ಭಾರತದ ಸುಪ್ರಸಿದ್ಧ ಪರ್ಫ್ಯೂಮ್ ಬ್ರ್ಯಾಂಡ್ ಗೆ ಕಿಚ್ಚ ಸುದೀಪ್ ಕಿಂಗ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದರೆ ಸಾಕು ಮೊದಲು ನೆನಪಿಗೆ ಬರುವುದು ಅವರ ಸ್ಟೈಲ್ ಮತ್ತು ಅವರ ಗತ್ತು. 25 ವರ್ಷಗಳ ಹಿಂದೆ ಚಂದನವನಕ್ಕೆ ಕಾಲಿಟ್ಟ ಕಿಚ್ಚ ಸುದೀಪ್ ಇದೀಗ ಕನ್ನಡದ ಬ್ರಾಂಡ್ ಆಗಿ ಬೆಳೆದು ನಿಂತಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಕನ್ನಡದ ಒಬ್ಬ ನಟ ಈಗ ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ನಂಬಲೇಬೇಕು. ಇದೀಗ ಕಿಚ್ಚ ಅವರ ಮಾರ್ಕೆಟ್ ವ್ಯಾಲ್ಯೂ ದಿನದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದೀಗ ಕಿಚ್ಚ ಸುದೀಪ್ ಅವರ ಗರಿಮೆಗೆ ಮತ್ತೊಂದು ವಿಷಯ ಸೇರ್ಪಡೆ ಆಗಿದೆ.

ಹೌದು ಪುರುಷರ ಅಚ್ಚುಮೆಚ್ಚಿನ ಇಂಟರ್ನ್ಯಾಷನಲ್ ಫ್ರಾಗ್ರನ್ಸ್ ಬ್ರಾಂಡ್ ಆಗಿರುವ ಡೆನ್ವರ್ ಕಂಪನಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈ ಡೆನ್ವರ್ ಪರ್ಫ್ಯೂಮ್ ಹೆಸರುವಾಸಿಯಾಗಿದ್ದು ಇದೀಗ ಕನ್ನಡನಾಡಿನಲ್ಲಿಯು ಸಹ ಛಾಪು ಮೂಡಿಸುವ ಆತುರದಲ್ಲಿ ಇದೆ. ಹೀಗಾಗಿ ಕನ್ನಡದ ಖ್ಯಾತ ನಟ ಯುವಕರ ನೆಚ್ಚಿನ ಸುದೀಪ್ ಅವರನ್ನು ಬ್ರಾಂಡ್ ಅಂಬಾಸೆಡರ್ ಆಗಿ ಮಾಡಿಕೊಂಡು ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರಲು ಸಜ್ಜಾಗಿದೆ.

ಈ ಕುರಿತು ಮಾತನಾಡಿದ ಡೆನ್ವರ್ ಪರ್ಫ್ಯೂಮೆ ಕಂಪನಿಯ ಮಾರುಕಟ್ಟೆಯ ಮಾರಾಟ ವಿಭಾಗದ ನಿರ್ದೇಶಕರಾದ ಸೌರಭ ಮಾತನಾಡಿ ಹಿಂದಿಯಲ್ಲಿ ಶಾರುಕ್ ಖಾನ್ ಹಾಗೂ ತೆಲುಗಿನಲ್ಲಿ ಮಹೇಶ್ ಬಾಬು ಅವರಂತಹ ಖ್ಯಾತನಾಮರ ಸಹಯೋಗದಿಂದ ಆಂಧ್ರಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿದ್ದೇವೆ, ಈಗ ಸುದೀಪ್ ಅವರ ಸಹಯೋಗದಿಂದ ಕರ್ನಾಟಕದಲ್ಲಿಯೂ ನಮ್ಮ ಹೆಜ್ಜೆ ಗುರುತು ಮೂಡಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.

ಹೊಸ ಬ್ರಾಂಡ್ ಅಂಬಾಸೆಡರ್ ಆಗಿರುವ ಕುರಿತು ಮಾತನಾಡಿದ ಕಿಚ್ಚ ಸುದೀಪ್ ಅವರು ಕಂಪನಿಯು ಡೆನ್ವರ್ ಫ್ರೇಗ್ರನ್ಸ್ ಸಂಸ್ಥೆ ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧಾತ್ಮಕತೆ ಯಿಂದ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ ಇದು ಯುವ ಗ್ರಾಹಕರನ್ನು ಆಕರ್ಷಿಸುತ್ತದೆ. ಇಂತಹ ಬ್ರಾಂಡಿನ ಭಾಗವಾಗುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.

%d bloggers like this: