ಕೋರೋಣ ಮಹಾಮಾರಿಗೆ ಅಕ್ಷರಶಹ ಜಗತ್ತು ನಲುಗಿಹೋಗಿದೆ ಇನ್ನೇನು ಕೋರೋಣ ಅಬ್ಬರ ಕಡಿಮೆಯಾಯಿತು ಅನ್ನುವಷ್ಟರಲ್ಲಿ ಅದರ ಎರಡನೇ ಅಲೆಗೆ ಈಗ ಜಗತ್ತು ತುತ್ತಾಗಿದೆ. ಈ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆಯ ತಯಾರಿಕೆಗಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇತ್ತೀಚಿಗೆ ರಷ್ಯಾ ದೇಶದಲ್ಲಿ ತಯಾರಾದ ಸ್ಪುಟ್ನಿಕ್ ಹೆಸರಿನ ಲಸಿಕೆಯು ತುಂಬಾನೇ ಸುದ್ದಿ ಮಾಡಿತ್ತು. ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನು ತೋರಿಸಿತ್ತು. ಶೇಕಡ 91.4ರಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತ್ತು, ಇದೇ ಲಸಿಕೆಯನ್ನು ಈಗ ನಮ್ಮ ದೇಶದಲ್ಲಿ 2021ರ ಆರಂಭದಿಂದ ಒಂದು ವರ್ಷಗಳ ಕಾಲ ಕರೋನವೈರಸ್ ವಿರುದ್ಧ ಹೋರಾಡಲು 100ಮಿಲಿಯನ್ ದೋಸ್ಗಳನ್ನು ಉತ್ಪಾದಿಸಲಾಗುತ್ತದೆ. ರಷ್ಯಾದ ನೇರ ಬಂಡವಾಳ ಹೂಡಿಕೆ ನಿಧಿ ಮತ್ತು ನಮ್ಮ ದೇಶದ ಹೇಟೆರೋ ಬಯೋಫಾರ್ಮಗಳ ನಡುವೆ ಉತ್ಪಾದನೆಯ ಒಪ್ಪಂದ ಏರ್ಪಟ್ಟಿದೆ. ಈ ಕುರಿತು ಹೈದರಾಬಾದ್ ಮೂಲದ ಕಂಪನಿಯಾದ ಹೇಟೇರೋ ಲ್ಯಾಬಿನ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಮುರುಳಿ ಕೃಷ್ಣಾರೆಡ್ಡಿಯವರು ಮಾತನಾಡಿ ಭಾರತದಲ್ಲಿನ ಕ್ಲಿನಿಕಲ್ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ, ಸ್ಥಳೀಯವಾಗಿ ಲಸಿಕೆಯನ್ನು ಉತ್ಪಾದನೆ ಮಾಡುವುದರಿಂದ ರೋಗಿಗಳಿಗೆ ಆದಷ್ಟು ಬೇಗ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.