. ಈ ಚಿತ್ರದಿಂದ ಸುಮಾರು ತೊಂಬತ್ತು ಕೋಟಿಯಷ್ಟು ನಷ್ಟ ಆಗಿದೆಯಂದು ಹೇಳಲಾಗುತ್ತಿದೆ.