ಇಂದು ಜಗತ್ತಿನ ಎಲ್ಲಾ ದೇಶಗಳಲ್ಲಿ ಮಹಿಳೆಯರು ಬಹುತೇಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ನಾವು ಯಾರಿಗೂ ಕೂಡ ಕಡಿಮೆ ಏನಿಲ್ಲ. ಪುರುಷರಷ್ಟೇ ನಾವು ಕೂಡ ಶಕ್ತಿ ಸಾಮರ್ಥ್ಯ ಹೊಂದಿದ್ದೇವೆ ಎಂಬುದನ್ನ ಸಾಬೀತು ಪಡಿಸುತ್ತಿದ್ದಾರೆ. ಅದು ಕಾರ್ಪೋರೇಟ್, ರಾಜಕೀಯ, ಕ್ರೀಡೆ, ಶಿಕ್ಷಣ, ಉದ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಕೊಂಡಿದ್ದಾರೆ. ಕೇವಲ ತೊಡಗಿಸಕೊಳ್ಳುವುದಲ್ಲದೆ ಆಯಾ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಅದರಂತೆ ಇದೀಗ ವೈಮಾನಿಕ ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರು ಅಪಾರ ಸೇವೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗೆ ಸೋಮವಾರ ನಡೆದ ರಾಜ್ಯ ಸಭೆಯಲ್ಲಿ ಭಾರತ ದೇಶದಲ್ಲಿ ಮಹಿಳಾ ಪೈಲಟ್ ಗಳ ಸಂಬಂಧವಾಗಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರು ಲಿಖಿತ ರೂಪದಲ್ಲಿ ಈ ರೀತಿ ಮಾಹಿತಿ ನೀಡುತ್ತಾರೆ. ಇಂಟರ್ ನ್ಯಾಷನಲ್ ಸೊಸೈಟಿ ಆಫ್ ವುಮೆನ್ ಏರ್ ಲೈನ್ ಪೈಲಟ್ ಗಳ ಮಾಹಿತಿಯ ಪ್ರಕಾರ ಜಾಗತಿಕವಾಗಿ ಸರಿ ಸುಮಾರು ಶೇಕಡಾ 5ರಷ್ಟು ಮಹಿಳಾ ಪೈಲಟ್ ಗಳು ಇದ್ದಾರೆ. ಆದರೆ ಭಾರತ ದೇಶವೊಂದರಲ್ಲೇ ಶೇಕಡ 15ಕ್ಕಿಂತ ಮಹಿಳಾ ಪೈಲಟ್ ಗಳು ಇರುವುದು ಗಮನಾರ್ಹವಾದ ಸಂಗತಿ ಎಂದು ಭಾರತದಲ್ಲಿರುವ ಮಹಿಳಾ ಪೈಲಟ್ ಗಳ ಮಾಹಿತಿಯನ್ನು ತಿಳಿಸಿದ್ದಾರೆ. ಭಾರತ ದೇಶದಲ್ಲಿ ಒಟ್ಟು ನೋಂದಾಯಿತ ಪೈಲಟ್ ಗಳ ಸಂಖ್ಯೆ ಬರೋಬ್ಬರಿ 17,726. ಈ ಸಂಖ್ಯೆಯಲ್ಲಿ 2,764 ರಷ್ಟು ಮಹಿಳಾ ಪೈಲಟ್ ಗಳೇ ಆಗಿದ್ದಾರಂತೆ.



ಇತರೆ ದೇಶಗಳಿಗಿಂತ ಭಾರತ ದೇಶ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಅತ್ಯಂತ ವೇಗವಾಗಿ ಅಭಿವೃದ್ದಿ ಕಾಣುತ್ತಿದ್ದು, ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರು ಪೈಲಟ್ ಗಳು ಆಗುವ ಮೂಲಕ ಅವರ ಕೊಡುಗೆ ಕೂಡ ಹಿರಿದಾಗುತ್ತಿದೆ. ಮುಂದುವರಿದ ರಾಷ್ಟ್ರಗಳಾಗಿರುವ ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳಿಗಿಂತಲೂ ಭಾರತದಲ್ಲಿ ಮಹಿಳಾ ಪೈಲಟ್ ಗಳ ಸಂಖ್ಯೆ ಎರಡರಷ್ಟಿದೆ ಎಂದು ವರದಿಯೊಂದು ತಿಳಿಸಿದೆ. ಇತ್ತೀಚೆಗೆ ವಾಣಿಜ್ಯ ಪೈಲಟ್ ಗಳ ಸಂಘ ಏರ್ ಇಂಡಿಯಾ ಸಂಸ್ಥೆ ಮಹಿಳಾ ಪೈಲಟ್ ಗಳಿಗೆ ತಾರತಮ್ಯ ಮಾಡುತ್ತಿದೆ.



ಅಪ್ ಗ್ರೇಡೇಶನ್ ನಲ್ಲಿ ಹೆರಿಗೆ ರಜೆ ಪಡೆದ ಪೈಲಟ್ ಗಳ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅದು ಅವರಿಗೆ ಸೇವಾ ಪ್ರಯೋಜನಗಳನ್ನು ಪಡೆಯಲು ತೊಂದರೆ ಆಗುತ್ತಿದೆ ಇದರಿಂದ ಅವರ ಸೇವಾ ಹಿರಿತನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಸೋಸಿಯೇಶನ ಆರೋಪ ಮಾಡಿತ್ತು. ಏನೇ ಆದರೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಒಂದಲ್ಲ ಒಂದು ನ್ಯೂನತೆ ಕೊರತೆ ಗಳಿರುತ್ತವೆ. ಇದೆಲ್ಲದರ ನಡುವೆಯೂ ಮಹಿಳೆಯರು ಪೈಲಟ್ ಹುದ್ದೆಯನ್ನು ಪಡೆದುಕೊಂಡು ವೈಮಾನಿಕ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಕೂಡ ಪ್ರಶಂಸನೀಯವಾದುದು ಎನ್ನಬಹುದು.