ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವು ಸಹ ಅತ್ಯಂತ ಸ್ಪರ್ಧೆಯಿಂದ ಕೂಡಿರುವ ಉದ್ಯಮವಾಗಿದೆ. ಈ ಕ್ಷೇತ್ರಕ್ಕೆ ಯಾರು ಬೇಕಾದರೂ ಬಂದು ಚಿತ್ರ ಮಾಡಬಹುದು, ಆದರೆ ಇಲ್ಲಿ ಬಂದು ಸಿನಿಮಾ ಮಾಡುವುದರ ಜೊತೆಗೆ ಗೆಲ್ಲುವುದು ಅಷ್ಟು ಸುಲಭವಾದ ಮಾತಲ್ಲ, ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎನ್ನುವ ಹಾಗೆ ಕಠಿಣ ಪರಿಶ್ರಮದಿಂದ ಮಾತ್ರ ಇಲ್ಲಿ ಹೆಸರು ಗಳಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಒಂದು ವರ್ಷಕ್ಕೆ ಸರಿ ಸುಮಾರು ಸಾವಿರಾರು ಸಿನಿಮಾಗಳು ತಯಾರಾಗಿ ಬಿಡುಗಡೆಗೊಳ್ಳುತ್ತವೆ, ಆದರೆ ಎಲ್ಲಾ ಸಿನಿಮಾಗಳು ಕೂಡ ಹಿಟ್ ಆಗುವುದಿಲ್ಲ, ಇತಿಹಾಸ ಸೃಷ್ಠಿಸುವುದಿಲ್ಲ. ಅವುಗಳಲ್ಲಿ ಕೆಲವು ಸಿನಿಮಾಗಳು ಮಾತ್ರ ಜನಮಾನಸದಲ್ಲಿ ಉಳಿದು ಇತಿಹಾಸ ನಿರ್ಮಾಣ ಮಾಡುತ್ತವೆ.

ಅಂತಹ ಇತಿಹಾಸ ನಿರ್ಮಾಣದ ಜೊತೆಗೆ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದರೆ 2018ರಲ್ಲಿ ತೆರೆಕಂಡ ಕೆಜಿಎಫ್ ಚಿತ್ರ, ಈ ಕನ್ನಡ ಸಿನಿಮಾ ಬಹುನಿರೀಕ್ಷಿತ ಚಿತ್ರವಾಗಿತ್ತು ಮತ್ತು ನಿರೀಕ್ಷೆಯಂತೆ ತೆರೆಕಂಡ ಬಳಿಕ ಈ ಚಿತ್ರ ಬರೆದ ದಾಖಲೆಗಳು ಗಮನಾರ್ಹವಾಗಿದೆ. ಇದೀಗ ಈ ಚಿತ್ರದ ಮುಂದುವರೆದ ಭಾಗವಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಜನವರಿ 8ರಂದು ಅಂದರೆ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದಿನದಂದು ಬಿಡುಗಡೆಯಾಯಿತು. ಟೀಸರ್ ರಿಲೀಸ್ ಆದ ಎರಡು ದಿನದಲ್ಲಿ ಬರೋಬ್ಬರಿ 100 ಮಿಲಿಯನ್ ಕ್ಕಿಂತ ಹೆಚ್ಚು ವೀಕ್ಷಣೆ ಪಡೆದು, ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿ ಮಾಡಿದೆ.

ಇದೀಗ ಇಡೀ ವಿಶ್ವಾದ್ಯಂತ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡುತ್ತಿರುವ ಸುದ್ದಿ ಅಂದರೆ ಈ ಚಿತ್ರದ ನಾಯಕ ನಟ ಯಶ್ ಮತ್ತು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ನಿಮಗೆ ತಿಳಿದಿದೆ, ಆದರೆ ಕೆಜಿಎಫ್ ಸರಣಿ ಚಿತ್ರದ ರುವಾರಿಯಾದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.
ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಮೂಲತಃ ಹಾಸನ ಜಿಲ್ಲೆಯವರು. ಇವರು ಶ್ರೀಮಂತ ಕುಟುಂಬದಲ್ಲಿ 1980 ಜೂನ್4ರಂದು ಜನಿಸಿದ್ದಾರೆ.
ಪ್ರಶಾಂತ್ ನೀಲ್ ಓದಿನಲ್ಲಿ ಮುಂದಿದ್ದರು, ಉನ್ನತ ಶಿಕ್ಷಣವಾಗಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಇವರಿಗೆ ಸಿನಿಮಾದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ, ಸಿನಿಮಾ ಕ್ಷೇತ್ರದಲ್ಲಿ ನಟ ನಿರ್ದೇಶಕನಾಗ ಬೇಕು ಎಂಬ ಕನಸನ್ನು ಕಂಡವರಲ್ಲ ಪ್ರಶಾಂತ್ ನೀಲ್. ಅವರು ಸಂದರ್ಶನವೊಂದರಲ್ಲಿ ತಿಳಿಸಿದಂತೆ ಇವರು ಹೆಚ್ಚು ಕನ್ನಡ ಸಿನಿಮಾವನ್ನು ನೋಡಿದವನಲ್ಲ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಓಂ ಚಿತ್ರ ಮತ್ತು ರಾಘವೇಂದ್ರ ರಾಜಕುಮಾರ್ ಅವರ ನಂಜುಂಡಿ ಕಲ್ಯಾಣ ಚಿತ್ರಗಳನ್ನು ಹೊರತುಪಡಿಸಿದರೆ ಹೆಚ್ಚು ಕನ್ನಡ ಸಿನಿಮಾ ನೋಡಿಲ್ಲ, ನನಗೆ ಹಾಲಿವುಡ್ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿಯಿತ್ತು, ಆದ್ದರಿಂದ ನನಗೆ ಹಾಲಿವುಡ್ ಸಿನಿಮಾಗಳ ಪ್ರಭಾವ ನನ್ನ ಮೇಲೆ ಬೀರಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ನಟ ಮುರುಳಿ ಅವರು ಪ್ರಶಾಂತ್ ನೀಲ್ ಅವರ ಸಹೋದರಿ ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾದ ನಂತರ ಪ್ರಶಾಂತ ನೀಲ್ ಮತ್ತು ಶ್ರೀಮುರಳಿ ಅವರು ಸಂಬಂಧಿಕರಾದ ನಂತರ ಇವರಿಬ್ಬರ ಸ್ನೇಹ ಸಂಬಂಧ ಜೊತೆಗೆ ಆತ್ಮೀಯತೆ ಹೆಚ್ಚಾಗಿ ಮುರುಳಿ ಅವರ ಒಡನಾಟ ಹೆಚ್ಚಾದಂತೆ ಇವರಿಗೂ ಸಹ ಸಿನಿಮಾ ಕ್ಷೇತ್ರದ ಬಗ್ಗೆ ಒಲವು ಹೆಚ್ಚಾಗುತ್ತದೆ.
ಆರಂಭದಲ್ಲಿ ನಿರ್ದೇಶನದ ಬಗ್ಗೆ ಆಳ ಅರಿವು ಇಲ್ಲದ ಇವರು ನಿರ್ದೇಶನದ ಬಗ್ಗೆ ತರಬೇತಿ ಪಡೆದುಕೊಳ್ಳುತ್ತಾರೆ. ಮೊದಲ ಬಾರಿಗೆ ಸಿನಿಮಾ ನಿರ್ದೇಶನವನ್ನು ಶ್ರೀ ಮುರಳಿಗೆ ಕಥೆ ಮಾಡಿ ಆ ಚಿತ್ರಕ್ಕೆ ಆ ಹುಡುಗಿ ನೀನೇ ಎಂಬ ಟೈಟಲ್ ಇಡುತ್ತಾರೆ. ಆದರೆ ಇದು ರೊಮ್ಯಾಂಟಿಕ್ ಕಥಾ ಹಂದರ ಹೊಂದಿರುವ ಚಿತ್ರವಾಗಿತ್ತು, ಆದರೆ ಶ್ರೀ ಮುರಳಿ ಅವರನ್ನು ಹತ್ತಿರದಿಂದ ಬಲ್ಲ ಪ್ರಶಾಂತ್ ನೀಲ್ ಅವರಿಗೆ ಈ ಕಥೆ ಶ್ರೀಮುರುಳಿಯ ಹಾವಭಾವ, ವ್ಯಕ್ತಿತ್ವಕ್ಕೆ ಹೊಂದಿಕೆ ಆಗುವುದಿಲ್ಲ ಎಂದು ಈ ಚಿತ್ರವನ್ನು ಕೈಬಿಡುತ್ತಾರೆ.

ತದ ನಂತರದಲ್ಲಿ ಮತ್ತೆ ಮುರಳಿಗಾಗಿ ಮತ್ತೊಂದು ಕಥೆ ಮಾಡಿ ಮುರುಳಿಯವರಿಗೆ ಕಥೆ ಹೇಳಿ, ಈ ಚಿತ್ರವನ್ನು ನಾವೇ ನಿರ್ಮಾಣ ಮಾಡೋಣ ಈ ಚಿತ್ರಕ್ಕೆ ನೀನೆ ಹೀರೋ ಎಂದು ತಿಳಿಸುತ್ತಾರೆ. ಆದದೆ ಹಾಗಾಗಲೇ ತಾವು ನಟಿಸಿದ ಸಿನಿಮಾಗಳು ಗೆಲ್ಲದೆ, ಸತತ ಸೋಲುಗಳಿಂದ ಕಂಗೆಟ್ಟಿದ ಶ್ರೀಮುರುಳಿಗೆ ಇದರ ಬಗ್ಗೆ ಆಸಕ್ತಿ ಇರಲಿಲ್ಲ.
ತದನಂತರದಲ್ಲಿ ಮುರುಳಿಯನ್ನು ಭೇಟಿ ಮಾಡಿದ ಪ್ರಶಾಂತ್ ನೀಲ್ ಶ್ರೀ ಮುರುಳಿಗೆ ಧೈರ್ಯ ತುಂಬಿ ಈ ಚಿತ್ರ ನಿನಗೆ ಹೊಸದೊಂದು ಇಮೇಜ್ ನೀಡುತ್ತದೆ ಎಂದು ಒಪ್ಪಿಸುತ್ತಾರೆ. ಈ ಚಿತ್ರಕ್ಕೆ ತಾವೇ ಬಂಡವಾಳ ಹೂಡಿ ಭಾರತದ ಟಾಪ್ ಮೋಸ್ಟ್ ತಂತ್ರಜ್ಞರನ್ನು ಕರೆಸಿ ತನ್ನದೇ ಆದ ಹೊಸದೊಂದು ತಂಡವನ್ನು ರಚಿಸಿ ಸಿನಿಮಾ ಕೆಲಸವನ್ನು 2010ರಲ್ಲಿ ಆರಂಭಿಸುತ್ತಾರೆ.
ನಂತರದಲ್ಲಿ ಈ ಚಿತ್ರಕ್ಕೆ ನಂದೇ ಎಂಬ ಟೈಟಲ್ ನೀಡುತ್ತಾರೆ, ತದನಂತರ ಈ ಟೈಟಲ್ ಸೂಕ್ತವಲ್ಲ, ಎಂದು ಪ್ರಶಾಂತ್ ನೀಲ್ ತುಂಬಾ ಆಲೋಚನೆ ಮಾಡಿ, ವಿಭಿನ್ನವಾದ ಆಕರ್ಷಕವಾದ ಟೈಟಲ್ ಹುಡುಕುತ್ತಾರೆ ಅದೇ ಉಗ್ರಂ ಚಿತ್ರ ಈ ಸಿನಿಮಾ 2011ರಲ್ಲಿ ರಿಲೀಸ್ ಆಗಬೇಕಿತ್ತು, ಆದರೆ ಕೆಲವು ಆರ್ಥಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಈ ಚಿತ್ರ ಬರೋಬ್ಬರಿ ಮೂರು ವರ್ಷ ಡಬ್ಬದಲ್ಲೇ ಕೂರಬೇಕಾಯಿತು. ತದನಂತರ 2014 ರಲ್ಲಿ ಚಿತ್ರ ಬಿಡುಗಡೆಯಾಗಿ ಕನ್ನಡ ಇಂಡಸ್ಟ್ರಿಯಲ್ಲಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಹಾಗಿ ಹೊರಹೊಮ್ಮಿ ಪ್ರಶಾಂತ ನೀಲ್ ಕನ್ನಡದಲ್ಲಿ ಭರವಸೆ ನಿರ್ದೇಶಕರಾಗಿ ಹೊರಹೊಮ್ಮಿದರು.

ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಿರ್ದೇಶಕರ ಸಾಲಿಗೆ ಪ್ರಶಾಂತ ನೀಲ್ ಸೇರಿಕೊಂಡರು, ಅದೇ ವರ್ಷ ಬರೋಬ್ಬರಿ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸಹ ಪ್ರಚಾರವಾಯಿತು. ಅದರಲ್ಲಿ ಮೊದಲನೇಯಧಾಗಿ ಉಗ್ರಂ ಚಿತ್ರದ ಮುಂದುವರೆದ ಭಾಗ ಉಗ್ರಂ ವೀರಂ, ಕೆಜಿಎಫ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಮತ್ತೊಂದು ಸಿನಿಮಾ ಎಂಬ ಸುದ್ದಿ ಆ ದಿನಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡಿತ್ತು.
ತದನಂತರ ಪ್ರಶಾಂತ ನೀಲ್ ತನ್ನ ನಿರ್ದೇಶನದ ಅಭಿರುಚಿ ಬದಲಾಯಿಸಿಕೊಂಡಿದ್ದ, ಪ್ರಶಾಂತ್ ನೀಲ್ 70 ಮತ್ತು 80ರ ದಶಕದ ಕಥೆಯೊಂದನ್ನು ಸಿನಿಮಾ ಮಾಡಬೇಕು ಎಂದು ಆಲೋಚಿಸುವಾಗ ಇವರಿಗೆ ಕಂಡದ್ದು, ರಾಕಿಂಗ್ ಸ್ಟಾರ್ ಯಶ್ ಕಥೆ ಹೇಳಿ ಒಪ್ಪಿಸಿದ ಪ್ರಶಾಂತ್ ನೀಲ್ 2017 ರಲ್ಲಿ ಹೊಂಬಾಳೆ ಬ್ಯಾನರಡಿಯಲಿ ಕೆಜಿಎಫ್ ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿತು. ಇದು ಪಂಚಭಾಷೆಗಳಲ್ಲಿ ತಯಾರಾಗುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಅಲ್ಲಿಯವರೆಗೂ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಪರಿಚಿತರಾಗಿದ್ದ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದ ಮೂಲಕ ಭಾರತ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆಯುತ್ತಾರೆ. ಕೆಜಿಎಫ್ ಚಿತ್ರ ಬಾಕ್ಸಾಫೀಸ್ ನಲ್ಲಿ ಚಿಂದಿ ಮಾಡಿ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿ ದಾಖಲೆ ಮಾಡಿದ್ದು ಇದೀಗ ಅವಿಸ್ಮರಣೀಯ ಎನ್ನಬಹುದು. ಇದೀಗ ಕೆಜಿಎಫ್ ಮುಂದುವರೆದ ಭಾಗವಾಗಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿ ಎರಡೇ ದಿನದಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಪಡೆದು ಭಾರೀ ಮೆಚ್ಚುಗೆ ಪಡೆದಿದೆ.

ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿರುವುದು ಕೇವಲ ಎರಡು ಚಿತ್ರಗಳು ಮಾತ್ರ,ಕೇವಲ ಈ ಎರಡು ಚಿತ್ರಗಳ ನಿರ್ದೇಶನದಿಂದ ಇಡೀ ಜಗತ್ತಿಗೆ ಪರಿಚಯವಾಗಿ ಹೆಸರು ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯೇ ಸರಿ. ಭಾರತ ಚಿತ್ರರಂಗದಲ್ಲಿ ಟ್ರೆಂಡಿ ನಿರ್ದೇಶಕರಾಗಿ ಹೊರಹೊಮ್ಮಿರುವ ಪ್ರಶಾಂತ್ ನೀಲ್ ಉಗ್ರಂ ಚಿತ್ರದ ನಿರ್ದೇಶನಕ್ಕಾಗಿ ಬೆಸ್ಟ್ ಡೆಬ್ಯು ಡೈರೆಕ್ಟರ್ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಫಿಲಂ ಫೇರ್ ಪ್ರಶಸ್ತಿಗೂ ಕೂಡ ಆಯ್ಕೆಯಾಗಿದ್ದರು. ಪ್ರಶಾಂತ್ ನೀಲ್ ಅವರಿಗೆ 2018ರಲ್ಲಿ ರಿಲೀಸ್ ಆದ ಕೆಜಿಎಫ್ ಸಿನಿಮಾ ಅವರಿಗೆ ಫಿಲ್ಮಿಬೀಟ್ ಪ್ರಶಸ್ತಿ ಬರುವಂತೆ ಮಾಡಿತ್ತು. ದಕ್ಷಿಣ ಭಾರತದ ಖ್ಯಾತ ನಟರಾದ ತೆಲುಗಿನ ಯಂಗ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಲಾರ್ ಎಂಬ ಚಿತ್ರವನ್ನು ಮಾಡುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅವರೊಟ್ಟಿಗೆ ಕೆಲಸ ಮಾಡಲು ಭಾರತೀಯ ಚಿತ್ರರಂಗದ ಸ್ಟಾರ್ ನಟರು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದ ನಿರ್ದೇಶಕನೊಬ್ಬ ಭಾರತೀಯ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿರುವುದು ನಿಜಕ್ಕೂ ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಬಹುದು.