ಲಾಂಚ್ ಆದ ಮೊದಲ ದಿನದಲ್ಲೇ ಎಲ್ಲಾ ಎಲೆಕ್ಟ್ರಿಕ್ ಐಷಾರಾಮಿ ಕಾರ್ ಗಳು ಸೇಲ್, ದೇಶದಲ್ಲಿ ದಿನ ಕಳೆದಂತೆ ಇಂಧನದ ಬೆಲೆ ಗಗನ ಮುಟ್ಟುತ್ತಿವೆ. ಆದ ಕಾರಣ ಇಂಧನ ಆಧಾರಿತ ವಾಹನಗಳಿಗಿಂತ ಹೆಚ್ಚು ವಿದ್ಯುಚ್ಚಾಲಿತ ವಾಹನಗಳೆ ಕಡೆ ವಾಹನ ಸವಾರರು ಗಮನ ನೀಡುತ್ತಿದ್ದಾರೆ. ಈಗಾಗಲೇ ಭಾರತ ದೇಶದಲ್ಲಿ ಅನೇಕ ಕಾರು ಮತ್ತು ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಒತ್ತು ನೀಡುತ್ತಿವೆ. ಹಾಗಾಗಿ ಇತ್ತೀಚೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗುತ್ತಿದೆ. ಭಾರತ ಸರ್ಕಾರ ವಾಯು ಮಾಲಿನ್ಯ ನಿಯಂತ್ರಣ ಮಾಡುವ ಉದ್ದೇಶದಿಂದಾಗಿ ಈ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವವರಿಗೆ ಸಬ್ಸಿಡಿಯನ್ನು ನೀಡುತ್ತಿದೆ.

ಈಗಾಗಲೇ ಆಟೋಮೊಬೈಲ್ ಕ್ಷೇತ್ರದಲ್ಲಿ ಬಿಎಸ್ 4 ವಾಹನಗಳಿಗೆ ನಿಷೇಧ ಏರಲಾಗಿದ್ದು, ಬಿ.ಎಸ್ 6 ವಾಹನಗಳ ಉತ್ಪಾದನೆ ನಡೆಯುತ್ತಿದೆ. ಇದುವರೆಗೆ ಅನೇಕ ದ್ವಿಚಕ್ರ ವಾಹನಗಳ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಅದರಂತೆ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿವೆ. ಇನ್ನು ಎಲೆಕ್ಟ್ರಿಕ್ ಕಾರುಗಳು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಗೊಂಡಿವೆ. ಆದರೆ ಇವು ಅಂತಹ ದುಬಾರಿ ಮೌಲ್ಯದ ಕಾರುಗಳಲ್ಲ. ಆದರೆ ಇದೀಗ ಇದೇ ಮೊಟ್ಟ ಮೊದಲ ಬಾರಿಗೆ ಐಷಾರಾಮಿ ಕಾರು ತಯಾರಿಕೆ ಕಂಪನಿಗಳಲ್ಲಿ ಮೊದಲ ಸ್ಥಾನ ಪಡೆದಿರುವ ಬಿ ಎಂ.ಡಬ್ಲ್ಯೂ ಇಂಡಿಯಾ ಸಂಸ್ಥೆ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನ ಬಿಡುಗಡೆ ಮಾಡಿದೆ.



ಈ ಬಿಎಂಡಬ್ಲ್ಯು ಐ.ಎಕ್ಸ್. ಎಸ್ ಯೂ.ವಿ ಎಲೆಕ್ಟ್ರಿಕ್ ಕಾರು ಇದೇ ಡಿಸೆಂಬರ್ ತಿಂಗಳ 13 ರಂದು ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಐ.ಎಕ್ಸ್.ಎಸ್.ಯೂ ವಿಯಲ್ಲಿ ಎಲೆಕ್ಟ್ರಿಕ್ ಪವರ್ ಟ್ರೇನ್ ಯಿದ್ದು, ಆಕ್ಸೆಲ್ ಮೇಲ್ಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಇರಲಿದೆ. ಇದು ಆರ್ ವೀಲ್ ಡ್ರೈವ್ ಕಾರ್ಯಾಚರಣೆಗೆ ಸಹಾಯಕವಾಗಲಿದೆ. 76.6 ಕೆಡಬ್ಲ್ಯೂ ಎಚ್ ಬ್ಯಾಟರಿ ಒಳಗೊಂಡಿದ್ದು 322 ಬಿ ಎಚ್ ಪಿ, 630 ಎನ್ ಎಂ ನಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆಯಂತೆ. ಈ ಬಿಎಂಡಬ್ಲ್ಯೂ ಎಲೆಕ್ಟ್ರಿಕ್ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಟ 425 ಕಿ.ಮೀ ನಷ್ಟು ಕ್ರಮಿಸಬಹುದಾಗಿದೆಯಂತೆ.



2.3 ಕಿವ್ಯಾ ಗುಣಮಟ್ಟದ ಚಾರ್ಜಿಂಗ್ ಕೇಬಲ್, 7.4.ಕಿವ್ಯಾ 1 ಫೇಸ್ ವಾಲ್ ಬಾಕ್ಸ್ ಚಾರ್ಜರ್ ಜೊತೆಗೆ 11 ಕಿವ್ಯಾ 3 ಫೇಸ್ ವಾಲ್ ಬಾಕ್ಸ್ ಹೀಗೆ ಮೂರು ರೀತಿಯ ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗಿದೆ. ಆಯಾ ಬ್ಯಾಟರಿಗಳ ಸಾಮರ್ಥ್ಯದ ಆಧಾರದ ಮೇಲೆ ಒಂದು ಸುತ್ತಿನ ಚಾರ್ಜಿಂಗ್ ಸಮಯವನ್ನು ನಿರ್ಧರಿಸಬಹುದಾಗಿರುತ್ತದೆ. ಒಂದು ಸುತ್ತಿನ ಚಾರ್ಜಿಂಗ್ ಸಮಯ 25-36 ಗಂಟೆಗಳ ತನಕ ಮಾಡಿದರೆ ಗರಿಷ್ಟ 425 ಕಿ.ಮೀ ನಷ್ಟು ದೂರ ಕ್ರಮಿಸಬಹುದಾಗಿದೆ. ಸೋಮವಾರ 13 ರಂದು ಬಿಡುಗಡೆಯಾದ 1.16 ಕೋಟಿ ಮೌಲ್ಯದ ಈ ಬಿಎಂಡಬ್ಲ್ಯೂ ಐಎಕ್ಸ್ ಎಲೆಕ್ಟ್ರಿಕ್ ಕಾರು ಮೊದಲ ದಿನದಲ್ಲೇ ಆನ್ಲೈನ್ ಮತ್ತು ಆಫ್ ಲೈನ್ ಮೂಲಕವೇ ಕಂಪ್ಲಿಟ್ ಸೋಲ್ಡ್ ಔಟ್ ಆಗಿವೆ. ಇದೀಗ ಬುಕ್ಕಿಂಗ್ ಮಾಡಿರುವ ಗ್ರಾಹಕರೆಲ್ಲರಿಗೂ 2022 ವರ್ಷದ ಏಪ್ರಿಲ್ ತಿಂಗಳಲ್ಲಿ ಕಾರನ್ನು ಹಸ್ತಾಂತರ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.