ಭಾರತದಲ್ಲಿ ಥಿಯೇಟರ್ ತೆರೆಯಲು ಸರ್ಕಾರ ಒಪ್ಪದಿರುವುದಕ್ಕೆ ಇದೆ ಕಾರಣ ಎಂದ ಡಿಬಾಸ್

ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಿಲಯನ್ಸ್ ಜಿಯೋ ಸಂಸ್ಥೆ ಅಂಬಾನಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳು ತೆರೆಯದಿಲ್ಲದಿರುವುದಕ್ಕೆ ಪ್ರಮುಖವಾಗಿ ಕೆಲವು ದಿನಗಳಲ್ಲಿ ಬರುತ್ತಿರುವ ಜಿಯೋ 5ಜಿ ಯೋಜನೆ ಕಾರಣವಾಗಿದೆ, ಇದೊಂದು ದೊಡ್ಡ ಹಗರಣ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮದುವೆ ಮಂಟಪ, ಶಾಲಾ ಕಾಲೇಜುಗಳು ತೆರೆದಿದ್ದು ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಜೊತೆಗೆ ಕೋವ್ಯಾಕ್ಸಿನ್ ಕೂಡ ಸಿದ್ದವಾಗುತ್ತಿದೆ. ಆದರೆ ಇತರೆ ಕ್ಷೇತ್ರಗಳಿಗೆ ಸಂಪೂರ್ಣ ಅವಕಾಶ ಕೊಟ್ಟು ಚಿತ್ರಮಂದಿರಗಳಿಗೆ ಮಾತ್ರ ಶೇಕಡ ಐವತ್ತರಷ್ಟು ಸೀಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ.

ಇದು ಅಂಬಾನಿಯವರ ಓಲೈಕೆಗಾಗಿ ಅವರ ಅನುಕೂಲಕ್ಕೆ ಮಾಡಿಕೊಟ್ಟು ಅವರ ಜಿಯೋ 5ಜಿ ಆರಂಭವಾದ ಮೇಲೆ ಜನರು ಚಿತ್ರಗಳನ್ನು ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ನೋಡಲು ಡೇಟಾ ಬಳಕೆ ಮಾಡೇ ಮಾಡುತ್ತಾರೆ. ಇದರಿಂದ ಅವರ ವ್ಯವಹಾರಗಳು ಚೆನ್ನಾಗಿ ಆಗಲೆಂದು ಈ ರೀತಿಯಾಗಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡುತ್ತಿಲ್ಲ. ಚಿತ್ರಮಂದಿರದಲ್ಲಿ ಸದ್ಯಕ್ಕೆ ಇರುವ ಶೇಕಡ ಐವತ್ತರಷ್ಟು ಅವಕಾಶವನ್ನು ಶೇಕಡ ಇಪ್ಪತೈದಕ್ಕೆ ಇಳಿಸಿದರು ಕೂಡ ನಾವು ಓಟಿಟಿ ಫ್ಲಾಟ್ ಫಾರ್ಮ್ ಗೆ ನಮ್ಮ ಸಿನಿಮಾವನ್ನು ಮಾರಾಟ ಮಾಡುವುದಿಲ್ಲ. ಚಿತ್ರಮಂದಿರದಲ್ಲಿಯೇ ನಮ್ಮ ರಾಬರ್ಟ್ ಸಿನಿಮಾ ಬಿಡುಗಡೆ ಮಾಡುತ್ತೇವೆ, ಇದೇ ಶಿವರಾತ್ರಿ ಮಾರ್ಚ್ 18ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆ ಇದೆ ಈಗಾಗಲೇ ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದು ದರ್ಶನ್ ಮಾಹಿತಿ ನೀಡಿದ್ದಾರೆ.

%d bloggers like this: