ಭಾರತಕ್ಕೆ ಬರುತ್ತಿದೆ ಬರೋಬ್ಬರಿ 580 ಕಿಮೀ ಮೈಲೇಜ್ ಕೊಡುವ ಅಮೆರಿಕಾದ ದೈತ್ಯ ಕಾರು

ನಮ್ಮ ದೇಶದ ಜನಸಂಖ್ಯೆ ವಿಶ್ವದ ಜನಸಂಖ್ಯೆಯ ಶೇಕಡ 16 ರಷ್ಟಿದ್ದು ಇಲ್ಲಿನ ಜನರ ಬೇಡಿಕೆಗಳು ಸಹ ಅಷ್ಟೇ ಹೆಚ್ಚಾಗಿವೆ. ಹೀಗಾಗಿ ವಿಶ್ವದ ಎಲ್ಲಾ ದೇಶಗಳ ವಿವಿಧ ಕ್ಷೇತ್ರದ ಉದ್ಯಮಗಳು ಭಾರತೀಯ ಜನರನ್ನು ಮುಖ್ಯವಾಗಿ ಪರಿಗಣಿಸಿ ತಮ್ಮ ವಸ್ತುಗಳನ್ನು ಉತ್ಪಾದಿಸುತ್ತವೆ. ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗುವ ಶಕ್ತಿಯನ್ನು ಬಳಸಿಕೊಂಡು ಉತ್ಪಾದನೆಯಾಗುವ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮುಂದೊಂದು ದಿನ ಡೀಸೆಲ್ ಪೆಟ್ರೋಲ್ ನಂತಹ ಇಂಧನಗಳು ಭೂಮಿಯ ಮೇಲೆ ಸಂಪೂರ್ಣವಾಗಿ ಖಾಲಿಯಾಗಲಿವೆ.

ಅದಕ್ಕಾಗಿ ಈಗಿನಿಂದಲೇ ಪರ್ಯಾಯ ವಿಧಾನಗಳ ಮೊರೆಹೋಗಲು ಬಯಸುತ್ತಿದೆ ನಮ್ಮ ಜನ. ಅದರಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಪ್ರಮುಖ ಕ್ರಾಂತಿಯನ್ನು ಎನ್ನಬಹುದು. ನಮ್ಮ ಭಾರತದ ಕಾರು ಮಾರುಕಟ್ಟೆ ದಿನದಿಂದ ದಿನಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಜನರ ಬೇಡಿಕೆಗಳಿಗೆ ತಕ್ಕಂತೆ ಬಗೆಯ ಬಗೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಸುದ್ದಿಮಾಡಿದ ಕಾರು ತಯಾರಿಕಾ ಘಟಕ ಎಂದರೆ ಅದು ಎಲಾನ್ ಮಾಸ್ಕ ಒಡೆತನದ ಟೆಸ್ಲಾ.

ಈ ಟೆಸ್ಲಾ ಕಂಪನಿ ಇದೀಗ ಭಾರತದಲ್ಲಿ ತನ್ನ ಘಟಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು ಇದೇ ಜನವರಿಯಿಂದಲೇ ಭಾರತದಲ್ಲಿ ಬುಕಿಂಗ್ ಆರಂಭವಾಗಲಿದೆ. ಬಹುಶಃ ಜನವರಿ ತಿಂಗಳಲ್ಲಿ ಬುಕ್ಕಿಂಗ್ ಮಾಡಿದವರಿಗೆ ಮೂರು ನಾಲ್ಕು ತಿಂಗಳಲ್ಲಿ ಕಾರುಗಳ ಲಭ್ಯವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಮೊದಲಿಗೆ ಟೆಸ್ಲಾ ಕಂಪನಿಯು ಮಾಡೆಲ್ ಮೂರನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಇದೇ ಮೊದಲ ಬಾರಿಗೆ ಟೆಸ್ಲಾ ಕಂಪನಿಯು ಭಾರತಕ್ಕೆ ಲಗ್ಗೆ ಇಡುತ್ತಲಿದ್ದು ಅದರ ಉತ್ಪಾದನಾ ಘಟಕ ಎಲ್ಲಿ ಆಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಈಗ ಟೆಸ್ಲಾ ಪರಿಚಯಿಸುತ್ತಿರುವ ಮೂರನೇ ಮಾಡೆಲ್ ತುಂಬಾ ವಿಶೇಷತೆಗಳಿಂದ ಕೂಡಿದ್ದು ಇದರ ಬೆಲೆ 55 ಲಕ್ಷ ರೂಗಳು ಎನ್ನಲಾಗಿದೆ. ಒಮ್ಮೆ ಇದನ್ನು ಚಾರ್ಜ್ ಮಾಡಿದರೆ 380 ರಿಂದ 550 ಕಿಲೋ ಮೀಟರ್ ಗಳವರೆಗೆ ಮೈಲೇಜ್ ನೀಡುತ್ತದೆ ಎನ್ನಲಾಗುತ್ತಿದೆ. ಈ ಮೊದಲು ಒಂದು ಟೆಸ್ಲಾ ಕಾರನ್ನು ಖರೀದಿಸಲು ವರ್ಷಗಟ್ಟಲೆ ಕಾಯಬೇಕಾಗಿತ್ತು ಆದರೆ ಕಂಪನಿಯು 2021 ರಿಂದ ಭಾರತದಲ್ಲಿಯೇ ಬುಕ್ಕಿಂಗ್ ಆರಂಭಿಸಿದ್ದು ಕಾರು ಪ್ರಿಯರಿಗೆ ಬಹಳ ಅನುಕೂಲಕಾರಿ ಆಗಲಿದೆ.

%d bloggers like this: