ಕೊರೋನ ವೈರಸ್ ಜನಕವಾಗಿರುವ, ಜಗತ್ತಿನ ಎಲ್ಲಾ ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ದೇಶಕ್ಕೆ ಮತ್ತೆ ಗುನ್ನ ಹೊಡೆದ ಭಾರತ. ಚೀನಾದೇಶದ ಉತ್ಪನ್ನಗಳು ಭಾರತ ದೇಶಾದ್ಯಂತ ತನ್ನದೇಯಾದ ವಿವಿಧ ಮಾರುಕಟ್ಟೆಯನ್ನ ಹೊಂದಿದೆ. ಅದರಲ್ಲೂ ತಾಂತ್ರಿಕತೆ, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಕ್ಷೇತ್ರಗಳಲ್ಲಿ ಚೀನಾ ಭಾರತದಲ್ಲಿ ಭಾರಿ ಪ್ರಭಾವ ಬೀರಿತ್ತು. ಗಡಿಭಾಗ ವಿವಾದಕ್ಕೆ ಸಂಬಂಧಿಸಿದಂತೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘಟನೆ ಭಾರತೀಯರನ್ನು ಬಡಿದೆಬ್ಬಿಸಿದೆ, ಭಾರತೀಯ ಯೋಧರ ಮೇಲಿನ ಅಮಾನವೀಯ ಘಟನೆಗೆ ಭಾರತಸೇನೆಯೂ ಕೂಡ ತಕ್ಕ ಉತ್ತರ ನೀಡಿತ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನ ಅರಿತ ಕೇಂದ್ರ ಸರ್ಕಾರದ ಚೀನಾದ ಬಲಾಡ್ಯ ಶಕ್ತಿಯಾಗಿರುವ ತಂತ್ರಜ್ಞಾನದ ಕ್ಷೇತ್ರಕ್ಕೆ ಹೊಡೆತ ಕೊಡಲು ಕಳೆದ ತಿಂಗಳಲ್ಲಿ ಚೀನಾದ ಸುಮಾರು 56ಆಪ್ ಗಳನ್ನು ದೇಶಾದ್ಯಂತ ನಿಷೇಧ ಮಾಡುವುದರ ಮೂಲಕ ಚೀನಾದೇಶಕ್ಕೆ ಗಾಬರಿಉಂಟು ಮಾಡಿತ್ತು.
ಚೀನಾದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಲುವಾಗಿ ಭಾರತದೇಶ ಮತ್ತೆ ಚೀನಾದ 47ಆಪ್ಗಳನ್ನು ನಿಷೇಧಮಾಡಿದೆ. ಈ ವಿಚಾರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿರುವ ರವಿಶಂಕರ್ ಪ್ರಸಾದ್ ಅವರು ಭಾರತದ ರಾಷ್ಟ್ರೀಯ, ಆಂತರಿಕ ಭದ್ರತೆ ಮತ್ತು ಬಳಕೆದಾರರ ಸುರಕ್ಷತೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಸೋರಿಕೆಯಾಗುವ, ಅಪಾಯ ಸೂಚನೆವುಳ್ಳ ಆಪ್ ಗಳನ್ನು ನಿಷೇಧ ಮಾಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಅದಲ್ಲದೆ ಈಗ ಬ್ಯಾನ್ ಆಗಿರುವ ಚೀನಾದ ಆಪ್ ಗಳ ಜೊತೆಗೆ ಮತ್ತಷ್ಟು ಸುಮಾರು 250ಕ್ಕೂ ಹೆಚ್ಚು ಆಪ್ ಗಳನ್ನು ನಿಷೇಧ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಚೀನಾ ದೇಶಕ್ಕೆ ಭಾರಿ ಆಘಾತ ನೀಡುವ ಸೂಚನೆಯನ್ನ ಕೊಟ್ಟಿದ್ದಾರೆ. ಈನಡುವೆ ಚೀನಾದ ಟೆಲಿಕಾಂ ಕಂಪನಿ ಹೂವಾಯಿ ಭಾರತಕ್ಕೆ ಶಾಕ್ ಕೊಟ್ಟಿದ್ದು ಭಾರತದಲ್ಲಿರುವ ತನ್ನ ಶೇಕಡಾ ಐವತ್ತರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ ಕಾರಣ ಹೂವಾಯಿ ಕಂಪನಿ ಭಾರತದಲ್ಲಿ ಈವರ್ಷದ ಆದಾಯದ ಗುರಿಯನ್ನು ಅರ್ಧದಷ್ಟು ಮಾಡಿರುವುದು.