ಭಾರತದಲ್ಲಿ ತಮ್ಮ ಮಾರುಕಟ್ಟೆ ಸ್ಥಗಿತಗೊಳಿಸಿದ ಮತ್ತೊಂದು ಕಾರು ಕಂಪನಿ

ಭಾರತದಲ್ಲಿ ಸುಪ್ರಸಿದ್ದ ಕಾರು ತಯಾರಿಕಾ ಕಂಪನಿ ತನ್ನ ಉತ್ಪಾದನೆಯನ್ನ ಸ್ಥಗಿತಗೊಳಿಸಿ ಸಾವಿರಾರು ಉದ್ಯೋಗಿಗಳ ಉದ್ಯೋಗಕ್ಕೆ ಕುತ್ತು ತಂದಿದೆ. ಹೌದು ಕೋವಿಡ್ ನಂತರದಲ್ಲಿ ಆಟೋಮೊಬೈಲ್ ಕ್ಷೇತ್ರ ಉತ್ತಮವಾಗಿ ನಡೆಯುತ್ತಿದೆ ಎಂದು ಕೆಲವು ಕಾರು ತಯಾರಕ ಕಂಪನಿಗಳು ತಮ್ಮ ಆದಾಯದಲ್ಲಿ ಅತ್ಯಧಿಕವಾಗಿ ಅಭಿವೃದ್ದಿ ಕಾಣುತ್ತಿವೆ. ಆದರೆ ಕೆಲವು ಪ್ರತಿಷ್ಟಿತ ಕಾರು ಕಂಪನಿಗಳು ಮಾತ್ರ ಗ್ರಾಹಕರಿಂದ ಬೇಡಿಕೆ ಇಲ್ಲದೆ ತಮ್ಮ ಸಂಸ್ಥೆಯ ಕಾರು ಮಾರಾಟ ಇಲ್ಲದೆ ತಮ್ಮ ಉತ್ಪಾದನಾ ಘಟಕವನ್ನ ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೆ ಫೋರ್ಡ್ ಕಾರು ಸಂಸ್ಥೆ ಭಾರತದಿಂದ ಹೊರ ನಡೆದಿತ್ತು. ಇದಾದ ನಂತರ ಭಾರತದಲ್ಲಿ ಪ್ರಸಿದ್ದ ಕಾರು ಸಂಸ್ಥೆಗಳಲ್ಲಿ ಒಂದಾಗಿದ್ದ ನಿಸ್ಸಾನ್ ಸಂಸ್ಥೆಯ ಅಧೀನದಲ್ಲಿರುವ ದಟ್ಸನ್ ಬ್ರ್ಯಾಂಡ್ ಕಾರು ಕೂಡ ಭಾರತದಿಂದ ಹೊರ ನಡೆಯುತ್ತಿದೆ.

ದಟ್ಸನ್ ಬ್ರ್ಯಾಂಡ್ ಕಾರು 2016ರಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯವಾಗಿತ್ತು. ಆರಂಭದಲ್ಲಿ ಈ ಕಾರಿಗೆ ಕಾರು ಪ್ರಿಯರು ಆಕರ್ಷಕವಾಗಿ ಉತ್ತಮ ಬೇಡಿಕೆಯನ್ನ ಹೊಂದಿತ್ತು. ಆದರೆ ಕಳೆದ ಎರಡು ವರ್ಷಗಳಿಂದೀಚೆಗೆ ದಟ್ಸನ್ ಕಾರಿನ ಮಾರಾಟ ಗಣನೀಯವಾಗಿ ಇಳಿಮುಖ ಕಂಡಿದೆ. ಆರಂಭದಲ್ಲಿ ಈ ದಟ್ಸನ್ ಕಾರು ಪ್ರಸಿದ್ದ ಕಾರು ಸಂಸ್ಥೆಗಳಾಗಿರುವ ರೆಡಿ ಗೊ, ಗೊಪ್ಲಸ್ ಕಾರುಗಳ ಮಾದರಿಯಲ್ಲಿ ಅತ್ಯುತ್ತಮವಾಗಿ ಮಾರಾಟ ಆಗುತ್ತಿತ್ತು. ಆದರೆ ಯಾವಾಗ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಹೊಸ ಮಾದರಿಯ ಹೊರ ದೇಶದ ಅಡ್ವಾನ್ಸ್ಡ್ ಕಾರುಗಳು ಪ್ರವೇಶ ಪಡೆದವು ಅಂದಿನಿಂದ ಈ ದಟ್ಸನ್ ಕಾರಿಗೆ ಬೇಡಿಕೆ ಕೂಡ ಕಡಿಮೆ ಆಯಿತು. ದಟ್ಸನ್ ಕಾರು ಕಳೆದ ವರ್ಷ ಕೇವಲ 4,296 ಯುನಿಟ್ ಗಳನ್ನ ಮಾತ್ರ ಮಾರಾಟ ಮಾಡಿದೆ. ಈ ದಟ್ಸನ್ ಕಾರು ಅಷ್ಟಾಗಿ ಐಷಾರಾಮಿ, ದುಬಾರಿ ಕಾರಾಗಿರದೆ ಉತ್ತಮ ಫೀಚರ್ ಹೊಂದಿದ್ದರು ಕೂಡ ಕಾಲಾನುಕ್ರಮದಲ್ಲಿ ಗ್ರಾಹಕರ ಅಭಿರುಚಿ.

ಸುರಕ್ಷತೆ ಮತ್ತು ಕಾರಿನ ಲುಕ್ ಬದಲಾವಣೆಯ ಬಯಸಿ ಹೋದ ಕಾರು ಪ್ರಿಯರನ್ನ ಹಿಡಿದಿಟ್ಟುಕೊಳ್ಳುವಲ್ಲಿ ವಿಫವಾಯಿತು ಎಂದು ಹೇಳಬಹುದು. ಇದೀಗ ದಟ್ಸನ್ ಕಾರುಗಳು ಭಾರತದಲ್ಲಿ ತನ್ನ ಮಾರುಕಟ್ಟೆಯನ್ನ ಕಳೆದುಕೊಂಡಿದೆ ಎನ್ನಬಹುದು. ಭಾರತ ಮಾತ್ರ ಅಲ್ಲದೆ ದಟ್ಸನ್ ಬ್ರ್ಯಾಂಡ್ ಕಾರುಗಳು ಇಂಡೋನೇಷ್ಯಾ ಮತ್ತು ರಷ್ಯಾದಲ್ಲಿಯೂ ಕೂಡ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಹಾಗಂತ ದಟ್ಸನ್ ಕಾರು ಗ್ರಾಹಕರ ಸೇವೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲವಂತೆ. ಸುಮಾರು ಹತ್ತು ವರ್ಷಗಳ ಕಾಲ ದಟ್ಸನ್ ಬ್ರ್ಯಾಂಡ್ ಕಾರು ಗ್ರಾಹಕರ ಸೇವೆಗಳು ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ನಿಸ್ಸಾನ್ ಕಂಪನಿಯು ತಿಳಿಸಿದೆ. ಒಟ್ಟಾರೆಯಾಗಿ ನಿಸ್ಸಾನ್ ಅಧೀನ ದಟ್ಸನ್ ಬ್ರ್ಯಾಂಡ್ ಕಾರು ಬೇಡಿಕೆಯಿಲ್ಲದ ಕಾರಣ ಭಾರತದಲ್ಲಿ ಉತ್ಪಾದನೆ ನಿಲ್ಲಿಸಲಾಗುತ್ತಿದೆ.

%d bloggers like this: