ಇದೀಗ ಕಾರು ಪ್ರಿಯರಿಗೊಂದು ಬಂಪರ್ ಆಫರ್ ಒದಗಿ ಬಂದಿದೆ, ಕಾರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಭಾರಿ ಜನಪ್ರಿಯತೆ ಪಡೆಯುತ್ತಿರುವ ಈ ಕಾರು ಕೇವಲ ಒಂದು ತಿಂಗಳಲ್ಲಿ ಬರೋಬ್ಬರಿ 30,000 ಕಾರುಗಳು ಮುಂಗಡವಾಗಿ ಕಾಯ್ದಿರಿಸಲಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾದರೆ ಮಾರುಕಟ್ಟೆಗೆ ಬಂದಿರುವ ಈ ಹೊಚ್ಚ ಹೊಸ ಕಾರು ಯಾವುದು, ಇದರ ಬೆಲೆ ಎಷ್ಟು ಇದರಲ್ಲಿರುವ ವೈಶಿಷ್ಟ್ಯಗಳು ಏನು ಎಂಬುದನ್ನು ನೀವು ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕಾಗಿದೆ. ಸದ್ಯಕ್ಕೆ ಕಾರು ಮಾರುಕಟ್ಟೆಯಲ್ಲಿ ಫೇಮಸ್ ಕಾರ್ ಅಂದರೆ ಅದು ಕಿಯಾ ಸೊನೆಟ್, ಹುಂಡೈ, ನ್ಯೂಮಹಿಂದ್ರ ಈ ಎಲ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಾರು ನಿಸ್ಸಾನ್ ಮ್ಯಾಗ್ನೈಟ್! ಕಾರು ಪ್ರಿಯರಿಗೆ ಹೊಸದಾದ ಅಡ್ವಾನ್ಸ್ ಫೀಚರ್ ಇರುವಂತಹ ಈ ಕಾರು ಕಾರು ಪ್ರಿಯರಿಗೆ ಖಂಡಿತ ಇಷ್ಟ ವಾಗುತ್ತದೆ ಎಂದು ನಿಸ್ಸಾನ್ ಸಂಸ್ಥೆ ವಿಶ್ವಾಸ ವ್ಯಕ್ತ ಪಡಿಸಿದೆ.

ಈ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೈಶಿಷ್ಟ್ಯ ನೋಡುವುದಾದರೆ ಈ ಹೊಸ ಕಾರಿನಲ್ಲಿ ಫೀಚರ್ಸ್ಗಳ ಜೊತೆ ಸವಾರರು ಸುರಕ್ಷಾತ್ಮಕವಾಗಿ ಇರಲು ಎಲ್ಲಾ ರೀತಿಯಾದ ವ್ಯವಸ್ತ್ಯೆ ರೂಪವಾಗಿ ತಯಾರು ಮಾಡಲಾಗಿದೆ, ಐಸೋಫಿಕ್ಸ್ ನಡವೆ ಲಾಕಿಂಗ್ಡೋರ್, ವೇಗದ ಸೆನ್ಸಿಂಗ್, ಯಾಂತ್ರಿಕವಾಗಿ ಡೋರ್ ಲಾಕ್ಆಗುವುದು, ಹಿಲ್ ಸ್ಮಾರ್ಟ್ ಅಸಿಸ್ಟ್, ರಿಮೋಟ್ ಕೀ ಸೌಲಭ್ಯವನ್ನು ಒಳಗೊಂಡಿದೆ. ಇವುಗಳ ಜೊತೆಗೆ ಎರಡು ವಿಭಿನ್ನ ರೂಪದ ಏರ್ ಬ್ಯಾಗ್ ಅನ್ನು ಮುಂಭಾಗದಲ್ಲಿ ಹೊಂದಿದೆ. ಯ್ಯಾಂಟಿ ರೋಲ್ ಬಾರ್, ಸೀಟ್ ಬೆಲ್ಟ್, ಇಮ್ ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ, ಈ ಕಾರನ್ನು ಡೈನಾಮಿಕ್ ಆಗಿ ನಿಯಂತ್ರಿಸ ಬಹುದಾಗಿದೆ.

ಲೆದರ್ ವ್ಯಾರ್ಪ್ ಸ್ಟ್ರೀರಿಂಗ್ ಚಕ್ರಗಳನ್ನು ಹೊಂದಿದ್ದು ಪ್ರೆಷರ್ ಮಾನಿಟರಿಂಗ್ ಬ್ರ್ರಾಂಡ್ ಕಾಮೆಟ್ ವೈಶಿಷ್ಟ್ಯ ಹೊಂದಿದೆ, ಈ ನಿಸ್ಸಾನ್ ಕಾರಿನಲ್ಲಿ ಹಲವು ವಿಧವಾದ ವೇರಿಯಂಟ್ ಗಳು ಇದ್ದು ಹತ್ತು ಹಲವು ವಿಶೇಷತೆ ಹೊಂದಿರುವ ವೇರಿಯಂಟ್ಸ್ ಗಳ ಆಧಾರದ ಮೇಲೆ ಕಾರಿನ ಬೆಲೆಯನ್ನು ನಿಗದಿಮಾಡಲಾಗಿದೆ. ಈ ಕಾರಿನ ಆರಂಭಿಕ ಬೆಲೆಯು ಟಾಪ್ ಎಂಡ್ ಟರ್ಬೋ ಪೆಟ್ರೋಲ್ ಮಾದರಿಯ ಕಾರಿನ ಬೆಲೆಯು 4.99 ಲಕ್ಷ ದಿಂದ ಟಾಪ್ ಎಂಡ್ ಮಾದರಿಯ 9.35 ಲಕ್ಷ ರೂ.ಗಳಾಗಿವೆ ಇದು ದೆಹಲಿ ಎಕ್ಸ್ ಶೋರೂಂ ಬೆಲೆಯಾಗಿದೆ.

ಆದರೆ ಪ್ರತಿಸ್ಪರ್ಧಿ ಕಾರಿನ ಬೆಲೆಗಳು 6.70 ಲಕ್ಷ ದಿಂದ ಆರಂಭವಾಗಿ 12.80 ಲಕ್ಷದವರೆಗೆ ಲಭ್ಯವಾಗುತ್ತಿದೆ, ನಿಸ್ಸಾನ್ ಕಾರಿಗೆ ಹೋಲಿಸಿದರೆ ಇತರೆ ಕಾರುಗಳ ಬೆಲೆಯು ಅಧಿಕವಾಗಿದೆ. ಜನರು ಸಾಮಾನ್ಯವಾಗಿ ಚೀಪ್ ಅಂಡ್ ಬೆಸ್ಟ್ ಎನ್ನುವ ಸಿದ್ದಾಂತಕ್ಕೆ ಒಳಪಟ್ಟಿರುತ್ತಾರೆ ಆದ್ದರಿಂದ ಸಹಜವಾಗಿ ಕಾರು ಖರೀದಿಯಲ್ಲಿ ಆಸಕ್ತಿವುಳ್ಳವರು ಮ್ಯಾಗ್ನೈಟ್ ಎಸ್ಯುವಿ ಜೊತೆಗೆ ಹ್ಯಾಚ್ ಬ್ಯಾಕ್ ಕಾರು ಖರೀದಿಗೆ ಮುಂದಾಗುತ್ತಾರೆ. ಇನ್ನು ನಿಸ್ಸಾನ್ ಮ್ಯಾಗ್ನೈಟ್ ಸಂಸ್ದೆಯು ತಿಳಿಸಿದಂತೆ ಗ್ರಾಹಕರ ಬೇಡಿಕೆಯ ಅನುಗುಣವಾಗಿ ಈ ಕಾರಿನ ಉತ್ಪಾದನೆಯನ್ನು ಹೆಚ್ಚು ಮಾಡುತ್ತೇವೆ, ಇದರಲ್ಲಿ 1.0ಬಿ ಫೋರ್ ಡಿ ಪೆಟ್ರೋಲ್ ಮಾದರಿಯ ಕಾರನ್ನು ಶ್ರೇಣಿಯಾಗಿ 5-ವೇಗ ಮ್ಯಾನ್ಯುಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ನಿಸ್ಸಾನ್ ಕಾರನ್ನು ಈಗಾಗಲೇ ಮೂವತ್ತು ಸಾವಿರ ಕಾರುಗಳು ಮುಂಗಡವಾಗಿ ಬುಕ್ಕಿಂಗ್ ಆಗಿದೆ ಎಂದು ನಿಸ್ಸಾನ್ ಕಾರು ಸಂಸ್ಥೆ ತಿಳಿಸಿದೆ.