ಭಾರತ ಸರ್ಕಾರ ಪರಿಸರ ಸಂರಕ್ಷಣೆಗಾಗಿ ವಾಯುಮಾಲಿನ್ಯ ತಡೆಗಟ್ಟಬೇಕು ಎಂಬ ಉದ್ದೇಶದಿಂದ ದೇಶದಲ್ಲಿ ಇನ್ನು ಮುಂದೆ ಇಂಧನ ಸಹಿತ ವಾಹನಗಳನ್ನು ಆದಷ್ಟು ಕಡಿಮೆ ಮಾಡಿ ವಿದ್ಯೂಚ್ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಬೇಕು ಎಂಬ ಸದುದ್ದೇಶದಿಂದ ಮೋದಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಿದವರಿಗೆ ಸಹಾಯಧನ ನೀಡುವಂತಹ ಒಂದಷ್ಟು ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿತು. ಇದರ ಬಳಿಕ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮತ್ತು ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಅದರ ಪರಿಣಾಮ ಭಾರತ ಮತ್ತು ಇತರೆ ಹೊರ ದೇಶದ ಅನೇಕ ದ್ವಿಚಕ್ರ ಮತ್ತು ಕಾರು ವಾಹನ ತಯಾರಿಕಾ ಕಂಪನಿಗಳು ಕೂಡ ಇಂಧನ ರಹಿತ ವಾಹನಗಳ ತಯಾರಿಕೆ ಮಾಡಲು ಉತ್ಸುಕರಾಗಿದ್ದಾರೆ.

ಅದರಂತೆ ಭಾರತದಲ್ಲಿಯೂ ಕೂಡ ಅತಿ ವೇಗದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದಂತಹ ಬ್ರಾಂಡ್ ಹೊಂದಿರುವಂತಹ ಬ್ರಿಟಿಷ್ ಬ್ರಾಂಡ್ ಒನ್ ಮೋಟೋ ಸಂಸ್ಥೆಯು ಕೂಡ ದ್ವಿಚಕ್ರ ಎಲೆಕ್ಟ್ರಿಕ್ ವಾಹನವನ್ನು ತಯಾರಿಸುವುದಾಗಿ ತಿಳಿಸಿತ್ತು. ಅದರಂತೆ ಇದೀಗ ಬ್ರಿಟಿಷ್ ಮಾದರಿಯ ಎಲೆಕ್ಟಾ ಒನ್ ಮೋಟೋ ಐ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರನ್ನು ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಶೋರೂಂ ಬೆಲೆಯೂ 2 ಲಕ್ಷ ರೂ.ಗಳದ್ದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದರಲ್ಲಿ ಒಂದು ಬಾರಿ ಬ್ಯಾಟರಿ ಚಾರ್ಜಿಂಗ್ ಮಾಡಿದರೆ ಸರಿ ಸುಮಾರು 150 ಕಿಲೋ ಮೀಟರ್ ನಷ್ಟು ದೂರ ಕ್ರಮಿಸಬಹುದಾಗಿದೆ.



ಇನ್ನು ಈ ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೂರು.ಕಿ.ಮೀ ವೇಗದಲ್ಲಿ ಚಲಿಸಬಹುದಾದ ಸಾಮರ್ಥ್ಯವೊಂದಿದೆ. ಇನ್ನು ಈ ಬ್ರಿಟೀಷ್ ಬ್ರ್ಯಾಂಡ್ ಒನ್ ಮೋಟೋ ಕಂಪನಿಯು ಕಳೆದ ನವಂಬರ್ ತಿಂಗಳಿನಲ್ಲಿ ಕಂಪ್ಯೂಟ್ ಮತ್ತು ಬೈಕಾ ಎಂಬ ಎರಡು ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿತ್ತು. ಇದು ಮೂರನೇ ವಾಹನವಾಗಿದೆ. ಈ ಎಲೆಕ್ಟಾ ಐ ಸ್ಪೀಡ್ ಎಲೆಕ್ಟ್ರೀಕ್ ಸ್ಕೂಟರ್ ಬರೋಬ್ಬರಿ 150 ಕಿಲೋ ಮೀಟರ್ ಸಾಮರ್ಥ್ಯ ಹೊಂದಿರುವ ದೇಶದ ಮೊಟ್ಟ ಮೊದಲ ಸ್ಕೂಟರ್ ಎಂಬ ಕೀರ್ತಿಗೆ ಪಾತ್ರವಾಗಿದೆ.



ಈ ಸ್ಕೂಟರನ್ನು ವಿಶೇಷವಾದ ಫೀಚರ್ ಗಳನ್ನು ನೋಡುವುದಾದರೆ 4k w Qs ಬ್ರಶ್ಲೆಸ್ ಡಿಸಿ ಹಬ್ ಮೋಟರ್ ಹೊಂದಿದೆ. ಈ ಸ್ಕೂಟರಿನ ಹೊರ ವಿನ್ಯಾಸವೂ ಹಳೆಯ ಕಾಲದಲ್ಲಿ ಬ್ರಿಟೀಷರು ಬಳಸಲಾಗುತ್ತಿದ್ದ ಸ್ಕೂಟರ್ ನಂತಿದ್ದು ಆಕರ್ಷಕವಾಗಿವೆಯಂತೆ. ಸದ್ಯಕ್ಕೆ ಈ ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ಹೈದರಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಮಳಿಗೆ ಹೊಂದಿದ್ದು ಅತೀ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕೂಡ ಮಳಿಗೆ ತರೆಯಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಒಟ್ಟಾರೆಯಾಗಿ ಈ ಸ್ಕೂಟರ್ ಆಟೋಮೊಬೈಲ್ ಕ್ಷೇತ್ರದಲ್ಲಿ ಸಡ್ಡು ಮಾಡಲಿದ್ದಾರೆ ಎನ್ನಲಾಗುತ್ತಿದೆ.