ಭಾರತ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಬರೆದ ಸುಪ್ರಸಿದ್ಧ ಜೈ ಭೀಮ್ ಚಿತ್ರ

ಎಂಟರ್ಟೈನ್ ಮೆಂಟ್ ಪೋರ್ಟಲ್ ಆದಂತಹ ಐಎಂಡಿಬಿ ಬಳಕೆದಾರರನ್ನು ಆಧರಿಸಿ ಹೆಚ್ಚು ಪ್ರೇಕ್ಷಕರು ಯಾವ ಸಿನಿಮಾವನ್ನು ನೋಡಿದ್ದಾರೆ ಎಂಬ ಆಧಾರದ ಮೇಲೆ ಐಎಂಡಿಬಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಎಂಡಿಬಿ ಬಿಡುಗಡೆ ಗೊಳಿಸಿದ ಈ ಪಟ್ಟಿಯಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ. ಗೂಗಲ್ ನಲ್ಲಿ ಸಿನಿ ಪ್ರೇಕ್ಷಕರು ಜೈ ಭೀಮ್ ಸಿನಿಮಾದ ಬಗ್ಗೆ ಅತಿ ಹೆಚ್ಚು ಬಾರಿ ಹುಡುಕಾಟ ನಡೆಸಿದ್ದಾರಂತೆ. ಜೈ ಭೀಮ್ ಸಿನಿಮಾ ಕಳೆದ ತಿಂಗಳ ನವೆಂಬರ್ 2ರಂದು ಅಮೇಜಾ಼ನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಭಾರಿ ಪ್ರಶಂಸೆ ಪಡೆದುಕೊಂಡಿತ್ತು.

ಈ ಜೈ ಭೀಮ್ ಸಿನಿಮಾ ಶೋಷಿತರ ಕಟ್ಟುಪಾಡನ್ನು, ದಲಿತರ ಮೇಲೆ ನಡೆಯುತ್ತಿದ್ದಂತಹ ದೌರ್ಜನ್ಯವನ್ನು, ಉಳ್ಳವರು ಸಮಾಜದ ವ್ಯವಸ್ಥೆ ಅವರನ್ನ ನಡೆಸಿಕೊಳ್ಳುತ್ತಿದ್ದ ರೀತಿಯ ಚಿತ್ರಣವನ್ನು ಮನೋಜ್ಞವಾಗಿ ಕಣ್ಣಿಗೆ ಕಟ್ಟುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದರು. ಜೊತೆಗೆ ಜೈ ಭೀಮ್ ಚಿತ್ರದಲ್ಲಿ ಶಿಕ್ಷಣದ ಮಹತ್ವವನ್ನು ಕೂಡ ತಿಳಿಸಿತ್ತು. ಟುಡಿ ಎಂಟರ್ಟೈನ್ ಮೆಂಟ್ ನಿರ್ಮಾಣ ಸಂಸ್ಥೆ ಜೈ ಭೀಮ್ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿತ್ತು.ಇನ್ನು ಈ ಜೈ ಭೀಮ್ ಟಿಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿದ್ದರು.‌ ಈ ಚಿತ್ರ ಯಾವ ಮಟ್ಟಿಗೆ ಸದ್ದು ಮಾಡಿತ್ತು ಅಂದರೆ
ಹಾಲಿವುಡ್ ಸಿನಿಮಾಗಳ ರೇಟಿಂಗನ್ನು ಕೂಡ ಬ್ರೇಕ್ ಮಾಡಿತ್ತು.

ಇದೇ ಐಎಂಡಿಬಿ ಜೈ ಭೀಮ್ ಚಿತ್ರಕ್ಕೆ ರೇಟಿಂಗ್ ನಲ್ಲಿ 10 ಅಂಕಗಳಿಗೆ 9.6 ಅಂಕಗಳನ್ನು ನೀಡಿತ್ತು. ಇದೀಗ ಐಎಂಡಿಬಿ ಸಂಸ್ಥೆ ತಿಳಿಸಿದಂತೆ ಜೈ ಭೀಮ್ ಚಿತ್ರ ಗೂಗಲ್ ಸರ್ಚ್ ನಲ್ಲಿಯೂ ಕೂಡ ದಾಖಲೆ ನಿರ್ಮಾಣ ಮಾಡಿದೆ. ಎರಡನೇ ಸ್ಥಾನದಲ್ಲಿ ಹಿಂದಿಯ ಶೇರ್ ಶಾ ಚಿತ್ರವಿದ್ದು, ಮೂರನೇಯ ಸ್ಥಾನದಲ್ಲಿ ರಾಧೆ ಸಿನಿಮಾವಿದೆ. ನಂತರದ ಸ್ಥಾನದಲ್ಲಿ ಬೆಲ್ ಬಾಟಮ್, ಇಳಯ ದಳಪತಿ ವಿಜಯ್ ನಟನೆಯ ಮಾಸ್ಟರ್, ಸೂರ್ಯವಂಶಿ, ಮಲೆಯಾಳಂ ನ ದೃಶ್ಯಂ2 ಸಿನಿಮಾ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆಗಿವೆ.

%d bloggers like this: