ಇನ್ನೇನು ಕಳೆದ ತಿಂಗಳು ಐಪಿಎಲ್ ಮುಗಿಯಿತು ಹಾಗೂ ಮುಂಬೈ ಇಂಡಿಯನ್ಸ್ ತಂಡ ಮತ್ತೆ ಟ್ರೋಫಿ ಜಯಿಸಿತು, ಇದು ಮುಂಬೈ ಇಂಡಿಯನ್ಸ್ ತಂಡದವರ ಐದನೇ ಐಪಿಎಲ್ ಟ್ರೋಪಿ ಆಗಿದೆ. ಸುಮಾರು ಹತ್ತು ತಿಂಗಳ ನಂತರ ಭಾರತವು ಇಂದು ಮೊದಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದು ಇಂದಿನಿಂದ ಆಸ್ಟ್ರೇಲಿಯಾ ತಂಡದ ಜೊತೆ ಸೆಣಸಾಡಲಿದೆ. ಸಿಡ್ನಿಯಲ್ಲಿ ಇಂದು ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಬರೋಬ್ಬರಿ 66 ರನ್ನುಗಳಿಂದ ಜಯಗಳಿಸಿದೆ. ಇನ್ನು ಟಾಸ್ ಸೋತು ಫೀಲ್ಡಿಂಗ್ ಮಾಡಿದ ಭಾರತ ಸ್ವಲ್ಪ ಕಳಪೆ ಪ್ರದರ್ಶನ ತೋರಿತು. ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿ ಬರೋಬ್ಬರಿ 375 ರನ್ನುಗಳ ಟಾರ್ಗೆಟ್ ನೀಡಿತು, ಇದನ್ನು ಬೆನ್ನತ್ತಿದ ಭಾರತ ತಂಡವು ಮೊದಲ 10 ಓವರ್ಗಳಲ್ಲಿ ವಿರಾಟ್ ಕೊಹ್ಲಿ ಮಯಾಂಕ್ ಅಗರ್ವಾಲ್ ಹಾಗೂ ಶ್ರೇಯಸ್ ಐಯರ್ ಅವರ ವಿಕೆಟ್ ಕಳೆದುಕೊಂಡಿತು.

ಇನ್ನೊಂದು ವಿಷಯವೆಂದರೆ ಈ ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು ಅದೇನೆಂದರೆ, ಏಕಾಏಕಿ ಇಬ್ಬರು ಯುವಕರು ಎರಡು ಫಲಕಗಳನ್ನು ಹಿಡಿದುಕೊಂಡು ಮೈದಾನಕ್ಕೆ ನುಗ್ಗಿದಯುವಕರು ಫಲಕವನ್ನು ಎತ್ತಿ ತೋರಿಸಿದರು. ತದನಂತರ ಸೆಕ್ಯೂರಿಟಿ ಗಾರ್ಡ್ ಬಂದು ಇವರನ್ನು ಮೈದಾನದಿಂದ ಆಚೆ ಕರೆದುಕೊಂಡು ಹೋದರು. ಅಷ್ಟಕ್ಕೂ ಯಾರು ಆ ಯುವಕರು ಹಾಗೂ ಫಲಕದಲ್ಲಿ ಏನು ಬರೆದಿತ್ತು ಎಂಬ ಕುತೂಹಲ ಎಲ್ಲರಿಗೂ ಇದೆ. ನಾಯಕರು ಹಿಡಿದಿದ್ದ ಫಲಕದ ಮೇಲೆ ಎಸ್ಬಿಐ ಒನ್ ಬಿಲಿಯನ್ ಡಾಲರ್ ಸಾಲ ಕೊಡಬೇಡಿ ಎಂದು ಬರೆದಿತ್ತು ಅಂದರೆ ಉದ್ಯಮಿ ಅದಾನಿ ಅವರು ಆಸ್ಟ್ರೇಲಿಯಾದಲ್ಲಿ ಶುರು ಮಾಡುತ್ತಿರುವ ಬೃಹತ್ ಮೊತ್ತದ ಕಲ್ಲಿದ್ದಲು ಯೋಜನೆಗೆ ಯುವಕರು ಧಿಕ್ಕಾರ ಹಾಕಿದರು.



ಅದಾನಿ ಅವರ ಈ ಬೃಹತ್ ಯೋಜನೆಗೆ ಭಾರತದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಬರೋಬ್ಬರಿ ಒನ್ ಬಿಲಿಯನ್ ಡಾಲರ್ ಸಾಲವನ್ನು ಕೊಡುತ್ತಿದೆ ಅಂದರೆ ಸುಮಾರು 5 ಸಾವಿರ ಕೋಟಿಗೂ ಅಧಿಕ ಸಾಲವನ್ನು ಕೊಡುತ್ತಿದ್ದು ಇದನ್ನು ಖಂಡಿಸಿ ಯುವಕರು ಮೈದಾನಕ್ಕೆ ನುಗ್ಗಿದ್ದರು. ಇಬ್ಬರು ಯುವಕರು ಆಸ್ಟ್ರೇಲಿಯಾದ ಪ್ರಜೆಗಳೇ ಆಗಿದ್ದಾರೆ ಹಾಗೂ ಈ ಇಬ್ಬರು ಯುವಕರು ಅಷ್ಟೇ ಅಲ್ಲದೆ ಮೈದಾನದ ಹೊರಗೆ ಸುಮಾರು ಜನ ಇದೇ ವಿಷಯವಾಗಿ ಸಾಲ ಕೊಡಬೇಡಿ ಎಂದು ಪ್ರತಿಭಟಿಸಿದರು. ಕೋಟ್ಯಾಂತರ ಜನ ವೀಕ್ಷಿಸುವ ಇಂತಹ ಅಂತರಾಷ್ಟ್ರೀಯ ಪಂದ್ಯದಲ್ಲಿ ಇತರ ಫಲಕಗಳನ್ನು ಹಿಡಿದು ನುಗ್ಗಿದರೆ ಜಗತ್ತಿನಾದ್ಯಂತ ಬಹಳಷ್ಟು ಜನ ಇದನ್ನು ನೋಡಬಲ್ಲರು ಎಂಬುದು ಇವರ ಪ್ಲಾನ್ ಆಗಿತ್ತು.