ಇಡೀ ವಿಶ್ವ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ತಮಿಳು ಚಿತ್ರರಂಗ ಸೇರಿದಂತೆ ಒಟ್ಟಾರೆ ಭಾರತ ಚಿತ್ರೋದ್ಯಮದ ಭವ್ಯ ನಟರಲ್ಲಿ ಒಬ್ಬರಾದ ನಟ ಕಮಲ್ ಹಾಸನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ನೋಡೋಣ. ಅವರ ನೈಜ ಅಭಿನಯಕ್ಕೆ ಸರಿಸಾಟಿಯೆ ಇಲ್ಲ ಜೊತೆಗೆ ಅದಕ್ಕೆ ಮನಸೋಲದವರೇ ಇಲ್ಲ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಕಮಲ್ ಹಾಸನ್ ತಮ್ಮ ಅಭನಯದ ಮೂಲಕವೇ ವಿಶ್ವ ದರ್ಜೆಯ ನಟನಾಗಿ ಬೆಳೆದ ರೀತಿ ನಿಜಕ್ಕೂ ಶ್ಲಾಘನೀಯವಾದುದು, ಹೌದು ತಮಿಳು ಚಿತ್ರದ ಜೀವಂತ ದಂತಕಥೆ ಕಮಲ್ ಹಾಸನ್ ನಮ್ಮ ದೇಶದ ಖ್ಯಾತನಾಮ ರಲ್ಲಿ ಅಗ್ರ ಪಂಥೀಯಲ್ಲಿ ಬರುವಂತವರು.

ಇತ್ತೀಚೆಗೆ ಕಮಲ್ ಅವರು ರಾಜಕೀಯ ರಂಗಕ್ಕೆ ಧುಮುಕಿದ್ದು ಮಕ್ಕಳ್ ನೀದಿ ಮುಯ್ಯಂ ಎಂಬ ಪಕ್ಷವನ್ನು ಸ್ಥಾಪಿಸಿದ್ದು ನಮ್ಮೆಲ್ಲರಿಗೆ ಗೊತ್ತಿದೆ. ಚುನಾವಣೆಗೆ ಕಮಲಹಾಸನ್ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಅದಕ್ಕೆ ಮೊದಲ ಮುನ್ನುಡಿ ಬರೆದಿದ್ದಾರೆ. ಹೌದು ಇತ್ತೀಚಿಗೆ ಮಾತನಾಡಿದ ಕಮಲ್ ಹಾಸನ್ ಮೊದಲು ಶುರು ಮಾಡಿದ ವಿಷಯ ಸಂಸತ್ ಭವನದ ನಿರ್ಮಾಣ. ಇಡೀ ದೇಶ ಕೋರೋಣ ಹೆಮ್ಮರಿಯ ಕಾರಣದಿಂದ ಹಸಿವಿನಿಂದ ಬಳಲುತ್ತಿರುವಾಗ ಸಾವಿರ ಕೋಟಿ ರೂಪಾಯಿಗಳ ಹೊಸ ಸಂಸತ್ ನಿರ್ಮಾಣದ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಇದೇ ಡಿಸೆಂಬರ್ 10 ನೇ ತಾರೀಕು ಪ್ರಧಾನಿ ಮೋದಿಯವರು ದೇಶದ ಹೊಸ ಸಂಸತ್ ಭವನ ನಿರ್ಮಿಸಲು ಅಡಿಗಲ್ಲು ಹಾಕಿದ್ದರು. ಈ ಕುರಿತು ಮಾತನಾಡಿದ ಕಮಲ್ ಕೇಂದ್ರ ಸರ್ಕಾರದ ಹೊಸ ನಿರ್ಧಾರದ ವಿರುದ್ದ ಚಾಟಿ ಬೀಸಿದ್ದಾರೆ. ಚೀನಾದ ಗೋಡೆ ನಿರ್ಮಾಣ ಮಾಡುವಾಗ ಕೂಡ ಸಾವಿರಾರು ಜನ ಸಾವನ್ನಪ್ಪಿದರು. ಅದನ್ನು ಪ್ರಶ್ನಿಸಿದಾಗ ರಾಜ ಪ್ರಜೆಗಳ ರಕ್ಷಣೆಗಾಗಿ ಎಂದಿದ್ದ ರಾಜ ಆದರೆ ನೀವು ಈಗ ಯಾರನ್ನು ರಕ್ಷಿಸಲು ನೂತನ ಸಂಸತ್ ಕಟ್ಟಡ ನಿರ್ಮಿಸುತ್ತಿದ್ದಿರಿ ಎಂದು ಹರಿಹಾಯ್ದರು. ಈ ಮೂಲಕ ಕಮಲ್ ಹಾಸನ್ ಅವರು ಮುಂಬರುವ ವಿಧನಸಭೆ ಚುನಾವಣೆಗೆ ಸಂಪೂರ್ಣ ಸಿದ್ಧ ಎಂಬ ಸಂದೇಶ ನೀಡಿದಂತಿದೆ.